ನಾಡಪಿಸ್ತೂಲು ಇಟ್ಟುಕೊಂಡಿದ್ದ ರೌಡಿ ಬಂಧನ: 5 ಜೀವಂತ ಗುಂಡುಗಳ ಜಪ್ತಿ

ಬೆಂಗಳೂರು: ಎದುರಾಳಿಯನ್ನು ಕೊಲೆ ಮಾಡಲು ಪಿಸ್ತೂಲು ಇಟ್ಟುಕೊಂಡು ತಿರುಗಾಡುತ್ತಿದ್ದ ರೌಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿ ನಾಡಪಿಸ್ತೂಲು ಹಾಗೂ ಐದು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಪುಲಿಕೇಶಿನಗರ ಪೊಲೀಸ್ ಠಾಣೆಯ ರೌಡಿ ಸಯ್ಯದ್ ಸುಬಾನ್ ಬಂಧಿತ ಆರೋಪಿ.
ಈತನ ವಿರುದ್ಧ ಕೆಜಿ ಹಳ್ಳಿ ಪೊಲೀಸ್ ಠಾಣೆಯ ಒಂದು ಕೊಲೆ ಪ್ರಕರಣ, ಪುಲಿಕೇಶಿನಗರ ಠಾಣೆಯ ಕೊಲೆ ಯತ್ನ, ಡಿಜೆ ಹಳ್ಳಿ ಠಾಣೆಯ ಕಳ್ಳತನ ಪ್ರಕರಣ ಹಾಗೂ ಒಂದು ದರೋಡೆ, ಹೆಬ್ಬಾಳ ಪೊಲೀಸ್ ಠಾಣೆಯ ದರೋಡೆ ಪ್ರಕರಣ ದಾಖಲಾಗಿ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿದೆ.
ಆರೋಪಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದು, 4 ಪ್ರಕರಣಗಳಲ್ಲಿ ನ್ಯಾಯಾಲಯಗಳು ವಾರೆಂಟ್ಗಳನ್ನು ಹೊರಡಿಸಿರುತ್ತವೆ.
ನಿನ್ನೆ ಸಂಜೆ ಆದರ್ಶ ನಗರ ಮುಖ್ಯರಸ್ತೆಯ 6ನೆ ಕ್ರಾಸ್ ರಸ್ತೆಯಲ್ಲಿರುವ ಶ್ರೀ ರಾಘವೇಂದ್ರ ಸರ್ವೀಸ್ ಸ್ಟೇಷನ್ ಹತ್ತಿರ ತನ್ನೊಂದಿಗೆ ನಾಡಪಿಸ್ತೂಲು ಹಾಗೂ ಐದು ಜೀವಂತ ಗುಂಡುಗಳೊಂದಿಗೆ ಸಜ್ಜಾಗಿ ಎದುರಾಳಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲು ಹೊಂಚು ಹಾಕುತ್ತಿದ್ದ ಈತನನ್ನು ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ಬಂಸಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ./////