Belagavi News In Kannada | News Belgaum

ಗೃಹಿಣಿ ಮೇಲೆ ಅತ್ಯಾಚಾರ ಎಸಗಿ ಕೊಲೆ: ತನಿಖೆ ಚುರುಕುಗೊಳಿಸಿದ ಖಾಕಿ ಪಡೆ

ದಾವಣಗೆರೆ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಅತ್ಯಾಚಾರ ಮಾಡಿ ಕೊಲೆ‌ ಮಾಡಿರುವ ಆರೋಪ ಹಿನ್ನೆಲೆ ಹೊನ್ನಾಳಿ ಪೋಲಿಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

ಮನೆಯಲ್ಲಿ ವಿವಾಹಿತ ಮಹಿಳೆ ಒಬ್ಬರೇ ಇರುವುದನ್ನ ಆರೋಪಿ ಗಮನಿಸಿದ್ದಾನೆ. ಬಳಿಕ 40 ವರ್ಷದ ಗೃಹಿಣಿ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಿ ಏನು ತಿಳಿಯದಂತೆ ಸುಮ್ಮನ್ನಿದ್ದನು. ಇಂತಹ ಅಮಾನವೀಯ ಕೃತ್ಯ ಗುರುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮೃತಳ ಪತಿ ಕೆಲಸದ ನಿಮಿತ್ತ ಗ್ರಾಮವೊಂದಕ್ಕೆ ತೆರಳಿದ್ದರು.ತಮ್ಮ ಕೆಲಸ ಮುಗಿಸಿ ಮನೆಗೆ ಮರಳಿದಾಗ ಪತ್ನಿ ಶವವಾಗಿ ಬಿದ್ದಿರುವುದನ್ನು ಕಂಡು ದಂಗಾದರು. ಕೂಡಲೇ ಪೊಲೀಸ್​ ಠಾಣೆಗೆ ತೆರಳಿ ದೂರು ನೀಡಿದ್ದರು. ಪೊಲೀಸರು ಯಾರ ಮೇಲಾದರೂ ಅನುಮಾನ ಇದೆಯಾ ಎಂದು ಪ್ರಶ್ನಿಸಿದಾಗ ಗ್ರಾಮದ ಹರೀಶ್​ ಎಂಬ ವ್ಯಕ್ತಿ ಹೆಸರನ್ನು ಹೇಳಿದ್ದಾರೆ. ಈ ಹಿನ್ನೆಲೆ ಹೊನ್ನಾಳಿ ಪೋಲಿಸರು ಹರೀಶ್ ಎಂಬಾತನನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ.

ಘಟನಾ ಸ್ಥಳಕ್ಕೆ ಎಸ್ಪಿ ರಿಷ್ಯಂತ್, ಡಿವೈಎಸ್ಪಿ ಡಾ.ಸಂತೋಷ್, ಸಿಪಿಐ ದೇವರಾಜ್, ಪಿಎಸ್‌ಐ ಬಸವನಗೌಡ ಬಿರಾದರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಸುವುದಾಗಿ ಪೋಲಿಸರು ತಿಳಿಸಿದ್ದಾರೆ.//////