Belagavi News In Kannada | News Belgaum

ಅರಿವಿಲ್ಲದೇ ಗಿಳಿ ಮಾರಾಟ; ಆರೋಪಿ ವಶಕ್ಕೆ

ಬೆಳಗಾವಿ: ಇಲ್ಲಿನ ಪಾಟೀಲ ಮಾಳದಲ್ಲಿ ಶನಿವಾರ ನಾಲ್ಕು ಗಿಳಿಗಳನ್ನು ಮಾರಾಟ ಮಾಡುತ್ತಿದ್ದ ಯುವಕನನ್ನು ಸ್ಥಳೀಯ ಅಕ್ವೇರಿಯಂ ಹಾಗೂ ಹಕ್ಕಿಗಳ ಮಾರಾಟ ಅಂಗಡಿಯವರು ಹಿಡಿದು, ಅರಣ್ಯ ಇಲಾಖೆಗೆ ಒಪ್ಪಿಸಿದರು.

ನಗರದ ತಾಂಗಡಿ ಗಲ್ಲಿಯ ನಿವಾಸಿ ಆಕಾಶ ಗುರವ ಆರೋಪಿ. ಅವರೊಂದಿಗೆ ಬಂದಿದ್ದ ಮತ್ತೊಬ್ಬ ಯುವಕ ಪರಾರಿಯಾಗಿದ್ದಾನೆ. ‘ನಾನು ಲವ್ ಬರ್ಡ್ಸ್‌ ಮಾರುತ್ತಿದ್ದೆ. ಆದರೆ, ಗಿಳಿಗಳನ್ನು ಮಾರುವುದು ನಿಯಮ ಬಾಹಿರ ಎಂದು ತಿಳಿದಿರಲಿಲ್ಲ. ಹಾಗಾಗಿ ₹1 ಸಾವಿರದಿಂದ ₹1,200ಕ್ಕೆ ಒಂದು ಜೊತೆ ಗಿಳಿ ಮಾರುತ್ತಿದ್ದೆ. ಇನ್ನು ಮುಂದೆ ಈ ತಪ್ಪು ಮಾಡುವುದಿಲ್ಲ’ ಎಂದು ತಪ್ಪೊಪ್ಪಿಕೊಂಡಿದ್ದಾಗಿ, ಅರಣ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.//////