Belagavi News In Kannada | News Belgaum

ಕರ್ನಾಟಕದ ಕಾಂಗ್ರೆಸ್ ನಾಯಕರನ್ನು ಎಳೆದೊಯ್ದ ದೆಹಲಿ ಪೊಲೀಸ್ : ಉದ್ದೇಶ ಪೂರ್ವಕವಾಗಿ ಕೈ ನಾಯಕರ ಬಲ ಪ್ರಯೋಗ

ಬೆಂಗಳೂರು: ಕರ್ನಾಟಕದ ಹಿರಿಯ ರಾಜಕಾರಣಿಗಳ ಮೇಲೆ ದೆಹಲಿಯಲ್ಲಿ ಪೊಲೀಸರು ಬಲ ಪ್ರಯೋಗ ನಡೆಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವರು ಹಾಗೂ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾದ ಎಚ್.ಕೆ.ಪಾಟೀಲ್, ದಿನೇಶ್ ಗುಂಡುರಾವ್ ಅವರೊಂದಿಗೆ ದೆಹಲಿ ಪೊಲೀಸರು ಅಗೌರವವಾಗಿ ನಡೆದುಕೊಂಡಿದ್ದು, ತಳ್ಳಾಟ ನೂಕಾಟ ನಡೆಸಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ಎರಡನೇ ದಿನವೂ ವಿಚಾರಣೆ ನಡೆಸುತ್ತಿದೆ. ಇದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ದೆಹಲಿಯಲ್ಲೂ ಕಾನೂನು ಸುವಸ್ಥೆ ಕಾವೇರಿದ್ದು, ಪ್ರತಿಭಟನೆಗೆ ಆಗಮಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸುತ್ತಿದ್ದಾರೆ.

ಇಂದು ಬೆಳಗ್ಗೆ ದೆಹಲಿಯಲ್ಲಿ ಕಾಂಗ್ರೆಸ್ ಕಚೇರಿಗೆ ಹೋಗುತ್ತಿದ್ದ ಡಿ.ಕೆ.ಸುರೇಶ್ ಮತ್ತು ಹಿರಿಯ ನಾಯಕರನ್ನು ಪೊಲೀಸರು ತಡೆದಿದ್ದಾರೆ. ಯಾವ ಕಾನೂನಿನಲ್ಲಿ ನಮ್ಮನ್ನು ತಡೆದಿದ್ದೀರಾ, ಯಾವ ಆದೇಶ ಇದೆ ಕೊಡಿ. ಹಿರಿಯ ಅಧಿಕಾರಿಗಳನ್ನು ಕರೆಯಿರಿ ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದು ಸುರೇಶ್ ಹೇಳಿದ್ದಾರೆ.

ಸಂಸದರು ಅವರು ತಮ್ಮ ಗುರುತಿನ ಕಾರ್ಡ್ ತೋರಿಸಿ ಬಳಿಕವೂ ಪೊಲೀಸರು ಕ್ಯಾರೆ ಎನ್ನದೆ ಬಲಪ್ರಯೋಗ ನಡೆಸಿದ್ದಾರೆ. ಕಾನ್ಸಟೆಬಲ್ ಒಬ್ಬರು ಸಂಸದರನ್ನು ಅವರನ್ನು ತಳ್ಳುವ ಮೂಲಕ ಬಲವಂತವಾಗಿ ವ್ಯಾನ್‍ಗೆ ಹತ್ತಿಸಿದ್ದಾರೆ. ಈ ವೇಳೆ ಸುರೇಶ್ ಅವರು ಕೇಂದ್ರ ಸರ್ಕಾರದ ದೌರ್ಜನ್ಯದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸಂಸದ ಡಿ.ಕೆ.ಸುರೇಶ್ ಮತ್ತು ತಮಿಳುನಾಡಿನ ಸಂಸದರಾದ ವಿಷ್ಣು ಪ್ರಸಾದ್ ಅವರು ನಮ್ಮ ಜೊತೆಯಾದರು. ಸುರೇಶ್ ಅವರು ತಮ್ಮ ಗುರುತಿನ ಚೀಟಿ ತೋರಿಸಿ ನಾನು ಸಂಸದ, ನನಗೆ ಒಳಗೆ ಹೋಗಲು ಬಿಡಿ ಎಂದು ಕೇಳಿ ಕೊಂಡರು. ಆದರೂ ಪೊಲೀಸರು ಸ್ಪಂದಿಸಲಿಲ್ಲ. ಬದಲಾಗಿ ಒರಟಾಗಿ , ಅಗೌರವಯುತವಾಗಿ ವರ್ತಿಸಿದ್ದಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ./////