Belagavi News In Kannada | News Belgaum

ಪಿ.ಎಲ್.ಡಿ ಬ್ಯಾಂಕ್ ಸದಸ್ಯರಾಗಿ ಅನಿಲ ಮದ್ಯಾಪಗೋಳ ನೇಮಕ

ಬೆಳಗಾವಿ: ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಪ್ರಕಾರ 28ಎ ಪ್ರಕರಣ (4ಬಿ)(1)ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬೆಳಗಾವಿ ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (PLD Bank) ನಿ. ಇದರ ಆಡಳಿತ ಮಂಡಳಿಗೆ ಅಧಿಕಾರೇತರ ಸದಸ್ಯರನ್ನಾಗಿ ಬೆಳಗಾವಿಯ ಹಿಂಡಲಗಾ, ಗೋಕುಲ ನಗರದ ಅನಿಲ ದತ್ತು ಮದ್ಯಾಪಗೋಳ ಅವರನ್ನು ಸರ್ಕಾರದ ಮುಂದಿನ ಆದೇಶದವರೆಗೂ ನಾಮನಿರ್ದೇಶನ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಕೆ. ಅಶ್ವತ್ ಅವರು ಅಧಿಸೂಚನೆ ಹೊರಡಿಸಿರುತ್ತಾರೆ.

ಈ ಕುರಿತು ಬೆಳಗಾವಿಯ ಮಾಜಿ  ಶಾಸಕರಾದ ಸಂಜಯ ಪಾಟೀಲ ಅವರು ಅನಿಲ ದತ್ತು ಮದ್ಯಾಪಗೋಳ ಅವರಿಗೆ ಅಭಿನಂದನೆ ಸಲ್ಲಿಸಿರುತ್ತಾರೆ.