Belagavi News In Kannada | News Belgaum

ಗೋವಾ ಅಕ್ರಮ ಮದ್ಯ ಸಾಗಾಟ: 125. ಲೀಟರ್ ಮದ್ಯ ವಶಕ್ಕೆ

ಬೆಳಗಾವಿ : ಖಾನಾಪೂರ ತಾಲೂಕಿನ ಕಣಕುಂಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಗೋವಾ ಅಕ್ರಮ ಮದ್ಯವನ್ನು ಹಾಗೂ ಒಬ್ಬ ಆರೋಪಿ ಮತ್ತು ಮದ್ಯ ಸಾಗಿಸುತ್ತಿದ್ದ ವಾಹನವನ್ನು ಅಬಕಾರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಜೂನ್ 21 ರಂದು ಬೆಳಿಗ್ಗೆ 8.30ರ ಸುಮಾರಿಗೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಎಕ್ಸ್.ಯು.ವಿ 500 ವಾಹನದಲ್ಲಿ 8 ವಿಧದ 750 ಎಂ.ಎಲ್ ಅಳತೆಯ ಒಟ್ಟು 167 ಬಾಟಲಿಗಳಲ್ಲಿ ಬರೋಬ್ಬರಿ 125.250 ಲೀಟರ್ ಗೋವಾ ಅಕ್ರಮ ಮದ್ಯ ಪತ್ತೆಯಾಗಿದ್ದು ಮಹಾರಾಷ್ಟ್ರ ಮೂಲದ ಎ1 ಆರೋಪಿ ಪ್ರತೀಕ್ ಮಾಳಿ ಹಾಗೂ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದು ವಾಹನ ಹಾಗೂ ಮದ್ಯ ಸೇರಿ ಒಟ್ಟು 6,08,560 ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನದ ಮಾಲೀಕನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಬೆಳಗಾವಿ ಕೇಂದ್ರ ಸ್ಥಾನದ ಅಬಕಾರಿ ಅಪರ ಆಯುಕ್ತರಾದ ಡಾ. ವೈ. ಮಂಜುನಾಥ, ಬೆಳಗಾವಿ ವಿಬಾಗದ ಅಬಕಾರಿ ಜಂಟಿ ಆಯುಕ್ತರಾದ ಫಿರೋಜಖಾನ್ ಕಿಲ್ಲೇದಾರ, ಬೆಳಗಾವಿ ದಕ್ಷಿಣ ವಿಭಾಗದ ಅಬಕಾರಿ ಉಪ ಆಯುಕ್ತ ಜಯರಾಮೇಗೌಡ, ಬೆಳಗಾವಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಸಿ.ಎಸ್.ಪಾಟೀಲ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರಾದ ಮಂಜುನಾಥ ಗಲಗಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ಬೆಳಗಾವಿ ಉಪ ವಿಭಾಗದ ಸಿಬ್ಬಂದಿಗಳಾದ ಬಿಎಸ್‍ಅಟಿಗಲ್ ಅಬಕಾರಿ ಪೇದೆ, ಎಂಎಫ್ ಕಟಗೆನ್ನವರ, ಎ.ಐ.ಸಯ್ಯದ ವಾಹನ ಚಾಲಕರು ಹಾಗೂ ಇತರ ಸಿಬ್ಬಂದಿ ಪಾಲ್ಗೊಂಡಿದ್ದರು./////