Belagavi News In Kannada | News Belgaum

ಎಮ್ಮೆಯ ಮಾಲೀಕತ್ವಕ್ಕೆ ಜಟಾಪಟಿ: ನ್ಯಾಯ ಒದಗಿಸಲು ಡಿಎನ್‌ಎ ಪರೀಕ್ಷೆಗೆ ಮುಂದಾದ ಪೊಲೀಸರು

ಉತ್ತರ ಪ್ರದೇಶ: ಎಮ್ಮೆಯೊಂದರ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳ ನಡುವೆ ಜಟಾಪಟಿ ಉಂಟಾಗಿದ್ದು, ವಾದ-ಪ್ರತಿವಾದಗಳಿಗೆ ನ್ಯಾಯ ಒದಗಿಸಲು ಪೊಲೀಸ್ ಅಧಿಕಾರಿಗಳು ಎಮ್ಮೆಯ ಡಿಎನ್‌ಎ ಪರೀಕ್ಷೆಗೆ ಆದೇಶ ನೀಡಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಅಹ್ಮದ್ಗಢ ಗ್ರಾಮದಲ್ಲಿ ನಡೆದಿದೆ.

ಕಳುವಾಗಿರುವ ಎಮ್ಮೆಯನ್ನು ನನ್ನದು ಎಂದು ಒಬ್ಬರು ಹೇಳಿದರೆ, ಇದು ನಮ್ಮ ಕೊಟ್ಟಿಗೆಯಲ್ಲಿಯೇ ಹುಟ್ಟಿ ಬೆಳೆದ ಕರು ಎಂದು ಇನ್ನೊಬ್ಬರು ವಾದಿಸುತ್ತಿದ್ದಾರೆ. ಈ ಎಲ್ಲಾ ವಾದ-ಪ್ರತಿವಾದಗಳಿಗೆ ನ್ಯಾಯ ಒದಗಿಸಲು ಪೊಲೀಸ್ ಅಧಿಕಾರಿಗಳು ಎಮ್ಮೆಯ ಡಿಎನ್‌ಎ ಪರೀಕ್ಷೆಗೆ ಆದೇಶ ನೀಡಿದ್ದಾರೆ.
ಏನಿದು ಪ್ರಕರಣ?
ಚಂದ್ರಪಾಲ್ ಕಶ್ಯಪ್ ಅವರು ಉತ್ತರ ಪ್ರದೇಶದ ಶಾಮಿಲ್ ಜಿಲ್ಲೆಯ ಅಹ್ಮದ್ಗಢ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಆಗಸ್ಟ್ 25, 2020ರಂದು, ಚಂದ್ರಪಾಲ್ ಕಶ್ಯಪ್ ಅವರು ತಮ್ಮ ಕೊಟ್ಟಿಗೆಯಿಂದ ಮೂರು ವರ್ಷದ ಎಮ್ಮೆಯನ್ನು ಕದ್ದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದರು. ಆದರೆ ಅವರು ಅದೇ ವರ್ಷದ ನವೆಂಬರ್ನಲ್ಲಿ ಶರೋನ್ಪುರ ಜಿಲ್ಲೆಯ ಬೀನ್ಪುರ ಗ್ರಾಮದಲ್ಲಿ ತಮ್ಮ ಎಮ್ಮೆಯನ್ನು ಗುರುತಿಸಿದ್ದರು. ಆದರೆ ಅದರ ಮಾಲೀಕ ಸತ್ಬೀರ್ ಸಿಂಗ್ ಎಂಬಾತ ಅದು ತನ್ನ ಎಮ್ಮೆ ಯಾವುದಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ನಿಮಗೆ ಹಸ್ತಾಂತರಿಸುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾನೆ.
ಕಶ್ಯಪ್ ದೂರು ನೀಡಿದ ಬಳಿಕ ಅದೇ ಸಮಯದಲ್ಲಿ ಕೊರೊನಾ ಸಂಭವಿಸಿತು. ಹೀಗಾಗಿ ಈ ಪ್ರಕರಣವನ್ನು ಪೊಲೀಸರು ಕೈಬಿಟ್ಟಿದ್ದರು. ಆದರೆ ಇದೀಗ ಮತ್ತೆ ಜೀವ ಪಡೆದುಕೊಂಡ ಪ್ರಕರಣವನ್ನು ಶಾಮ್ಲಿ ಎಸ್ಪಿ ಸುಕೃತಿ ಮಾಧವ್ ಅವರು ಕೈಗೆತ್ತಿಕೊಂಡಿದ್ದಾರೆ. ಎಮ್ಮೆಯ ನಿಜವಾದ ಮಾಲೀಕನನ್ನು ಗುರುತಿಸಲು ಶರೋನ್ಪುರದಲ್ಲಿ ಕಶ್ಯಪ್ ಜೊತೆಗಿದೆ ಎನ್ನಲಾದ ಬರ್ರೆಕಿ (ಪತ್ತೆಯಾದ ಎಮ್ಮೆಯ ತಾಯಿ) ಮತ್ತು ಸತ್ಪೀರ್ ಸಿಂಗ್ ಅವರ ಬಳಿ ಇರುವ ದುನ್ನಪೋತು ಎಂಬ ಹೆಸರಿನ ಎಮ್ಮೆಯ ಡಿಎನ್‌ಎ ಪರೀಕ್ಷೆಯನ್ನು ಮಾಡಿಸುವಂತೆ ಆದೇಶಿಸಿದ್ದಾರೆ.
ಪ್ರಕರಣದ ಬಗ್ಗೆ ಮಾತನಾಡಿದ ಶಾಮ್ಲಿ ಎಸ್ಪಿ ಸುಕೃತಿ ಮಾಧವ್ “ಆ ಎಮ್ಮೆಯ ನಿಜವಾದ ಮಾಲೀಕರು ಯಾರೆಂದು ತಿಳಿಯುವುದು ನಿಜವಾಗಿಯೂ ಸವಾಲಾಗಿದೆ. ಆದರೆ ಕಶ್ಯಪ್ ತಾನು ಕರುವಿನ ತಾಯಿಯನ್ನು ಹೊಂದಿದ್ದೇನೆ ಎಂದು ಹೇಳಿಕೊಂಡಿದ್ದರಿಂದ ನಾವು ಡಿಎನ್‌ಎ ಪರೀಕ್ಷೆಗೆ ಹೋಗಲು ನಿರ್ಧರಿಸಿದ್ದೇವೆ” ಎಂದು ಶಾಮ್ಲಿ ಎಸ್ಪಿ ಸುಕೃತಿ ಮಾಧವ್ ತಿಳಿಸಿದರು.
ಪ್ರಕರಣದ ತನಿಖಾಧಿಕಾರಿ ಅರುಣ್ ಕುಮಾರ್ ಮಾತನಾಡಿ, ಜಾನುವಾರುಗಳಿಗೆ ಡಿಎನ್‌ಎ ಪರೀಕ್ಷೆ ಮಾಡುವುದು ಬಹಳ ಅಪರೂಪ. ಅಂತಹ ಪರೀಕ್ಷೆಗೆ ಉತ್ತರ ಪ್ರದೇಶದಲ್ಲಿ ಯಾವುದೇ ಲ್ಯಾಬ್ ಇಲ್ಲ. ಪಶುಸಂಗೋಪನಾ ಇಲಾಖೆಯವರು ಮತ್ತು ಪಶುವೈದ್ಯರು ತಾಯಿ ಎಮ್ಮೆ ಮತ್ತು ಕರುವಿನ ಡಿಎನ್‌ಎ ಮಾದರಿಗಳನ್ನು ತೆಗೆದುಕೊಂಡು ದೆಹಲಿ ಅಥವಾ ಗುಜರಾತ್ ಲ್ಯಾಬ್ಗೆ ಪರೀಕ್ಷಿಸಲು ಕಳಿಸುತ್ತೇವೆ ಎಂದಿದ್ದಾರೆ.//////