ಬೈಲಹೊಂಗಲದಲ್ಲಿ ಮತದಾನ ವೇಳೆಯೂ ಹಣ ಹಂಚಿಕೆ

ಬೆಳಗಾವಿ: ಬೈಲಹೊಂಗಲ ಪಟ್ಟಣದಲ್ಲಿ ಸೋಮವಾರ ಮತದಾನ ವೇಳೆಯೂ ಹಣ ಹಂಚುತ್ತಿದ್ದ ಕೆಲವು ರಾಜಕೀಯ ಮುಖಂಡರು ಹಾಗೂ ಹಣಕ್ಕಾಗಿ ಮುಗಿಬಿದ್ದದ್ದ ಕೆಲವು ಮತದಾರರನ್ನು ಪೊಲೀಸರು ಚದುರಿಸಿದರು.
ಇಲ್ಲಿನ ರಾಣಿ ಚನ್ನಮ್ಮನ ಸಮಾಧಿ ರಸ್ತೆ ಪಕ್ಕದಲ್ಲಿರುವ ರಾಷ್ಟ್ರೀಯ ಪಕ್ಷವೊಂದರ ಕಚೇರಿಯಲ್ಲಿ ಮುಖಂಡರು ರಾಜಾರೋಷವಾಗಿ ಹಣ ಹಂಚುತ್ತಿದ್ದರು. ಇದನ್ನು ಕಂಡು ವಿರೋಧಿ ಗುಂಪಿನ ಕೆಲವರು ಚುನಾವಣಾಧಿಕಾರಿಗೆ ಮಾಹಿತಿ ನೀಡಿದರು. ಇದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.
ವಿಷಯ ತಿಳಿದು ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಬಸವರಾಜ ನಾಗರಾಳ, ಡಿವೈಎಸ್ಪಿ ಶಿರವಾನಂದ ಕಟಗಿ, ಸಿಪಿಐ ಯು.ಎಚ್.ಸಾತೇನಹಳ್ಳಿ ದಾಳಿ ನಡೆಸಿದರು. ಈ ವಿಷಯದ ಕುರಿತು ಪರಿಶೀಲಿಸಿದ ನಂತರ ಮಾಹಿತಿ ನೀಡುವುದಾಗಿ ಚುನಾವಣಾಧಿಕಾರಿಗಳು ಪ್ರತಿಕ್ರಿಸಿದ್ದಾರೆ.//////