Belagavi News In Kannada | News Belgaum

ಹಳ್ಳದಲ್ಲಿ  7 ಭ್ರೂಣಗಳ ಪತ್ತೆ ಪ್ರಕರಣ ಸಂಬಂಧ ಕೃತ್ಯವಸಗಿದ ಆಸ್ಪತ್ರೆ ವಿರುದ್ಧ ಜಿಲ್ಲಾ ವೈದ್ಯಾಧಿಕಾರಿಯವರು ಕ್ರಮ ಕೈಗೊಂಡಿದ್ದಾರೆ.

ಬೆಳಗಾವಿ: ಮೂಡಲಗಿ ಪಟ್ಟಣದ ಹಳ್ಳದಲ್ಲಿ  7 ಭ್ರೂಣಗಳ ಪತ್ತೆ ಪ್ರಕರಣ ಸಂಬಂಧ ಕೃತ್ಯವಸಗಿದ ಆಸ್ಪತ್ರೆ ವಿರುದ್ಧ ಜಿಲ್ಲಾ ವೈದ್ಯಾಧಿಕಾರಿಯವರು ಕ್ರಮ ಕೈಗೊಂಡಿದ್ದಾರೆ.
ಭ್ರೂಣಗಳನ್ನ ಎಸೆದಿದ್ದ ವೆಂಕಟೇಶ್ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್​ ಅನ್ನು ಜಿಲ್ಲಾಧಿಕಾರಿಯವರು ಜಪ್ತಿ ಮಾಡಿದ್ದಾರೆ. 3 ವರ್ಷಗಳಿಂದ ಅಬಾಷನ್ ಮಾಡಿದ್ದ ಏಳು ಭ್ರೂಣಗಳನ್ನು ಆಸ್ಪತ್ರೆಯಲ್ಲೇ ಇಡಲಾಗಿತ್ತು. ಅದಾಗ್ಯೂ ಪೊಲೀಸರ ದಾಳಿಯ ಭೀತಿಯಿಂದ ಆಸ್ಪತ್ರೆ ಸಿಬ್ಬಂದಿ ಭ್ರೂಣಗಳನ್ನು ಜೂ.23ರಂದು 5 ಬಾಟಲ್‌ಗಳಲ್ಲಿ ತುಂಬಿಸಿ ಹಳ್ಳಕ್ಕೆ ಎಸೆದಿರುವುದು ಬೆಳಕಿಗೆ ಬಂದಿದೆ.
ಭ್ರೂಣ ಪತ್ತೆ ಹಾಗೂ ಹತ್ಯೆ ಕಾನೂನು ಪ್ರಕಾರ ಅಪರಾಧವಾಗಿದೆ. ಅದಾಗ್ಯೂ ಮೂಡಲಗಿ ಪಟ್ಟಣದಲ್ಲಿನ ಹಳ್ಳದಲ್ಲಿ ಭ್ರೂಣಗಳು ಪತ್ತೆಯಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆಗೆ ಇಳಿದಿದ್ದಾರೆ. ಅದರಂತೆ ಪಟ್ಟಣದಲ್ಲಿರುವ ವೆಂಕಟೇಶ್ ಆಸ್ಪತ್ರೆ ಸಿಬ್ಬಂದಿಗಳನ್ನು ತನಿಖೆ ನಡೆಸಿದಾಗ ಆಸ್ಪತ್ರೆಯ ಕಾನೂನು ಬಾಹಿರ ಚಟುವಟಿಕೆ ಬೆಳಕಿಗೆ ಬಂದಿದೆ.
ಪೊಲೀಸರ ಪ್ರಾಥಮಿಕ ತನಿಖೆ ವೇಳೆ ವೆಂಕಟೇಶ ಆಸ್ಪತ್ರೆ ಆಡಳಿತ ಮಂಡಳಿಯು ತಮ್ಮದೇ ಆಸ್ಪತ್ರೆ ಭ್ರೂಣಗಳು ಎಂದು ತಪ್ಪೊಪ್ಪಿಕೊಂಡಿದ್ದಾರೆ.
ಏನಿದು ಪ್ರಕರಣ;
ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ಬಸ್ ನಿಲ್ದಾಣದ ಸಮೀಪ ಇರುವ ಹಳ್ಳದಲ್ಲಿ ನಾಲ್ಕು ನವಜಾತ ಶಿಶುಗಳ ಮೃತ ದೇಹ ಶುಕ್ರವಾರ ಪತ್ತೆಯಾಗಿತ್ತು. ಒಟ್ಟು ಐದು ಬಾಟಲ್​ಗಳಲ್ಲಿ ಏಳು ಭ್ರೂಣಗಳನನ್ನು ಹಾಕಿ ಹಳ್ಳದಲ್ಲಿ ಬಿಟ್ಟಿದ್ದರು. ಇದನ್ನು ನೋಡಿದ ಜನರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಭೇಡಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದರು.