Belagavi News In Kannada | News Belgaum

ಸಂಭ್ರಮದ ಜಿನಸೇನ ಭಟ್ಟಾರಕ ಪಟ್ಟಾಭಿಷೇಕ ಕಾರ್ಯಕ್ರಮ

ಬೆಳಗಾವಿ: ಕೊಲ್ಲಾಪುರ ನಗರದಲ್ಲಿರುವ ಹಾಗೂ ಕೊಲ್ಲಾಪುರ, ರಾಯಬಾಗ ಮತ್ತು ಹೊಸುರ ಬೆಳಗಾವಿ ವ್ಯಾಪ್ತಿಯ ಶ್ರೀ  ಲಕ್ಷ್ಮೀಸೇನ ಸಂಸ್ಥಾನ ಮಠದ ನೂತನ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಶ್ರೀ ಭರತಸೇನ ಭಟ್ಟಾರಕ ಇವರ ಪಟ್ಟಾಭಿಷೇಕ ಕಾರ್ಯಕ್ರಮ  ಕೊಲ್ಲಾಪುರ ಸಂಸ್ಥಾನಮಠದ ಆವರಣದಲ್ಲಿ ಸಂಭ್ರಮ ಸಡಗರದಲ್ಲಿ ನಡೆಯಿತು.

ಬೆಳಗ್ಗೆ ತಮಿಳುನಾಡಿನ ಜಿನಕಂಚಿ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಅರಿಹಂತಗಿರಿ ಮಠದ ಧವಲಕೀರ್ತಿ ಭಟ್ಟಾರಕ ಸ್ವಾಮೀಜಿ, ನರಸಿಂಹರಾಜಪೂರ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಕಂಬದಹಳ್ಳಿ ಮಠದ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ, ಹೊಂಬುಜ ಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ, ನಾಂದಣಿ ಮಠದ ಜಿನಸೇನ ಭಟ್ಟಾರಕ ಸ್ವಾಮೀಜಿ, ಅರತಿಪೂರ ಮಠದ ಸಿದ್ದಾಂತಕೀರ್ತಿ ಭಟ್ಟಾರಕ ಸ್ವಾಮೀಜಿ ಇವರ ನೇತೃತ್ವದಲ್ಲಿ ಹಾಗೂ ಮಾರ್ಗದರ್ಶನದಲ್ಲಿ  ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ  ನೂತನ ಭಟ್ಟಾರಕ ಭರತಸೇನ ಸ್ವಾಮೀಜಿಗಳ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಿತು.

ಇದಾದ ನಂತರ ಮಧ್ಯಾಹ್ನ ನೂತನ ಭಟ್ಟಾರಕ ಭರತಸೇನ ಸ್ವಾಮೀಜಿಗಳ ಪಲ್ಲಕ್ಕಿ ಉತ್ಸವದ ಶೋಭಾಯಾತ್ರೆ ನಡೆಯಿತು. ಈ ಮೆರವಣಿಗೆಯಲ್ಲಿ 55 ಕುದರೆಗಳು, 10 ಕ್ಕು ಹೆಚ್ಚು ವಿವಿಧ ವಾದ್ಯ ಮೇಳಗಳು, ಝಾಂಚಪಥಕಗಳು, ಅನೆ , ರಥೋತ್ಸವ ಸೇರಿದಂತೆ ಸಾವಿರಾರು ಸಂಖ್ಯೆಯ ಶ್ರಾವಕ ಶ್ರಾವಕಿಯರ ಉಪಸ್ಥಿತಿಯಲ್ಲಿ ಶೋಭಾ ಯಾತ್ರೆ ನಡೆಯಿತು .

ಈ ಸಂದರ್ಭದಲ್ಲಿ ರವಿರಾಜ ಪಾಟೀಲ, ಪ್ರಮೋದ ಪಾಟೀಲ, ಸುರೇಶ ರೋಟೆ , ಬಾಬಾಜಿ ಶೆಟ್ಟಿ,  ಪುಷ್ಪಕ ಹನಮಣ್ಣವರ, ಸುನಿಲ ಹನಮಣ್ಣವರ, ಸನ್ಮತಿ ಕಸ್ತೂರಿ, ಹೀರಾಚಂದ ಕಲಮನಿ, ಕುಂತಿನಾಥ ಕಲಮನಿ, ವೈಭವ ಭಡಾಳೆ, ವಿಶ್ವಜೀತ ಉಪಾಧ್ಯೆ, ಅಭಯ ಅವಲಕ್ಕಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.////