Belagavi News In Kannada | News Belgaum

ಕರಾಳ ಸತ್ಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಎಂಬಿ ಜಿರಲಿ ಹೇಳಿದ್ದಾರೆ.

ಬೆಳಗಾವಿ : ಜೂನ್ 25 1975ರಲ್ಲಿ ಇಂಧಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ದೇಶದಲ್ಲಿ ಹೇರಿದ್ದ ತುರ್ತು ಪರೀಸ್ಥಿತಿಯ ಕರಾಳ ಸತ್ಯವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಬಿಜೆಪಿ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ವಕ್ತಾರ ಎಂಬಿ ಜಿರಲಿ ಹೇಳಿದ್ದಾರೆ.

 

ಬೆಳಗಾವಿ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಎಂ.ಬಿ ಜಿರಲಿ ರವರು, 1975ರಲ್ಲಿ ದೇಶದಲ್ಲಿ ಹೇರಲಾಗಿದ್ದ ತುರ್ತು ಪರೀಸ್ಥಿತಿಯನ್ನು ಕುರಿತಂತೆ ಬೇಸರ ವ್ಯಕ್ತಪಡಿಸಿದರು.

ಜೂನ್ 25, 1975ರಲ್ಲಿ ದೇಶದ ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಇಂದಿರಾ ಗಾಂಧಿ ನೇತೃತ್ವದ ಸರಕಾರ ದೇಶದಲ್ಲಿ ತುರ್ತು ಪರೀಸ್ಥಿತಿಯನ್ನು ಘೋಷಣೆ ಮಾಡಿತ್ತು. ದೇಶದ ಪ್ರತಿಯೊಬ್ಬ ಪ್ರಜೆ ದೇಶದ ಈ ದೇಶದ ರಾಜಕೀಯ ಭವಿಷ್ಯವನ್ನು ತಿಳಿಯಬೇಕು. ಇದು ಕಾಂಗ್ರೆಸ್ ದೇಶದ ಪ್ರಜಾಪ್ರಭುತ್ವದೊಡನೆ ಮಾಡುವ ಚೆಲ್ಲಾಟವಾಗಿದೆ.

 

ತುರ್ತು ಪರೀಸ್ಥಿತಿಯ ಅವಧಿಯಲ್ಲಿ ಕೆಲ ನಾಯಕರನ್ನು ಜೈಲ;ಇಗೆ ಹಾಕಲಾಗಿತ್ತು. ಈ ವೇಳೆ ದೇಶದ ಪ್ರಜಾಪ್ರಭುತ್ವ ಉಳಿವಿಗಾಗಿ ಹೋರಾಡಿದ ನಾಯಕರನ್ನು ಸ್ಮರಿಸುವ ಕೆಲಸವಾಗಬೇಕು.

ಅದಕ್ಕಾಗಿ ಇಂದು ಸಾಯಂಕಾಲ ನಾವು ತುರ್ತು ಪರೀಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹಾಕಲಾಗಿದ್ದ ನಾಯಕರನ್ನು ಕರೆದು ಅವರನ್ನು ಸನ್ಮಾನಿಸುವ ಕೆಲಸ ಮಾಡುತ್ತಿದ್ದೇವೆ.

 

ನಗರದ ಕೆಎಲ್‍ಇ ಜೀರಗೆ ಹಾಲ್‍ನಲ್ಲಿ ಇಂದು ಸಾಯಂಕಾಲ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ದೇಶದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಈ ಕರಾಳ ದಿನವನ್ನು ಆಚರಣೆ ಮಾಡುವಂತೆ ಹೇಳಲಾಗಿದೆ. ಈ ವೇಳೆ ಜನರಿಗೆ ಈ ಅವಧಿಯಲ್ಲಿ ದೇಶಕ್ಕಾದ ನಷ್ಟ ಕುರಿತಂತೆ ಜನರಿಗೆ ತಿಳಿಸುವ ಕೆಲಸವಾಗಬೇಕು ಎಂದರು.

 

ಮುಂದುವರೆದು ಮಾತನಾಡಿದ ಅವರು, ಈ ದಿನ 1975ರ ಅವಧಿಯಲ್ಲಿ ದೇಶದಲ್ಲಿ ತುರ್ತು ಪರೀಸ್ಥಿತಿಯನ್ನು ಎಲ್ಲಾ ಜನರು ವಿರೋಧ ವ್ಯಕ್ತಪಡಿಸಿದರು. ಬೆಳಗಾವಿ ನಗರದಲ್ಲಿ ಅಪ್ಪಾ ಸಾಹೇಬ್ ಮುತಕೇಕರ್, ದಿ. ಗಣಪತ್‍ರಾವ್ ಕುಲಕರ್ಣಿ ರವರು

ಹಣಮಂತರಾವ್ ಮುತಾಲಿಕ್‍ರವರು, ರಾಮಚಂದ್ರ ಜೋಶಿ, ವಿಲಾಸರಾವ್ ಪವಾರ್, ಬಂಡೋಪಂತ ಜೋಶಿರವರು,

ಪಾಂಡುರಂಗ ನಿಕಾರ್ಗೆರವರು ಜೈಲುವಾಸವನ್ನು ಅನುಭವಿಸಿದರು. ಈ ವೇಳೆ ಈ ಎಲ್ಲಾ ನಾಯಕರನ್ನು ಯಾವುದೇ ಕಾರಣವಿಲ್ಲದೇ ಜೈಲಿಗೆ ಕಳಿಸಲಾಗುತ್ತೆ.

 

ದೇಶವೇ ಜೈಲಾಗಿ ಪರಿವರ್ತನೆಯಾಗಿತ್ತು. ಇದು ದೇಶದಲ್ಲಿ ನಾಝಿ ರೀತಿಯ ಸರಕಾರವನ್ನು ಸ್ಥಾಪನೆ ಮಾಡಿತ್ತು. ದೇಶದಲ್ಲಿ ಅವರು ಮಾಡಿದ್ದೇ ಕಾನೂನು, ಆಡಿದ್ದೇ ಆಟ ಎನ್ನುವ ರೀತಿ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲಾಗಿತ್ತು.

ಈ ವೇಳೆ ಅನೇಕ ಜನ ಪ್ರಾಣವನ್ನೇ ಕಳೆದುಕೊಂಡರು. 1975ರ ಅವಧಿಯಲ್ಲಿ ಬೆಳಗಾವಿಯಲ್ಲಿ ಅಪ್ಪಣ್ಣಗೌಡ ಪಾಟೀಲ್ ನೇತೃತ್ವದಲ್ಲಿ ಶಾಲೆಗಳನಮ್ನು ಬಂದ್ ಮಾಡಿ ಬೀದಿಗಳಿಗೆ ಇಳಿದು ಹೋರಾಟ ಮಾಡಲಾಯಿತು ಎಂದು ಆ ದಿನಗಳ ನೆನಪುಗಳನ್ನು ಸ್ಮರಿಸಿಕೊಂಡರು