Belagavi News In Kannada | News Belgaum

ಅರ್ಜಿ ಆಹ್ವಾನ

ನಿಜಶರಣ ಅಂಬಿಗರ ಚೌಡಯ್ಯಾ ಅಭಿವೃದ್ಧಿ ನಿಗಮ: ಸಾ ಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

 

ಬೆಳಗಾವಿ : ನಿಜಶರಣ ಅಂಬಿಗರ ಚೌಡಯ್ಯಾ ಅಭಿವೃದ್ಧಿ ನಿಗಮ ಬೆಳಗಾವಿ 2022-23ನೇ ಸಾಲಿನ ಕ್ರಿಯಾ ಯೋಜನೆಯನ್ವಯ ವಿವಿಧ ಸಾಲ ಸೌಲಭ್ಯಗಳನ್ನು ಪಡೆಯಲು ಅರ್ಹ ಅಂಬಿಗ ಸಮಾಜಕ್ಕೆ ಸೇರಿದವರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಅರಿವು ಶೈಕ್ಷಣಿಕ ಸಾಲ ಯೋಜನೆ (ನವೀಕರಣಕ್ಕಾಗಿ ಮಾತ್ರ) ಈಗಾಗಲೇ ಕಳೆದ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸೌಲಭ್ಯ ಪಡೆದ ವಿದ್ಯಾರ್ಥಿಗಳಿಗೆ 2022-23ನೇ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಲ್ಲಿ ಮುಂದುವರೆದ ಕಂತುಗಳಿಗೆ (3, 4ನೇ ಕಂತುಗಳು) ಅರ್ಜಿಗಳನ್ನು ಸುವಿಧಾ ಆನ್‍ಲೈನ್ ಪೋರ್ಟಲ್https://suvidha.karnataka.gov.inಮುಖಾಂತರ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ದಾಖಲೆಗಳು (ಅರಿವು ನವೀಕರಣಕ್ಕೆ):
ಜಾಮೀನುದಾರರ ಒಪ್ಪಿಗೆ ಪತ್ರ (Collateral Acceptance Letter), ವ್ಯಾಸಂಗ ಪ್ರಮಾಣ ಪತ್ರ (Study Certificate), ಹಣ ಸಂದಾಯ ರಶೀದಿ (Fees Receipt) ತಂದೆ ತಾಯಿ/ಪೋಷಕರ ಒಪ್ಪಿಗೆ ಪತ್ರ (Parents Consent Letter) ಅರ್ಜಿದಾರರ ಆಧಾರ್ ಜೋಡಣೆಯಾದ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐ.ಎಫ್.ಎಸ್.ಸಿ ಸಂಖ್ಯೆ ಮತ್ತು ಕೇಂದ್ರ ಆಧಾರ್ ಅಧಿನಿಯಮ, 2016 ಸೆಕ್ಷನ್ (7)ರಡಿ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ.

ಸ್ವಯಂ ಉದ್ಯೋಗ ಸಾಲ ಮತ್ತು ಸಹಾಯಧನ ಯೋಜನೆ:

ಅರ್ಜಿದಾರರು ಬೆÉಸ್ತ, ಅಂಬಿಗ/ಅಂಬಿ, ಬಾರ್ಕಿ/ಬಾರಿಕ, ಬೆಸ್ತರ್, ಭೋಯಿ, ರಾಜಬೋಯಿ, ಬುಂಡೆ-ಬೆಸ್ತರ್, ದಾಲ್ಚಿ, ದಾವತ್, ಗಬಿಟ್, ಗಲಾಡಕೊಂಕಣಿ, ಗಂಗೆಮಕ್ಕಳು, ಗಂಗಾಕುಲ, ಗಂಗಾಮತ, ಗಂಗಾಮತಸ್ಥ, ಗಂಗಾಪುತ್ರ, ಗೌರಿಮತ, ಬುಂಡೆ-ಬೆಸ್ತ/ಗುಂಡೆಬೆಸ್ತ, ಹರಕಂತ್ರ, ಜಲಗಾರ, ಕಬ್ಬೇರ/ಕಬ್ಬೇರ್, ಕಬ್ಬಲಿಗ, ಕಬ್ಬಿಲಿ, ಕಹರ್, ಖಾರ್ವಿ/ಕೊಂಕಣಖಾರ್ವಿ, ಕೋಳಿ, ಕೋಳಿಮಹದೇವ್, ಮಡ್ಡರ್, ಮೀನಗಾರ್, ಮೊಗವೀರ, ಮಗೇರ್, ಮುಕ್ಕವಾನ್, ಪರಿವಾರ, ಸಿವಿಯರ್, ಸುಣಗಾರ, ತೊರೆಯ ಪಾಗಿ ಜಾತಿಗೆ ಜಾತಿಗೆ ಸೇರಿದವರಾಗಿರಬೇಕು.

ಕೇಂದ್ರ ಆಧಾರ್ ಅಧಿನಿಯಮ, 2016 ಸೆಕ್ಷನ್ (7)ರಡಿ ಆಧಾರ್ ಕಾರ್ಡ್ ಕಡ್ಡಾಯವಾಗಿರುತ್ತದೆ. ಅರ್ಜಿದಾರರ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ. ಅರ್ಜಿದಾರರ ಆದಾಯ ಪ್ರಮಾಣ ಪತ್ರವು ಚಾಲ್ತಿಯಲ್ಲಿರಬೇಕು. ಸರ್ಕಾರದ/ಯಾವುದಾದರೂ ನಿಗಮಗಳ ಯೋಜನೆಯಡಿಯಲ್ಲಿ ಕುಟುಂಬದ ಯಾರೇ ಆಗಲಿ ಈಗಾಗಲೇ ಯೋಜನಾ ಸೌಲಭ್ಯ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚಿನವರಿಗೆ ಸೌಲಭ್ಯ ಒದಗಿಸಲಾಗುವುದಿಲ್ಲ. ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು. ಸ್ವಯಂ ಉದ್ಯೋಗ ಸಾಲ ಮತ್ತು ಸಹಾಯಧನ ಯೋಜನೆಗೆ ವಾರ್ಷಿಕ ಆದಾಯ ಮಿತಿ ಗ್ರಾಮಾಂತರ ಪದೇಶದವರಿಗೆ ರೂ 98,000/- ಹಾಗೂ ಪಟ್ಟಣ ಪ್ರದೇಶದವರಿಗೆ ರೂ 1,20,000/- ಗಳನ್ನು ಮೀರಿರಬಾರದು.
ಸರ್ಕಾರದಿಂದ ಬಿಡುಗಡೆಯಾಗುವ ಅನುದಾನಕ್ಕೆ ಅನುಗುಣವಾಗಿ ಸಾಲ ಸೌಲಭ್ಯ ಒದಗಿಸಲಾಗುವುದು. ಯೋಜನೆಗಳ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಗಳಾದಲ್ಲಿ, ಆ ದಿನಾಂಕದಿಂದ ಜಾರಿಗೆ ಬರುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು. https://suvidha.karnataka.gov.in ಮಾಹಿತಿಗಾಗಿ ತಂತ್ರಾಂಶದ ಮೂಲಕ ಮಾತ್ರವೇ ಅರ್ಜಿಗಳನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ/ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿಗೆ ಭೇಟಿ ನೀಡಿ ಅಥವಾ ನಿಗಮದ ವೆಬ್‍ಸೈಟ್ https://ambigaradevelopment.karnataka.gov.in ನಲ್ಲಿ ಅರ್ಜಿ ನಮೂನೆ ಮತ್ತು ವಿವರ ಪಡೆಯಬಹುದಾಗಿದೆ. ನಿಗಮದ ಜಿಲ್ಲಾ ಕಛೇರಿಯ ಸಹಾಯವಾಣಿ ಸಂಖ್ಯೆ 0831-2402163 ಪೂರ್ವಾಹ್ನ 10:00 ಗಂಟೆ ಯಿಂದ ಸಂಜೆ 5:30ರವರೆಗೆ ಸಂಪರ್ಕಿಸಬಹುದಾಗಿದ್ದು, ಜುಲೈ 14 2022ರ ಸಂಜೆ 5 ಗಂಟೆ ಒಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

 

ಡಿಪೆÇ್ಲೀಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್ ಮೆಂಟ್ ತರಬೇತಿಗೆ ಅರ್ಜಿ ಆಹ್ವಾನ

 

ಬೆಳಗಾವಿ : ಆರು(6) ತಿಂಗಳ ಅವಧಿಗೆ ರೆಗ್ಯೂಲರ್ ಡಿ.ಸಿ.ಎಂ ತರಬೇತಿ ಪಡೆಯಲು ಅರ್ಹ ಖಾಸಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.16 ವರ್ಷ ವಯೋಮಾನ ದಾಟಿದ ಕನಿಷ್ಠ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಎಸ್.ಸಿ/ಎಸ್.ಟಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 500 ರೂಪಾಯಿ ಮತ್ತು ಇತರರ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 400 ರೂಪಾಯಿ ಶಿಷ್ಯವೇತನ ನೀಡಲಾಗುವುದು. ಪುರುಷ ಅಭ್ಯರ್ಥಿಗಳಿಗೆ ಉಚಿತ ವಸತಿ ಸೌಲಭ್ಯವಿರುತ್ತದೆ.

ದೂರ ಶಿಕ್ಷಣ ಡಿ.ಸಿ.ಎಂ. ತರಬೇತಿ : ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ವಿವಿಧ ಸಹಕಾರ ಸಂಘ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಅರ್ಜಿ ಸಲ್ಲಿಸಬಹುದು.

ಸಹಕಾರಿ ಸಂಘಗಳಲ್ಲಿ ಸಿಬ್ಬಂದಿಗಳು ಪದೋನ್ನತ್ತಿ ಹೊಂದಲು ಈ ತರಬೇತಿ ಕಡ್ಡಾಯವಾಗಿರುತ್ತದೆ. ಹಾಗೂ ಸಹಕಾರ ಸಂಘ/ಸಂಸ್ಥೆಗಳಲ್ಲಿ ಒಂದು ವರ್ಷ ಸೇವೆ ಸಲ್ಲಿಸಿದ ಸಿಬ್ಬಂದಿಗಳು ತರಬೇತಿ ಪಡೆಯಲು ಅರ್ಹರಾಗಿರುತ್ತಾರೆ. ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಯೂನಿಯನ್ ಗಳಿಂದ ಅರ್ಜಿ ಪಡೆದು ಜೂನ್ 30 ರ ಒಳಗಾಗಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಕೆ.ಐ.ಸಿ.ಎಂ. ಪ್ರಾಂಶುಪಾಲರನ್ನು ಹಾಗೂ ದೂರವಾಣಿ ಸಂಖ್ಯೆ : 0831-2950026, 8050533207, 6360475029, 8884259545, ಆನ್ ಲೈನ್ www.kscfdcm.co.in ನ್ನು ಸಂಪರ್ಕಿಸಬಹುದೆಂದು ಕೆ.ಐ.ಸಿ.ಎಂ ಪ್ರಾಂಶುಪಾಲರಾದ ಎನ್.ಎಂ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////