Belagavi News In Kannada | News Belgaum

ಅಕ್ರಮ ತಂಬಾಕು ಮಾರಾಟ: ಅಧಿಕಾರಿಗಳು ದಾಳಿ ನಡೆಸಿ 15 ಕೇಸ್ ದಾಖಲು

ಬೆಳಗಾವಿ,ಜೂನ್21: ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆಯ ಅಧಿಕರಿಗಳು ಮಂಗಳವಾರ(ಜೂನ್21) ಖಾನಾಪೂರ ತಾಲೂಕಿನಲ್ಲಿ ಕೋಟ್ಪಾ -2003 ಕಾಯ್ದೆಯಡಿಯಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ 15 ಪ್ರಕರಣಗಳನ್ನು ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.

ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಡಾ. ಬಿ.ಎನ್. ತುಕ್ಕಾರ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಡಾ.ಶ್ವೇತಾ ಪಾಟೀಲ ಜಿಲ್ಲಾ ಸಲಹೆಗಾರರು, ಕವಿತಾ ರಾಜನ್ನವರ ಸಮಾಜ ಕಾರ್ಯಕತೆ, ಆರೋಗ್ಯ ಇಲಾಖೆ ಸಿಬ್ಬಂದಿ ಪಾಟೀಲ್, ಮಹಾದೇವಿ ಪಾರಿಶ್ವಾಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಪೊಲೀಸ ಸಿಬ್ಬಂದಿಗಳು ಎಚ್.ಎಚ್ ಕಮ್ಮಾರ ಎಸ್. ಪಿ ಬಿದರಿ ಪಾಲುಗೊಂಡಿದ್ದರು.