Belagavi News In Kannada | News Belgaum

ನಟ ಸುನಿಲ್ ಶೆಟ್ಟಿ ಮಗಳೊಂದಿಗೆ ಕೆ.ಎಲ್ ರಾಹುಲ್ ಮದುವೆ

ಬೆಂಗಳೂರು: ಆತಿಯಾ ಶೆಟ್ಟಿ ಜತೆ ಕೆ.ಎಲ್ ರಾಹುಲ್ ಹಸೆಮಣೆ ಏರಲಿದ್ದು, ಜರ್ಮನಿಯಲ್ಲಿ ಪ್ರವಾಸ ಬಳಿಕ ಮದುವೆ ಆಗುವ ಸಾದ್ಯತೆಗಳಿವೆ ಎಂದು  ರಾಹುಲ್ ಅವರ ಆಪ್ತಮೂಲಗಳು ತಿಳಿಸಿವೆ.

ಜರ್ಮನಿಯಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿಕೊಂಡು ಬಂದ ನಂತರ 3ರಿಂದ 4 ವಾರಗಳಲ್ಲಿ ರಾಹುಲ್ ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ. ಇದೇ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್  ಟೂರ್ನಿಯಲ್ಲಿ ರಾಹುಲ್ ಆಡಲಿದ್ದಾರೆ. ಅದಕ್ಕೂ ಮೊದಲು ಅಥವಾ ಈ ವರ್ಷಾಂತ್ಯದಲ್ಲಿ ರಾಹುಲ್ ಗೃಹಸ್ಥಾಶ್ರಮಕ್ಕೆ ಕಾಲಿಡುವ ಸಾಧ್ಯತೆಗಳಿವೆ.

30 ವರ್ಷದ ರಾಹುಲ್, ಬಾಲಿವುಡ್ ನಟ ಸುನಿಲ್ ಶೆಟ್ಟಿಯವರ ಮಗಳು ಆತಿಯಾ ಶೆಟ್ಟಿ ಅವರನ್ನು ಪ್ರೀತಿಸುತ್ತಿದ್ದಾರೆ. ಇವರಿಬ್ಬರ ಪ್ರೀತಿಗೆ ಸುನಿಲ್ ಶೆಟ್ಟಿಯವರ ಒಪ್ಪಿಗೆಯೂ ಇದೆ. ಕಳೆದ 3 ವರ್ಷಗಳಿಂದ ರಾಹುಲ್ ಹಾಗೂ ಆತಿಯಾ ಶೆಟ್ಟಿ ಪ್ರೀತಿಸುತ್ತಿದ್ದು, ಈ ವರ್ಷ ಮದುವೆಯಾಗುವ ಸಾಧ್ಯತೆಯಿದೆ . ರಾಹುಲ್ ಬಗ್ಗೆ ಇತ್ತೀಚೆಗೆ ಮಾತನಾಡಿದ್ದ ಸುನಿಲ್ ಶೆಟ್ಟಿ ತಮ್ಮ ಭಾವೀ ಅಳಿಯನ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದರು.

“ನನಗೆ ಆ ಹುಡುಗನೆಂದರೆ ತುಂಬಾ ಇಷ್ಟ. ಇನ್ನು ಅವರಿಬ್ಬರ ಮದುವೆಯ ಬಗ್ಗೆ ಮಾತನಾಡುವುದಾದರೆ, ಅದು ಅವರ ಇಷ್ಟ. ಸಮಯ ಬದಲಾಗಿದೆ. ನನ್ನ ಮಗಳು ಮತ್ತು ಮಗ ಇಬ್ಬರೂ ಜವಾಬ್ದಾರಿಯುತ ವ್ಯಕ್ತಿಗಳು. ಹೀಗಾಗಿ ಮದುವೆಯ ನಿರ್ಧಾರವನ್ನು ಅವರೇ ತೆಗೆದುಕೊಳ್ಳುತ್ತಾರೆ. ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ನನ್ನ ಆಶೀರ್ವಾದ ಇದ್ದೇ ಇರುತ್ತದೆ”.///////