Belagavi News In Kannada | News Belgaum

ಆಡಂಬರ ಇಲ್ಲದ ನಿರ್ಮಲ ಮನಸ್ಸಿನಿಂದ ಭಕ್ತಿಯಿಂದ ಮಾಡಿದ ಪೂಜೆಯೇ ನಿಜವಾದ ಪೂಜೆ ಇಲ್ಲದಿದ್ದರೆ ಪೂಜೆ ಪೂಜಿ (ಶೂನ್ಯ)

ಆಡಂಬರ ಇಲ್ಲದ ನಿರ್ಮಲ ಮನಸ್ಸಿನಿಂದ ಭಕ್ತಿಯಿಂದ ಮಾಡಿದ ಪೂಜೆಯೇ ನಿಜವಾದ ಪೂಜೆ ಇಲ್ಲದಿದ್ದರೆ ಪೂಜೆ ಪೂಜಿ (ಶೂನ್ಯ) ಯಾಗುತ್ತದೆ ಎಂದು ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು. ಅವರು ಅಥಣಿ ಬ್ರಾಹ್ಮಣ ಸಮಾಜದ ಆಶ್ರಯದಲ್ಲಿ ಸ್ಥಳೀಯ ಶ್ರೀ ರಾಘವೇಂದ್ರ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
      ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಅರ್ಜುನನಿಗೆ ಭಕ್ತಿಯ ಮಹತ್ವ, ಪ್ರಾಶಸ್ತö್ಯ ಮತ್ತು ಅವಶ್ಯಕತೆಯ ಬಗೆಗೆ ವಿವರವಾಗಿ ಹೇಳಿದ್ದಾನೆ. ಭಕ್ತಿಯಿಂದಲೇ ದೇವರ ಅನುಗ್ರಹ, ಭಕ್ತಿಯಿಂದಲೇ ಮೋಕ್ಷ ಎಂದು ಕೂಡ ಹೇಳಿದ್ದಾನೆ. ಜ್ಞಾನದಿಂದಲೂ ಮೋಕ್ಷ ಇದೆ ಆದರೆ ಜ್ಞಾನದಿಂದ ಬರುವ  ಭಕ್ತಿಯಿಂದಲೇ ನಮಗೆ ಮೋಕ್ಷ ಸಿಗಲು ಸಾಧ್ಯ ಎಂದರು. ನಾವೆಲ್ಲರೂ ದೇವರ ಪೂಜೆ ಮಾಡುತ್ತೇವೆ. ನಾವು ಮಾಡುವ ಪೂಜೆಯಲ್ಲಿ ವಜ್ರವೈಢೂರ್ಯ, ಬೆಳ್ಳಿ, ಬಂಗಾರ, ಆಭರಣದಿಂದ ವೈಭವದ ಪೂಜೆ ಮಾಡುವುದು ಒಂದು ಕಡೆ ಮತ್ತೊಂದೆಡೆ ಆಡಂಬರ ಇಲ್ಲದೆ ಪತ್ರ, ಫಲ, ಪುಷ್ಪ ಬಳಸಿ ಭಕ್ತಿಯಿಂದ ಪೂಜೆ ಮಾಡುವುದು, ಭಗವಂತನಿಗೆ ಯಾವ ರೀತಿಯಿಂದ ಪೂಜೆ ಮಾಡಿದರೂ ಸ್ವೀಕರಿಸುತ್ತಾನೆ, ಏನೇ ಆದರೂ ಭಕ್ತಿಯಿಂದ ಸಮರ್ಪಣೆ ಮಾಡಿದ ಪೂಜೆ ದೇವರ ಸ್ವೀಕೃತಿಗೆ ಅರ್ಹವಾಗುತ್ತದೆ ಎಂದು ಹೇಳಿದರು.
      ಆಸ್ತಿಕರಾದ ನಾವು ದೇವರನ್ನು, ಧರ್ಮವನ್ನು, ಶಾಸ್ತçವನ್ನು ನಂಬುತ್ತೇವೆ ಆದರೂ ದೇವರಿಗೆ ಸ್ವೀಕೃತವಾಗುವ ಏಕಾದಶಿ ಆಚರಣೆ, ದೇವರ ಪೂಜೆ, ತಂದೆ-ತಾಯಿಗಳ ಹಾಗೂ ಸಜ್ಜನರ ಸೇವೆ, ಪರೋಪಕಾರ, ಶಾಸ್ತç ಅಧ್ಯಯನ, ಸಂಧ್ಯಾವAದನೆ ಮಾಡುವುದಿಲ್ಲ ಈ ಎಲ್ಲವುಗಳನ್ನು ಮಾಡಿದಲ್ಲಿ ದೇವರನ್ನು ಸಂತೋಷ ಪಡಿಸಲು ಸಾಧ್ಯ ಎಂದು ತಿಳಿದಿದ್ದರೂ ಸಹ ನಾವು ಆಚರಣೆಗೆ ಯಾಔಉದನ್ನೂ ತರುವುದಿಲ್ಲ, ದೇವರನ್ನು ಪ್ರೀತಿಸುವವರು ಆತನಿಗೆ ಸಂತೋಷವಾಗಲು ಧಾರ್ಮಿಕ ಆಚರಣೆಗಳನ್ನು ಮಾಡಬೇಕು. ನಾವು ಯಾರನ್ನು ಹೆಚ್ಚು ಪ್ರೀತಿಯಿಂದ ಕಾಣುತ್ತೆವೆಯೋ ಅಂತವರಿಗೆ ನೋವಾದರೆ ನಾವು ಸಹಿಸುವುದಿಲ್ಲ ಅದೇ ರೀತಿ ನಾವು ಪಾಲಿಸಲೇ ಬೇಕಾದ ಆಚರಣೆಗಳನ್ನು ಪಾಲಿಸದೇ ಹೋದಲ್ಲಿ ದೇವರಿಗೂ ನೋವಾಗುತ್ತದೆ ಎನ್ನುವುದನ್ನು ಅರಿಯಬೇಕು ಎಂದರು.
      ದೇವರು ನಮಗೆ ಸಾಕಷ್ಟು ಸುಖ ಕೊಟ್ಟಿರುತ್ತಾನೆ ಆದರೆ ಯಾವುದೋ ಒಂದು ದಿನ ಕಷ್ಟ ಕೊಟ್ಟರೆ ಸಾಕು  ನಮಗೆ ದೇವರು ಈ ಶಿಕ್ಷೆ ಯಾಕೆ ಕೊಟ್ಟ ಎಂದು ದೇವರನ್ನು ನಾವು ಪ್ರಶ್ನಿಸುತ್ತೇವೆ ಆದರೆ ಸಾಕಷ್ಟು ಪ್ರಮಾಣದಲ್ಲಿ ದೇವರು ನಮಗೆ ಸುಖ ಕೊಟ್ಟಾಗ ನಾವು ಪ್ರಶ್ನಿಸುವುದಿಲ್ಲ. ಆರೋಗ್ಯ ಸರಿ ಇಲ್ಲದಿದ್ದಾಗ ಮಗುವಿನ ತಾಯಿ ಕಹಿಯಾದ ಔಷಧಿಯನ್ನು ಮಗುವಿಗೆ ಸ್ವಲ್ಪ ಕುಡಿಸುತ್ತಾಳೆ ನಂತರ ಸ್ವಲ್ಪ ಸಿಹಿ ತಿನ್ನಿಸಿ ನಂತರ ಮತ್ತೆ ಕಹಿ ಔಷಧಿ ನೀಡುವಂತೆ ದೇವರು ಕೂಡ ನಮಗೆ ನಿರಂತರವಾಗಿ ಕಷ್ಟ ಅಥವಾ ದುಃಖ ಕೊಡುವುದಿಲ್ಲ ಕಷ್ಟದೊಂದಿಗೆ ಸುಖ ಈ ಸುಖದೊಂದಿಗೆ ಮತ್ತೆ ಕಷ್ಟ ಅಥವಾ ದುಃಖ ಕೊಡುತ್ತಾ ಹೋಗುತ್ತಾನೆ ಎಂದ ಅವರು ಕಷ್ಟ, ಸುಖಗಳನ್ನು ನಾವು ಸಮನಾಗಿ ಸ್ವೀಕರಿಸಬೇಕು ಎಂದರು.
      ನಮ್ಮನ್ನು ಯಾರು ಹೆಚ್ಚು ಪ್ರೀತಿಸುತ್ತಾರೋ ಅವರಿಗೆ ನಮಗೆ ಕಷ್ಟವಾದಾಗ ಅವರು ಸಂಭ್ರಮಿಸುವುದಿಲ್ಲ ಅವರಿಗೂ ನೋವಾಗುತ್ತದೆ. ಮಗು ಬಿದ್ದಾಗ ತಂದೆ-ತಾಯಿಗಳು ಚಪ್ಪಾಳೆ ಹೊಡೆದು ಸಂಭ್ರಮಿಸುವುದಿಲ್ಲ ಅದೇ ರೀತಿ ನಮ್ಮನ್ನು ಪ್ರೀತಿಸುವ ದೇವರು ಕೂಡ ನಮಗೆ ಕಷ್ಟ ಬಂದಾಗ ಸಂಭ್ರಮಿಸುವುದಿಲ್ಲ. ಒಂದು ಬಾರಿ ಕಷ್ಟ ಬಂದ ತಕ್ಷಣ ನಮ್ಮನ್ನು ಪ್ರೀತಿಸುವ ದೇವರನ್ನು ನಿಂದಸಬಾರದು ಎಲ್ಲವೂ ದೇವರ ಅನುಗೃಹ ಎಂದು ತಿಳಿದುಕೊಳ್ಳಬೇಕು ಎಂದರು.
     ಪಂ.ಡಾ.ಗುರುರಾಜಾಚಾರ್ಯ ಗುಡಿ ಇವರ ಭಾಗವತ ಸ್ಕಂದ ಎರಡನೇ ಪ್ರವೇಶ ಪುಸ್ತಕವನ್ನು ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು. ಪಂ.ಆನAದ ಆಚಾರ್ಯ ಮಹಿಷಿ ಉಪನ್ಯಾಸ ನೀಡಿದರು, ಎಸ್.ವಿ.ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಠಾಧಿಕಾರಿ ಪಂ.ಎಮ್.ಜಿ.ಜೋಶಿ ಸ್ವಾಗತಿಸಿದರು, ಶ್ರೀನಿವಾಚಾರ್ಯ ಬಿಳ್ಳೂರ ನಿರೂಪಿಸಿದರು. ಪ್ರಾರಂಭದಲ್ಲಿ ಪಂಡಿತರ ವೇದಘೋಷದಿಂದ ಕಾರ್ಯಕ್ರಮ ಪ್ರಾರಂಭಗೊಂಡತು.