Belagavi News In Kannada | News Belgaum

ಅಗ್ನಿಪಥ ಯೋಜನೆ ನೇಮಕಾತಿ ಸ್ಥಗಿತಕ್ಕೆ ಸಿದ್ದರಾಮಯ್ಯ ಆಗ್ರಹ

ಹುಬ್ಬಳ್ಳಿ: ಕೇಂದ್ರದ ಅಗ್ನಿಪಥ ಯೋಜನೆಗೆ ನಮ್ಮ ವಿರೋಧವಿದೆ. ನಾಲ್ಕು ವರ್ಷದ ಬಳಿಕ ಆಯ್ಕೆಯಾದ ಅಭ್ಯರ್ಥಿಗಳ‌ ಪರಿಸ್ಥಿತಿ ಏನು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವಕರು ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು. ಅದನ್ನು ಬಿಟ್ಟು ಹಿಂಸಾತ್ಮಕ ಕೃತ್ಯಕ್ಕೆ ಮುಂದಾಗಬಾರದು. ಪ್ರತಿಭಟನಾಕಾರರ ಜತೆ ಸರಕಾರ ಮಾತನಾಡಬೇಕು. ಅಗ್ನಿಪಥ ಯೋಜನೆಯ ನೇಮಕಾತಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.

ಛಲವಾದಿ ನಾರಾಯಣಸ್ವಾಮಿ ನನ್ನ ವಿರುದ್ದ ದಾಖಲಿಸಿರುವ ಜಾತಿ ನಿಂದನೆ ಪ್ರಕರಣ ಹಿಂದೆ ಬಿಜೆಪಿಯ ಹುನ್ನಾರವಿದೆ. ಅವರು ನಾರಾಯಣಸ್ವಾಮಿ ಮೂಲಕ ಅದನ್ನು ಮಾಡಿಸಿದ್ದಾರೆ. ನಾನು ಜಾತಿ ನಿಂದನೆ ಮಾಡಿಯೇ ಇಲ್ಲ. ಆದರೆ ಬಿಜೆಪಿಯವರು ಹಳೇ ಚಡ್ಡಿ ಅವರ ಮೇಲೆ ಹೊರಿಸಿದ್ದಾರೆ. ಹಾಗಾದರೆ ಇದು ಏನು? ನಾನು ಲಾಯರ್ ಇದೀನಿ ನನಗೆ ಎಲ್ಲಾ ಗೊತ್ತು ಎಂದರು.//////