Belagavi News In Kannada | News Belgaum

ಮತದಾನ ಮಾಡಲು ಆಂಬುಲೆನ್ಸ್ ನಲ್ಲಿ ಬಂದ ಕ್ಯಾನ್ಸರ್ ಪೀಡಿತ ಬಿಜೆಪಿ ಶಾಸಕಿ

ಮುಂಬೈ: ಕ್ಯಾನ್ಸರ್ ನಿಂದ ಬಳಲುತ್ತಿರುವ ಮಹಾರಾಷ್ಟ್ರದ ಬಿಜೆಪಿ ಶಾಸಕಿ ಮುಕ್ತಾ ತಿಲಕ್ ಅವರು ರಾಜ್ಯಸಭಾ ಚುನಾವಣೆಗೆ ಮತ ಚಲಾಯಿಸಲು ಆಯಂಬುಲೆನ್ಸ್‌ನಲ್ಲಿ ಆಗಮಿಸಿದರು.

ಅವರನ್ನ ಸ್ಟ್ರೆಚರ್‌ನಲ್ಲಿ ಹೊರತಂದು ಮತಗಟ್ಟೆಗೆ ಕರೆದೊಯ್ಯಲಾಯಿತು. ಚುನಾವಣಾ ಆಯೋಗವು ಶಾಸಕಿ ಮುಕ್ತಾ ತಿಲಕ್ ಅವರ ಪತಿ ಶೈಲೇಶ್ ಶ್ರೀಕಾಂತ್ ತಿಲಕ್ ಅವರು ಮತ ಚಲಾಯಿಸುವ ಸಂದರ್ಭದಲ್ಲಿ ಹಾಜರಿರಲು ಅವಕಾಶ ನೀಡಿತು. ಮುಕ್ತಾ ತಿಲಕ್ ಅವರು ಪುಣೆಯ ಕಸ್ಬಾ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ.///////