Belagavi News In Kannada | News Belgaum

ಮೂಡಲಗಿ ಹಳ್ಳದಲ್ಲಿ ತೆಲಿ ಬಂದ 7 ನವಜಾತ ಶಿಶು ಶವ ಪತ್ತೆ ಕೇಸ್; ತನಿಖಾ ತಂಡ ರಚಿಸಿದ ಡಿಎಚ್‌ಒ

ಬೆಳಗಾವಿ: ಮೂಡಲಗಿ ಹಳ್ಳದಲ್ಲಿ ತೆಲಿ ಬಂದ 7  ಭ್ರೂಣಗಳನ್ನು ಹತ್ಯೆ ಮಾಡಿದ್ದಾದರೂ ಯಾರು? ಎಲ್ಲಿಂದ ಬಂದಿದ್ದು? ಎಂಬ ಬಗ್ಗೆ ತನಿಖೆ ನಡೆಸಲಾಗುವುದು. ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಲಾಗಿದೆ ಎಂದು  ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ್ ಕೋಣಿ ಹೇಳಿದ್ದಾರೆ.

ಈಗಾಗಲೇ ಗ್ರಾಮ ಪಂಚಾಯಿತಿಯಿಂದ ಸ್ಥಳೀಯ ಠಾಣೆಗೆ ದೂರು ನೀಡಲಾಗಿದೆ. ಎಲ್ಲವೂ ಐದು ತಿಂಗಳ ಭ್ರೂಣಗಳಾಗಿದ್ದು, ಭ್ರೂಣಗಳ ಪತ್ತೆ ಹಾಗೂ ಭ್ರೂಣಗಳ ಹತ್ಯೆ ಕೇಸ್ ಇದಾಗಿದೆ. ಸ್ಥಳೀಯ ಆಸ್ಪತ್ರೆ ಶವಾಗಾರದಲ್ಲಿ ಮೃತದೇಹ ಇರಿಸಲಾಗಿದೆ. ಪ್ರಕರಣ ದಾಖಲಾದ ಬಳಿಕ ಬೆಳಗಾವಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತಂದು ಪರೀಕ್ಷೆ ಮಾಡಲಾಗುವುದು ಎಂದರು./////