ಎಸಿಬಿ ಬಲೆಗೆ ಬಿದ್ದ ಕೃಷಿ ಅಧಿಕಾರಿ

ಬೆಳಗಾವಿ: ಸಿಟಿ ಕಂಪೋಸ್ಟ್ ಮಾರ್ಕೇಟ್ ಲೈಸನ್ಸ್ ನೀಡಲು ದೂರುದಾರರಿಂದ 20 ಸಾವಿರ ರೂ. ಲಂಚ ಪಡೆಯುತ್ತಿದ್ದ ಕೃಷಿ ಅಧಿಕಾರಿಯನ್ನು ಎಸಿಬಿ ಪೊಲೀಸರು ಬಲೆಗೆ ಕೆಡವಿದ್ದಾರೆ.
ಬೆಳಗಾವಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ಯೊಗೇಶ ಫಕಿರೇಶ ಅಗಡಿ ಎಂಬಾತನನ್ನು 20 ಸಾವಿರ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದೆ. ನಂತರ ಆಪಾದಿತ ಯೊಗೇಶನ ಮನೆ ಮತ್ತು ಕಚೇರಿಯನ್ನು ಸಹ ಪಂಚರ ಸಮಕ್ಷಮ ಎಸಿಬಿ ಅಧಿಕಾರಿಗಳು ಪರೀಕ್ಷಿಸಿದಾಗ ಒಟ್ಟು 3.98ಲಕ್ಷ ನಗದು ಹಣ ಸಿಕ್ಕಿದೆ. ನಗರದ ಅನಗೋಳದ ಮೊನೇಶ್ವರ ಅಪ್ಪಣ್ಣ ಕಮ್ಮಾರ ಎಂಬುವವರು ಎಸಿಬಿಗೆ ದೂರು ನೀಡಿದ್ದರು.
ಉತ್ತರ ವಲಯ ಎಸಿಬಿ ಎಸ್ಪಿ ಬಿ. ಎಸ್. ನ್ಯಾಮಗೌಡ ಮಾರ್ಗದರ್ಶನದಲ್ಲಿ ಡಿಎಸ್ಪಿ ಜೆ. ಎಂ. ಕರುಣಾಕರಶೆಟ್ಟಿ, ಇನ್ಸಪೆಕ್ಟರಗಳಾದ ಅಡಿವೇಶ ಗುದಗೊಪ್ಪ, ನಿರಂಜನ ಪಾಟೀಲ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.//////