ಲಂಚ ಪಡೆಯುವಾಗ ಪಿಡಿಒ, ತಾಪಂ ಮಾಜಿ ಸದಸ್ಯೆ ಪತಿ ಎಸಿಬಿ ಬಲೆಗೆ

ಬಳ್ಳಾರಿ: ಮನೆ ನಿರ್ಮಾಣಕ್ಕೆ ಲೈಸೆನ್ಸ್ ನೀಡಲು 80 ಸಾವಿರ ಲಂಚ ಪಡೆಯುವಾಗ ಬಳ್ಳಾರಿ ತಾಲೂಕಿನ ಶ್ರೀಧರ್ ಗಡ್ಡೆ ಗ್ರಾ.ಪಂ. ಪಿಡಿಒ, ಎಸಿಬಿ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಪಿಡಿಒ ಸಿದ್ದಲಿಂಗಪ್ಪ ಎಸಿಬಿ ಬಲೆಗೆ ಬಿದ್ದಿದ್ದಾರೆ. ಇವರನ್ನು ರೆಡ್ಹ್ಯಾಂಡ್ ಆಗಿ ಹಿಡಿಯಲಾಗಿದೆ. ಪಿಡಿಒ ಜೊತೆ ಈ ಹಗರಣದಲ್ಲಿ ಭಾಗಿಯಾಗಿರುವ ಆರೋಪ ಹೊತ್ತ ಬಳ್ಳಾರಿಯ ಗುಡಾರ್ ನಗರದ ತಾಪಂ ಮಾಜಿ ಸದಸ್ಯೆ ಮಹಾಲಕ್ಷ್ಮಿ ಪತಿ ಜಂಬಣ್ಣ ಕೂಡ ಬಲೆಗೆ ಬಿದ್ದಿದ್ದಾರೆ.
ನಾಗಾರ್ಜುನ್ ಎನ್ನುವವರ ಮನೆ ನಿರ್ಮಾಣಕ್ಕೆ ಪರವಾನಗಿ ನೀಡಲು ಸಿದ್ದಲಿಂಗಪ್ಪ 80 ಸಾವಿರ ಲಂಚ ಕೇಳಿದ್ದರು. ಜಂಬಣ್ಣ ಮೂಲಕ ಡೀಲ್ ಮಾಡಲಾಗಿತ್ತು. ಈ ಬಗ್ಗೆ ನಾಗಾರ್ಜುನ್ ಅವರು ಎಸಿಬಿಗೆ ದೂರು ದಾಖಲು ಮಾಡಿದ್ದರು. ಮೊದಲೇ ಯೋಜನೆ ರೂಪಿಸಿರುವಂತೆ ಲಂಚ ಪಡೆಯುವ ವೇಳೆ ಎಸಿಬಿ ಟ್ರ್ಯಾಪ್ ಮಾಡಿ ಬಲೆಗೆ ಬೀಳಿಸಿದೆ. ಇಬ್ಬರನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ.//////