Belagavi News In Kannada | News Belgaum

ಬಿ.ವಿ. ಶ್ರೀನಿವಾಸ್ ಗೆ ರನ್ನಿಂಗ್ ರೇಸ್ ನಲ್ಲಿ ಉಜ್ವಲ ಭವಿಷ್ಯವಿದೆ: ಸಿ.ಟಿ.ರವಿ ವ್ಯಂಗ್ಯ

ಬೆಂಗಳೂರು: ದೆಹಲಿಯ ಜಾರಿ ನಿರ್ದೇಶನಾಲಯದ ಕಚೇರಿಗಳ ಹೊರಗೆ ಕಾಂಗ್ರೆಸ್ ಬೆಂಬಲಿಗರಿಂದ ಉಂಟಾದ ಗದ್ದಲದ ನಂತರ ಪೊಲೀಸ್‌ ಬಂಧನದಿಂದ ತಪ್ಪಿಸಿಕೊಳ್ಳಲು ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಓಡಿಹೋಗಿದ್ದಾರೆ ಈ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ ರವಿ ಮಾತನಾಡಿ ಬಿ.ವಿ ಶ್ರೀನಿವಾಸ್‌ ಅವರಿಗೆ ಉಜ್ವಲ ಭವಿಷ್ಯವಿದೆ.
ಆದರೆ ರಾಜಕಾರಣದಲ್ಲಿ ಅಲ್ಲ ರನ್ನಿಂಗ್‌ ರೇಸ್‌ನಲ್ಲಿ ನಾನು ನೋಡ್ತಾ ಇದ್ದೆ , ಕ್ಷಣಮಾತ್ರದಲ್ಲಿ ಮಿಂಚಿನ ಓಟ ಯಾವುದಾದ್ರೂ ಅಥ್ಲೆಟಿಕ್ಸ್‌ಗೆ ಹೋದರೆ ಪ್ರಶಸ್ತಿ ಖಂಡಿತ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.
ನಾನು ಚುಳುವಳಿ ಮೂಲಕ ಜೈಲಿಗೆ ಹೋಗಿದ್ದೇನೆ. ಹತ್ತಾರು ಪೊಲೀಸ್‌ ಸ್ಟೇಷನ್‌ ಗಳಲ್ಲಿ ಒದೆ ತಿಂದಿದ್ದೇನೆ ಆದರೆ ಪೊಲೀಸರಿಗೆ ಬೆನ್ನು ತೋರಿಸಿ ಓಡಿ ಹೋಗಿಲ್ಲ ಕಳ್ಳರಿಗೆ ಕಾಂಗ್ರೆಸ್‌ನ ಶ್ರೀನಿವಾಸ್‌ ಮಾದರಿಯಾಗ್ತಾರೆ./////