Belagavi News In Kannada | News Belgaum

ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್‍ನಿಂದ ಚಿನ್ನಾಭರಣಗಳ ಪ್ರದರ್ಶನ

ಬೆಳಗಾವಿ :ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲರ್ಸ್ ಮೂರು ದಿನಗಳ ಅಂದರೆ ಜೂ. 24ರಿಂದ (ಇಂದಿನಿಂದ) ಜೂ. 26ರ ವರೆಗೆ uk 27 ದಿ ಫರ್ನ್ ಹೋಟೆಲ್ (ಡೈಮಂಡ್ ಹಾಲ್) ನಲ್ಲಿ ಈ ವಿಶೇಷ ಆಭರಣಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ನಿಷ್ಠಾವಂತ ಗ್ರಾಹಕರಿಗಾಗಿ 2022ರ ಇದು ಸಾಂಪ್ರದಾಯಿಕ ಮತ್ತು ಸಮಕಾಲೀನ ಸೃಷ್ಟಿಗಳ ವಿಶಿಷ್ಟ ಶ್ರೇಣ ಯ ಸಂಗ್ರಹದೊಂದಿಗೆ ಸಾರ್ವಜನಿಕರಿಗೆ ಮುಕ್ತವಾಗಿದೆ. ಬೆಳಗಾವಿ ಕ್ಷೇತ್ರದ ಲೋಕಸಭಾ ಸದಸ್ಯರಾದ ಮಂಗಳಾ ಸುರೇಶ ಅಂಗಡಿ ಉದ್ಘಾಟಿಸಿದರು. ರಾಜ್ಯಸಭೆಯ ಮಾಜಿ ಸದಸ್ಯ ಹಾಗೂ ಭಾರತೀಯ ಜನತಾ ಪಕ್ಷದ ನಾಯಕರಾಗಿರುವ ಡಾ. ಪ್ರಭಾಕರ ಕೋರೆ ಉಪಸ್ಥಿತರಿದ್ದರು.ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ 260ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಬೆಳಗಾವಿಯ ಕರ್ನಾಟಕ ಲಿಂಗಾಯತ ಶಿಕ್ಷಣ ಸೊಸೈಟಿಯ (ಕೆಎಲ್‍ಇ) ಅಧ್ಯಕ್ಷರೂ ಆಗಿದ್ದಾರೆ. ಅವರು ಕೆಎಲ್‍ಇ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ (ಕೆಎಎಚ್‍ಇಆರ್), ಬೆಳಗಾವಿ ಮತ್ತು ಕೆಎಲ್‍ಇ ತಾಂತ್ರಿಕ ವಿಶ್ವವಿದ್ಯಾಲಯ, ಹುಬ್ಬಳ್ಳಿಯ ಕುಲಪತಿಗಳೂ ಆಗಿದ್ದಾರೆ.ವೈಢೂರ್ಯ, ಸಿಟ್ರಿನ್, ಮುತ್ತುಗಳು, ಹರಳೆಣ್ಣೆ, ಮಾಣ ಕ್ಯಗಳಂತಹ ಅಪೂರ್ವ ರತ್ನಗಳು ಮತ್ತು ಉತ್ಕೃಷ್ಟವಾದ ವಜ್ರಗಳ ಸಹಿತ ಆಕರ್ಷಕ ವಿನ್ಯಾಸಗಳೊಂದಿಗೆ ಸೊಬಗು ಮತ್ತು ಕ್ಲಾಸಿಕ್ ಶೈಲಿಯ ಪ್ರಜ್ಞೆಯನ್ನು ಈ ಸಂಗ್ರಹವು ಪ್ರದರ್ಶಿಸುತ್ತಿದೆ. ನಿಮ್ಮ ವ್ಯಕ್ತಿತ್ವದತ್ತ ಗಮನ ಸೆಳೆಯುವಂತೆ ಆಭರಣಗಳು, ಆಕರ್ಷಕ ವಸ್ತ್ರವೈಭವದ ಈ ಸಂಗ್ರಹವನ್ನು ವಿನ್ಯಾಸಗೊಳಿಸಲಾಗಿದೆ. ಗೌಹರ್ ಸಂಗ್ರಹ ಗೌಹರ್ ಕಲೆಕ್ಷನ್ ಕಣ ್ಣಗೆ ಹಬ್ಬವಾಗಿದ್ದು, ಸಮಕಾಲೀನ ಪರಂಪರೆಯ ಪ್ರಭಾವವನ್ನು ಹುಟ್ಟುಹಾಕುತ್ತದೆ. ಅದರ ಸೌಂದರ್ಯವು ಆಕರ್ಷಕವಾಗಿರುತ್ತದೆ ಮತ್ತು ಶ್ರೀಮಂತವಾಗಿರುತ್ತದೆ. ಪಾರಂಪರಿಕ ಸಂಗ್ರಹಪಾರಂಪರಿಕ ಸಂಗ್ರಹವು ದಕ್ಷಿಣ ಭಾರತ ಮತ್ತು ದಕ್ಖನ್ನಿನ ಸಿಗ್ನೇಚರ್ ಕುಂಡಲವೇಲೈ ಅನ್ನು ಒಳಗೊಂಡಿದೆ. ಕುಂಡಲವೇಲೈ ಮಾಣ ಕ್ಯಗಳಿಗೆ ಬಿಲೋವಿ ಪರಿಣಾಮವನ್ನು ನೀಡುವ ಕೊಬೊಕಾನ್ ಮಾಣ ಕ್ಯಗಳ ಬಳಕೆಯನ್ನೂ ಮಾಡಲಾಗಿದೆ. ಈ ಪ್ರದರ್ಶನವು ನಮ್ಮ ಬ್ರ್ಯಾಂಡ್‍ನ ಅತ್ಯುತ್ತಮ ವಿನ್ಯಾಸಗಳನ್ನು ತರುತ್ತಿದೆ. ಸಾಂಪ್ರದಾಯಿಕ ಆಭರಣಗಳು ಅಮಿತವಾದ ಕಲ್ಪನೆಗಳು ಮತ್ತು ಸಮಕಾಲೀನ ವ್ಯಾಖ್ಯಾನಗಳಿಂದ ವಿಕಸನಗೊಂಡಿವೆ ಮತ್ತು ರೂಪಾಂತರಗೊಂಡಿವೆ. ನಮ್ಮ ವಿನ್ಯಾಸಕಾರರು ಈ ಆಭರಣಗಳಿಗೆ ಭಾರತದ ಶ್ರೀಮಂತ ಪರಂಪರೆ, ಸಂಪ್ರದಾಯಗಳು, ಪೌರಾಣ ಕ ಜೀವಿಗಳು, ಪ್ರಾಣ -ಪಕ್ಷಿಗಳಿಂದ ಸ್ಫೂರ್ತಿ ಪಡೆದಿದ್ದಾರೆ. ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ – ಎ ವೈಫ್ ಆಫ್ ದಿ ಎಕ್ಸೊಟಿಕ್  (A WHIFF OF THE EXOTIC)    – ಎಂಬ ಅದ್ಭುತ ಪ್ರದರ್ಶನವನ್ನೂ ಪರಿಚಯಿಸಿತು! ಬೆಂಗಳೂರಿನ 150 ವರ್ಷಗಳ ಪರಂಪರೆಯ ಐಷಾರಾಮಿ ಆಭರಣ ವ್ಯಾಪಾರಿಗಳಾದ ಸಿ. ಕೃಷ್ಣಯ್ಯ ಚೆಟ್ಟಿ ಭಾರತದ ಏಕೈಕ ಪ್ರೀಮಿಯಂ, ಐಷಾರಾಮಿ ಸುಗಂಧ ಬ್ರ್ಯಾಂಡ್ ಅನ್ನೂ ಪರಿಚಯಿಸಿದ್ದಾರೆ. 24-ಕ್ಯಾರಟ್ ನೈಜ ಚಿನ್ನದಿಂದ ಸಮೃದ್ಧವಾದ ಅಪೂರ್ವ ಸುಗಂಧಗಳು 5 ಸೊಗಸಾದ ರೂಪಾಂತರಗಳಲ್ಲಿ – ಆಡಮಾಸ್, ಔರಮ್, ಬೆರಿಲ್, ಕೊರುಂಡಮ್ ಮತ್ತು ಪ್ಲಾಟಿನಮ್    (Adamas, Aurum, Beryl, Corundum and Platinum)   – ಇಲ್ಲಿ ಲಭ್ಯವಿವೆ: www.ckcjewellers.com/Rare-scents
ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಚೈತನ್ಯ ವಿ. ಕೋಥಾ, ಕೃಷ್ಣಯ್ಯ ಚೆಟ್ಟಿಯವರ ಮಾಂತ್ರಿಕ ಸಿಗ್ನೇಚರ್ ಸಂಖ್ಯೆ ಹದಿನೆಂಟು ಅರವತ್ತೊಂಬತ್ತು (1869)- ಇದರ ಜಾದೂ ನಮ್ಮ ಗ್ರಾಹಕರನ್ನೂ ಆವರಿಸಿದೆ- ರಿಯಾಯಿತಿಗಳು, ಟ್ರಿಪಲ್ ಲಾಯಲ್ಟಿ ರಿವಾರ್ಡ್ ಪಾಯಿಂಟ್‍ಗಳು, ವಜ್ರದ ಖರೀದಿಗಳಿಗಾಗಿ ಚಿನ್ನದ ಮೌಲ್ಯವನ್ನು ಪಡೆಯುವುದು, ನಮ್ಮ ವಿಶಿಷ್ಟ ಬೆಲೆ ಸಂರಕ್ಷಣಾ ಯೋಜನೆ- ಮುಂತಾದ ಪ್ರಯೋಜನಗಳು ಲಭ್ಯವಿವೆ. ವ್ಯಾಪಾರದ ಗುಣಮಟ್ಟ ಅಥವಾ ನೈತಿಕತೆಯಲ್ಲಿ ರಾಜಿ ಮಾಡಿಕೊಳ್ಳದ ಕಾರಣ ಕೃಷ್ಣಯ್ಯ ಚೆಟ್ಟಿ ಜುವೆಲರ್ಸ್‍ನಲ್ಲಿ ನೀವು ಶಾಪಿಂಗ್ ಮಾಡುವುದಕ್ಕಿಂತ ಹೆಚ್ಚಿನ ಮೌಲ್ಯವನ್ನು ಪಡೆಯಲು ಇದಕ್ಕಿಂತ ಉತ್ತಮ ಸಮಯ ಬೇರೆ ಇಲ್ಲ ಎಂದರು.


ಈ ಪ್ರದರ್ಶನವು ಚಿನ್ನ, ವಜ್ರ ಮತ್ತು ಬೆಳ್ಳಿಯ ವಿಶೇಷ ಮಾರಾಟ @ ರೂ. 1869ಗಳಿಂದ ಆರಂಭವಾಗುತ್ತದೆ. ಅದರೊಂದಿಗೆ ಹಲವು ವಿಶೇಷ ಪ್ರಯೋಜನಗಳೂ ಲಭ್ಯವಿವೆ. ಚಿನ್ನದ ದರವನ್ನು ಪ್ರತಿ ಗ್ರಾಂಗೆ ರೂ 1869/-, ವಜ್ರ ರೂ. 1869/- ಪ್ರತಿ ಕ್ಯಾರಟ್ ಮತ್ತು ಬೆಳ್ಳಿ ರೂ. 18.69/ ಪ್ರತಿ ಗ್ರಾಂ. ನಿಯಮಗಳು ಮತ್ತು ನಿಬಂಧನೆಗಳು ಅನ್ವಯ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ – ಗೋಪಾಲ್ ಸಿಂಗ್: +91 97400 18421