Belagavi News In Kannada | News Belgaum

ನೀರಜ್​ ಚೋಪ್ರಾ ಜಾವೆಲಿನ್​ ಎಸೆತದಲ್ಲಿ ಇದೀಗ ಮತ್ತೊಂದು ಸಾಧನೆ

ಫಿನ್​​ಲ್ಯಾಂಡ್​ : ಒಲಿಂಪಿಕ್​​​ನಲ್ಲಿ ಚಿನ್ನದ ಪದಕವನ್ನು ಗೆದ್ದಿರುವ ನೀರಜ್​ ಚೋಪ್ರಾ ಜಾವೆಲಿನ್​ ಎಸೆತದಲ್ಲಿ ಇದೀಗ ಮತ್ತೊಂದು ಸಾಧನೆಯನ್ನು ಮಾಡಿದ್ದಾರೆ. ಫಿನ್​ಲ್ಯಾಂಡ್​ನಲ್ಲಿ ನಡೆಯುತ್ತಿರುವ ಪಾವೊ ನೂರ್ಮಿ ಕ್ರೀಡಾಕೂಟದಲ್ಲಿ ಚಿನ್ನದ ಹುಡುಗ ನೀರಜ್​ ಚೋಪ್ರಾ ದಾಖಲೆಯ ಜಾವೆಲಿನ್​ ಎಸೆತ ಮಾಡುವ ಮೂಲಕ ಈ ಸ್ಪರ್ಧೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

10 ತಿಂಗಳ ಹಿಂದೆ ನಡೆದಿದ್ದ ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಚಿನ್ನದ ಪದಕವನ್ನು ಸಂಪಾದಿಸಿದ ಬಳಿಕ ಭಾಗವಹಿಸಿದ ಮೊದಲ ಸ್ಪರ್ಧೆ ಇದಾಗಿದ್ದು ಇದರಲ್ಲಿ ನೀರಜ್​​ 2021ರಲ್ಲಿ ಪಟಿಯಾಲದಲ್ಲಿ ನಡೆದಿದ್ದ ಇಂಡಿಯನ್​ ಗ್ರ್ಯಾಂಡ್​ ಪ್ರಿಕ್ಸ್​​ನಲ್ಲಿ ತಾವೇ ಎಸೆದಿದ್ದ 88.07 ಮೀಟರ್​ ದೂರದ ಜಾವೆಲಿನ್​ ಎಸೆತದ ರಾಷ್ಟ್ರೀಯ ದಾಖಲೆಯನ್ನು ಮುರಿಯುವ ಮೂಲಕ 89.30 ಮೀಟರ್​ ದೂರದಲ್ಲಿ ಜಾವೆಲಿನ್​ ಎಸೆದಿದ್ದಾರೆ.

ಫಿನ್​ಲ್ಯಾಂಡ್​​ನ ಒಲಿವರ್​ ಹೆಲ್ಯಾಂಡರ್​​ 89.93 ಮೀಟರ್​ ದೂರದಲ್ಲಿ ಜಾವೆಲಿನ್​ ಎಸೆಯುವ ಮೂಲಕ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. 1999ರಲ್ಲಿ ಅರ್ಕಿ ಪರ್ವಿಯಾನೆನ್​ ಎಂಬವರು ದಾಖಲೆಯ 93.03 ಮೀಟರ್​ ದೂರದಲ್ಲಿ ಜಾವೆಲಿನ್​ ಎಸೆದಿದ್ದಾರೆ.//////