Belagavi News In Kannada | News Belgaum

ಅರ್ಜಿ ಆಹ್ವಾನ

ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

 

ಬೆಳಗಾವಿ : ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕೀಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕಾಗಿ ಹೊಸದಾಗಿ ಪ್ರವೇಶ ಬಯಸುವ ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ/ಪ.ವರ್ಗ ಮತ್ತು ಇತರೆ ಜನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳಿಂದ 2022-23ನೇ ಸಾಲಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ವಿದ್ಯಾರ್ಥಿಯ ಪೋಷಕರ ಆದಾಯ ಮಿತಿ: ಪ್ರವರ್ಗ-1, ಎಸ್.ಸಿ ಮತ್ತು ಎಸ್.ಟಿ ರೂ.1.00 ಲಕ್ಷ ಹಾಗೂ ಪ್ರವರ್ಗ-2ಎ, 2ಬಿ, 3ಎ, 3ಬಿ ಇತರೆ ಹಿಂದುಳಿದ ವರ್ಗ ಹಾಗೂ ಇತರೆ ರೂ. 44,500/- ಇಲಾಖೆಯ ವೆಬ್‍ಸೈಟ್ www.bcwd.karnataka.gov.in ಟಿ ನ್ನು ಸಂಪರ್ಕಿಸಿ ಅರ್ಜಿಯನ್ನು ಸಲ್ಲಿಸಬೇಕು.

ತಾಲ್ಲೂಕುವಾರು ವಿದ್ಯಾರ್ಥಿನಿಲಯಗಳ ವಿವರ ಹಾಗೂ ವಿದ್ಯಾರ್ಥಿನಿಲಯದ ಪ್ರವೇಶಕ್ಕೆ ಇರಬೇಕಾದ ಅರ್ಹತೆ, ಸಲ್ಲಿಸಬೇಕಾದ ದಾಖಲೆಗಳ ವಿವರ ಮತ್ತು ಸರ್ಕಾರದ ಆದೇಶಕ್ಕಾಗಿ ಇಲಾಖೆಯ ವೆಬ್‍ಸೈಟ್ www.bcwd.karnataka.gov.in ನ್ನು ನೋಡಬಹುದು. ಅರ್ಜಿ ಸಲ್ಲಿಸಲು ತಾಂತ್ರಿಕ ತೊಂದರೆಗಳಾದಲ್ಲಿ [email protected] ಗೆ ಇ-ಮೇಲ್ ಮುಖಾಂತರ ಅಥವಾ ಜಿಲ್ಲಾ/ತಾಲ್ಲೂಕು ಅಧಿಕಾರಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರನ್ನು ಅಗತ್ಯ ದಾಖಲೆಗಳೊಂದಿಗೆ ಸಂಪರ್ಕಿಸುವುದು. ಔಟಿಟiಟಿe ಮೂಲಕ ಅರ್ಜಿಗಳನ್ನು ಜೂನ್ 30ರೊಳಗಾಗಿ ಸಲ್ಲಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 8050370006ನ್ನು ಸಂಪರ್ಕಿಸಹಬುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////

 

ರಬ್ಬರ್ ನೆಲಹಾಸು(Cow Mat)ಗಳನ್ನು ಪಡೆಯಲು ಅರ್ಜಿ ಆಹ್ವಾನ

 

ಬೆಳಗಾವಿ : ಪಶುಪಾಲನೆ ಮತ್ತು ಪಶುವೈದ್ಯ ಸೇವಾ ಇಲಾಖೆ ವತಿಯಿಂದ 2021-22ನೇ ಸಾಲಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರಬ್ಬರ್ ನೆಲಹಾಸು(ಅoತಿ ಒಚಿಣ)ಗಳನ್ನು ವಿತರಿಸಲು ಅರ್ಜಿ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಪ್ರತಿ ಫಲಾನುಭವಿಗೆ 2 ರಬ್ಬರ್ ನೆಲಹಾಸು ಗಳನ್ನು ವಿತರಣೆ ಮಾಡಲಾಗಿವುದು. ಈ ಯೋಜನೆಯಡಿ ಎರಡು ನೆಲಹಾಸುಗಳಿಗೆ 6190 ರೂಪಾಯಿ ಇದ್ದು, ಶೇ 50℅ ರಂತೆ 3095 ರೂಪಾಯಿಗಳ ಸಹಾಯಧನ ಮತ್ತು ಶೇ 50℅ ರಂತೆ 3095 ರೂಪಾಯಿ ಫಲಾನುಭವಿಗಳ ವಂತಿಗೆಯೊಂದಿಗೆ ಯೋಜನೆ ಅನುನಗೊಳಿಸಿ ಫಲಾನುಭವಿಗಳ ವಂತಿಗೆ 3095 ರೂಪಾಯಿ ಗಳನ್ನು ಅರ್ಜಿಯೊಂದಿಗೆ ಪಾವತಿಸಬೇಕಾಗಿರುತ್ತದೆ.
ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಕನಿಷ್ಠ 2 ಜಾನುವಾರು ಫಲಾನುಭವಿ ಬಳಿ ರಾಸು ಇರುವ ಕುರಿತು ಪಶುವೈದ್ಯಾಧಿಕಾರಿಗಳಿಂದ ದೃಢೀಕರಣ ಪತ್ರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ, ಅಂಗವಿಕಲರಾಗಿದ್ದಲ್ಲಿ ಪ್ರಮಾಣ ಪತ್ರ ಹೊಂದಿರಬೇಕು.
ಆಸಕ್ತ ರೈತರು ಜುಲೈ 5 ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿಗಳಿಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ತಾಲೂಕು ಮಟ್ಟದ ಸಹಾಯಕ ನಿರ್ದೇಶಕರನ್ನು ಸಂಪರದಕಿಸಬಹುದು ಎಂದು ಬೆಳಗಾವಿ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರಾದ ಡಾ.ರಾಜೀವ ಎನ್.ಕೂಲೇರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. //////

 

ಸವದತ್ತಿ ಯಲ್ಲಮ್ಮಾ ಪುರಸಭೆ: ಡೇ-ನಲ್ಮ್ ಯೋಜನೆಯಡಿ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

 

ಬೆಳಗಾವಿ: ಸವದತ್ತಿ ಯಲ್ಲಮ್ಮಾ ಪುರಸಭೆಯ ವ್ಯಾಪ್ತಿಯ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸನ್ 2022-23 ನೇ ಸಾಲಿಗೆ ದೀನ್ ದಯಾಳ್ ಅಂತ್ಯೋದಯ (ಡೇ-ನಲ್ಮ್ ಯೋಜನೆ) ಯೋಜನೆಯಲ್ಲಿ ವಿವಿಧ ರೀತಿಯ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಸ್ವಯಂ ಉದ್ಯೋಗಕ್ಕೆ (ವೈಯಕ್ತಿಕ ಉದ್ಯಮಶೀಲತೆಗಾಗಿ):
ಕಿರು ಉದ್ದಮೆ ಕೈಗೊಳ್ಳಲು 2.00 ಲಕ್ಷದವರೆಗೆ ಸಾಲ ಪಡೆಯಬಹುದಾಗಿದೆ, ವೈಯಕ್ತಿಕ ವಿವಿಧ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಉದ್ಯೊಗದ ಸ್ಥಾಪನೆಗಾಗಿ ಬ್ಯಾಂಕ ಸಾಲದ ಮೇಲೆ ಬಡ್ಡಿದರ ಶೇ 7 ಕ್ಕಿಂತ ಮೇಲ್ಪಟ್ಟಿದ್ದರೆ ಬಡ್ಡಿ ಸಹಾಯಧನ ದೊರೆಯುತ್ತದೆ ಸದರಿ Interest Subsidy ಯನ್ನು ಕಾಲಕಾಲಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸುವ ವ್ಯಕ್ತಿಗಳಿಗೆ ಮಾತ್ರ ನೀಡಲಾಗುವದು.
ಲಿಂಕೇಜ ಸ್ವಯಂ ಉದ್ಯೋಗ ಉದ್ಯಮಶೀಲತೆ (ಸಾಲ ಮತ್ತು ಸಹಾಯಧನ):
ವಿವಿಧ ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಲಿಂಕೇಜ್ ಉದ್ಯಮಶೀಲತೆ ಪ್ರಾರಂಭಿಸಲು ಪ್ರತಿ ಸದಸ್ಯರಿಗೆ ಗರಿಷ್ಟ ರೂ 2 ಲಕ್ಷಗಳು ಅಥವಾ ರೂ 10 ಲಕ್ಷಗೂ ಯಾವುದು ಯೋಜನಾ ವೆಚ್ಚ ಕಡಿಮೆ ಇರುತ್ತದೆಯೋ ಅದನ್ನು ಅನುಮೊದಿಸುವದು). ಗುಂಪು ಸ್ವಯಂ ಉದ್ಯೋಗವನ್ನು ಕೈಗೊಳ್ಳಲು ಉದ್ಯೊಗದ ಸ್ಥಾಪನೆಗಾಗಿ ಬ್ಯಾಂಕ ಸಾಲದ ಮೇಲೆ ಬಡ್ಡಿದರ ಶೇ 7 ಕ್ಕಿಂತ ಮೇಲ್ಪಟ್ಟಿದ್ದರೆ ಬಡ್ಡಿ ಸಹಾಯಧನ ದೊರೆಯುತ್ತದೆ ಸದರಿ Interest Subsidy ಯನ್ನು ಕಾಲಕಾಲಕ್ಕೆ ಸರಿಯಾಗಿ ಸಾಲವನ್ನು ಮರುಪಾವತಿಸುವ ವ್ಯಕ್ತಿಗಳಿಗೆ ಮಾತ್ರ ನೀಡಲಾಗುವದು. ಹಾಗೂ ಕಾಲಕಾಲಕ್ಕೆ ಸಾಲವನ್ನು ಸರಿಯಾಗಿ ಮರುಪಾವತಿಸುವ ಸ್ವ-ಸಹಾಯ ಸಂಘಗಳಿಗೆ ಹೆಚ್ಚುವರಿಯಾಗಿ ಶೇ 3 ರಷ್ಟು ಬಡ್ಡಿ ಸಹಾಯ ಧನವನ್ನು ಪೈಸ್ ಪೋರ್ಟಲ್ ಮೂಲಕ ಬಿಡುಗಡೆ ಮಾಡಲಾಗುವದು.
ಸ್ವ-ಸಹಾಯ ಗುಂಪುಗಳ ರಚನೆಗೆ:
ಗುಂಪಿನ ಸದಸ್ಯರ ನಡುವೆ ನಿರಂತರ ಉಳಿತಾಯವನ್ನು ಮಾಡುವಂತೆ ಪ್ರೇರೆಪಿಸುವದು, ಗುಂಪಿನಲ್ಲಿ ಸದಸ್ಯತ್ವವನ್ನು ಪಡೆಯುವಾಗ 18 ವರ್ಷ ಮೇಲ್ಪಟ್ಟಿರಬೇಕು, ಒಂದು ಗುಂಪಿನಲ್ಲಿ ಒಂದು ಕುಟುಂಬದ ಒಬ್ಬರಿಗೆ ಮಾತ್ರ ಸದಸ್ಯತ್ವವನ್ನು ಪಡೆಯುವುದು. ಗುಂಪಿನಲ್ಲಿ ಸದಸ್ಯರ ಸಂಖ್ಯೆಯು 10 ಕ್ಕಿಂತ ಮೇಲೆ 20 ಕ್ಕಿಂತ ಒಳಗಡೆಯಿರಬೇಕು.
.ಪ್ರಧಾನ ಮಂತ್ರಿ ಆಹಾರ ಉತ್ವದಣೆ ಮತ್ತು ಮಾರಾಟ ಕಿರು ಉದ್ಯೋಮಿ ಘಟಕ:
ಪ್ರದೇಶ ಮಟ್ಟದ ಒಕ್ಕೂಟಗಳಿದ ಸ್ವ-ಸಹಾಯ ಸಂಘಗಳಿಗೆ ಸಾಲ ಮತ್ತು ಇನ್ನಿತರ ಸೌಲಭ್ಯ ಪೂರೈಸುವದು ಸೌಲಭ್ಯಕ್ಕಾಗಿ ಅರ್ಹ ಆಭ್ಯರ್ಥಿಗಳು ಜುಲೈ 21ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಎಸ್.ವೈ ಹಾದಿಮನಿ ಸಿ.ಎ.ಓ ಮತ್ತು ಶ್ರೀ ಜಗದೇಶ ಗಾಣಿಗೇರ, ಸಿ.ಓ ಯಲ್ಲಮ್ಮಾ ಪುರಸಭೆ ಸವದತ್ತಿ ಇವರನ್ನು ಹಾಗೂ ವೆಬ್‍ಸೈಟ್ ವಿಳಾಸ www.saundattitown.mrc.gov.inಟಿನ್ನು ಸಂಪರ್ಕಿಸಬಹದು ಎಂದು ಪುರಸಭೆ ಮುಖ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.//////