ಬೆಳಗಾವಿಯಲ್ಲಿ ಗುಂಡಿನ ಸದ್ದು , ಕ್ರಿಮಿನಲ್ ಗೆ ಗುಂಡು ಹೊಡೆದ ಎಸಿಪಿ ನಾರಾಯಣ ಭರಮನಿ

ಬೆಳಗಾವಿ: ಬೆಳ್ಳಂಬೆಳಿಗ್ಗೆ ಬೆಳಗಾವಿಯಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ಬೆಳಗಾವಿಯ ಉದ್ಯಮಿಯೊಬ್ಬರ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿ ವಿಶಾಲ್ ಸಿಂಗ್ ಚೌವ್ಹಾನ ಮೇಲೆ ಬೆಳಗಾವಿ ಎಸಿಪಿ ನಾರಾಯಣ ಬರಮನಿ ಫೈರಿಂಗ್ ಮಾಡಿದ್ದಾರೆ.
ಕೊಲೆ ಆರೋಪಿ ವಿಶಾಲ್ ಸಿಂಗ್ ಚೌವ್ಹಾನ ಇರುವ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನ ಬಂಧಿಸಲು ತೆರಳಿದ ಎಸಿಪಿ ನಾರಾಯಣ ಬರಮನಿ ಆಂಡ್ ಟೀಂ ಬೈಕ್ ಮೇಲೆ ಪರಾರಿಯಾಗುತ್ತಿದ್ದ ಆರೋಪಿ ವಿಶಾಲ್ ಸಿಂಗ್ ಗೆ ಶರಣಾಗುವಂತೆ ತಿಳಿಸಿದ್ದಾರೆ.
ಈ ವೇಳೆ ಪೋಲಿಸ್ ಪೇದೆಯೊಬ್ಬರ ಮೇಲೆ ಆರೋಪಿ ವಿಶಾಲ್ ಸಿಂಗ್ ಹಲ್ಲೆ ಮಾಡಲು ಮುಂದಾಗುತ್ತಿದ್ದಂತೆ ಎಸಿಪಿ ನಾರಾಯಣ ಬರಮನಿ ವಿಶಾಲ್
ಸಿಂಗ್ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿ, ಆರೋಪಿಯನ್ನ ಬಂಧಿಸಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ನಡೆದ ಉದ್ಯಮಿ ರಾಜು ದೊಡಬೊಮ್ಮನವರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ವಿಶಾಲ್ ಸಿಂಗ್ ಚೌವ್ಹಾನ ಮೇಲೆ ಬೆಳಗಾವಿ, ಮಹಾರಾಷ್ಟ್ರದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಸದ್ಯ ಆರೋಪಿಯನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಿಯಲ್ ಎಸ್ಟೇಟ್ ಉದ್ಯಮಿ ಕೊಲೆಗೆ ಸುಫಾರಿ ಪಡೆದಿದ್ದ ಆರೋಪಿ
ಇಲ್ಲಿಯ ಭವಾನಿ ನಗರದಲ್ಲಿ ಬೆಳಗ್ಗೆ ಕಾರಿನಲ್ಲಿ ಹೊರಟಿದ್ದ ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ(40) ಎಂಬಾತನನ್ನು ಮಾರ್ಚ್ 15ರಂದು ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು, ಕಣ್ಣಿಗೆ ಖಾರದಪುಡಿ ಎರಚಿ, ಚಾಕುವಿನಿಂದ ಇರಿದು, ಕೊಲೆ ಮಾಡಿ ಪರಾರಿಯಾಗಿದ್ದರು. ರಾಜು ಮೂರು ವಿವಾಹವಾಗಿದ್ದನು. ತನ್ನ ಪತಿ ರಾಜುವನ್ನು ಕೊಲ್ಲಲು ಎರಡನೇ ಹೆಂಡತಿ ಕಿರಣ 10 ಲಕ್ಷ ರೂ. ಸುಫಾರಿ ನೀಡಿದ್ದಳು. ಕೊಲೆ ಮಾಡಿಸಲು ವಿಶಾಲಸಿಂಗ್ ಸುಫಾರಿ ಪಡೆದಿದ್ದನು.
ಮಾರ್ಚ್ 15ರಂದು ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನವರ ಎಂಬಾತನ ಕೊಲೆಗೆ ಸುಫಾರಿ ಪಡೆದಿದ್ದ ಆರೋಪ ವಿಶಾಲಸಿಂಗ್ ನ ಮೇಲಿದೆ. ಒಂದು ಕೊಲೆ, ಆರು ಕೊಲೆಗೆ ಯತ್ನ ಪ್ರಕರಣ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ವಿಶಾಲಸಿಂಗ್ ಚವ್ಹಾಣ ಭಾಗಿಯಾಗಿದ್ದಾನೆ. ಖಡೇಬಜಾರ್, ಕ್ಯಾಂಪ್, ಶಹಾಪುರ, ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣಗಳಿವೆ. ಜತೆಗೆ ಮಹಾರಾಷ್ಟ್ರದ ವಿವಿಧ ಠಾಣೆಗಳಲ್ಲಿಯೂ ಈತನ ವಿರುದ್ಧ ಪ್ರಕರಣಗಳಿವೆ.
ಶೀತಲ ಚೌಗುಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪ್ರವೀಣ ಶಿಂತ್ರೆಯನ್ನು 6 ಸೆಪ್ಟೆಂಬರ್ 2007ರಂದು ಬೆಳಗಿನ ಜಾವ ಬೆಳಗಾವಿಯ ಲಕ್ಷ್ಮೀ ನಗರದ ರಾಜದೀಪ ಬಂಗ್ಲೆಯಲ್ಲಿ ಎನ್ಕೌಂಟರ್ ಮಾಡಲಾಗಿತ್ತು. ಈಗ ಅದೇ ರೀತಿಯಲ್ಲಿ ಬೆಳಗಾವಿಯಲ್ಲಿ ಇನ್ನೊಂದು ಗುಂಡಿನ ದಾಳಿ ಆಗಿದ್ದು, ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ನಡುಕ ಹುಟ್ಟಿಸಿದೆ.
ದಾಳಿ ನಡೆಸುವ ವೇಳೆ ನಡೆದ ಮುಖ್ಯಂಶಗಳು
ರೌಡಿಶೀಟರ್ ವಿಶಾಲ್ಸಿಂಗ್ ಚೌಹಾನ್ ಪತ್ತೆಗೆ ಬಲೆ ಬೀಸಿದ್ದ ಪೊಲೀಸರು*
ಕೊಲೆ, ಸುಲಿಗೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ವಿಶಾಲ್ಸಿಂಗ್ ಚೌಹಾನ್
*ಮೂರು ತಂಡ ಮಾಡಿಕೊಂಡು ಕೊಲೆ ಆರೋಪಿಗೆ ಬಲೆ ಬೀಸಿದ್ದ ಪೊಲೀಸರು*
ಎಸಿಪಿ ನಾರಾಯಣ ಭರಮಣಿ, ಇಬ್ಬರು ಸಿಪಿಐ, ಓರ್ವ ಪಿಎಸ್ಐ ತಂಡದಿಂದ ಕಾರ್ಯಾಚರಣೆ
ಖಚಿತ ಮಾಹಿತಿ ಮೇರೆಗೆ ವೀರಭದ್ರ ನಗರದ ಕೋಯ್ಲಾ ಹೋಟೆಲ್ ಬಳಿ ತೆರಳಿದ್ದ ಪೊಲೀಸರು
*ರೌಡಿಶೀಟರ್ ವಿಶಾಲ್ಸಿಂಗ್ ಬಂಧಿಸುವ ವೇಳೆ ಪೇದೆ ಮೇಲೆ ಹಲ್ಲೆ*
ಸಿಸಿಬಿ ಪೊಲೀಸ್ ಪೇದೆ ಯಾಸೀನ್ ನದಾಫ್ ಎಡಗೈ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ
ಪೇದೆ ಯಾಸೀನ್ ನದಾಫ್ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನ
ಈ ವೇಳೆ ಆರೋಪಿ ವಿಶಾಲ್ಸಿಂಗ್ ಮೇಲೆ ಎಸಿಪಿ ನಾರಾಯಣ ಭರಮಣಿ ಫೈರಿಂಗ್
ಆರೋಪಿ ವಿಶಾಲ್ಸಿಂಗ್ ಮೇಲೆ ಕರ್ನಾಟಕ ಮಹಾರಾಷ್ಟ್ರದಲ್ಲಿ 10ಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ವು
ಕಳೆದ ಮೂರು ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ವಿಶಾಲ್ಸಿಂಗ್ ಚೌಹಾನ್
ಪೊಲೀಸ್ ಪೇದೆ ಯಾಸೀನ್ ನದಾಫ್, ರೌಡಿಶೀಟರ್ ವಿಶಾಲ್ಸಿಂಗ್ ಚೌಹಾನ್ ಜಿಲ್ಲಾಸ್ಪತ್ರೆಗೆ ದಾಖಲು
ಮಾರ್ಚ್ 15ರಂದು ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ್ ಹತ್ಯೆಯಾಗಿತ್ತು
ಬೆಳಗಾವಿಯ ಮಂಡೋಳಿ ರಸ್ತೆಯಲ್ಲಿ ನಡೆದಿದ್ದ ಘಟನೆ
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು