ಪಾಲಕರ ಹೆಸರು ತರುವುದರೊಂದಿಗೆ ನಾಡು-ನುಡಿ, ದೇಶ ಕಟ್ಟುವ ಕೆಲಸ ಮಾಡಬೇಕು : ಡಾ.ರವಿ ಪಾಟೀಲ

ಬೆಳಗಾವಿ:ಇಂದಿನ ಯುವಕರು ಶಿಕ್ಷಕರ ಮಾರ್ಗದರ್ಶನದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಜ್ಞಾನವಂತರಾಗುವ ಮೂಲಕ ಪಾಲಕರ ಹೆಸರು ತರುವುದರೊಂದಿಗೆ ನಾಡು-ನುಡಿ, ದೇಶ ಕಟ್ಟುವ ಕೆಲಸ ಮಾಡಬೇಕು” ಎಂದು ವಿಜಯ ಆಥ್ರ್ತೋ ಎಂಡ್ ಟ್ರಾಮಾ ಸೆಂಟರ್ ಅಧ್ಯಕ್ಷ ಡಾ.ರವಿ ಪಾಟೀಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬೆಳಗಾವಿಯ ಶಿವಬಸವ ನಗರದ
ಶ್ರೀ ಸಿದ್ದರಾಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ‘ಪ್ರಥಮ ಪಿ.ಯು.ಸಿ ವಿಜ್ಞಾನ ವಿಭಾಗದ ‘ಆರಂಭೋತ್ಸವ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ” ಬೆಳಗಾವಿ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಕಡಿಮೆ ಶುಲ್ಕದಲ್ಲಿ ನಾಗನೂರು ರುದ್ರಾಕ್ಷಿ ಮಠದ ಸಂಸ್ಥೆ ಪ್ರಸಾದ ನಿಲಯದೊಂದಿಗೆ ವಿವಿಧ ಕೋರ್ಸುಗಳನ್ನು ನಡೆಸುತ್ತಿದೆ. ಹೊಲ, ಗದ್ದೆಗಳಲ್ಲಿ ಬಿಸಿಲು-ಮಳೆ ಎನ್ನದೆ ಕಷ್ಟಪಟ್ಟು ಕೆಲಸ ಮಾಡುವ ಪಾಲಕರು ಸದಾ
ವಿದ್ಯಾರ್ಥಿಗಳ ಕಣ್ಣ ಮುಂದಿರಬೇಕು. ದುಶ್ಚಟಗಳಿಗೆ ಬಲಿಯಾಗದೆ ಒಳ್ಳೆಯ ಆರೋಗ್ಯ ಇಟ್ಟುಕೊಂಡು ನಿಯಿಂದ ಜ್ಞಾನ ಪಡೆಯಬೇಕು. ತನ್ಮೂಲಕ ಮಕ್ಕಳ ಮೇಲೆ ಹತ್ತಾರು ಕನಸು ಇಟ್ಟುಕೊಂಡಿರುವ ತಂದೆ-ತಾಯಿ-ಗುರುವಿನ ಋಣ ತೀರಿಸಬೇಕು” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿಗಳಾದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಮಾತನಾಡಿ, ” ಪ್ರೌಢಾವಸ್ಥೆಯಲ್ಲಿರುವ ವಿದ್ಯಾರ್ಥಿಗಳ ಜೀವನದ ಅತ್ಯಂತ ಮಹತ್ವದ ತಿರುವಿನ ಹಂತ ಇದಾಗಿದ್ದು, ಮನಸ್ಸನ್ನು ಅತ್ತಿತ್ತ ಹರಿಯಗೊಡದೆ ಏಕಾಗ್ರತೆಯೊಂದಿಗೆ ಕಲಿಯಬೇಕು. ನಿಮ್ಮ ಜೀವನದ ಭದ್ರ ಬುನಾದಿ ಗಟ್ಟಿಯಾಗಿದ್ದರೆ ಭವಿಷ್ಯ ಸ್ಥಿರವಾಗಿರಬಲ್ಲುದು. ಹೀಗಾಗಿ ಪಠ್ಯದೊಂದಿಗೆ ಮೌಲಿಕ ಜೀವನ ನಿಮ್ನದಾಗಬೇಕು. ಆ ಮೂಲಕ ಒಳ್ಳೆಯ ಅಂಕ ಪಡೆದು ಸಂಸ್ಥೆಗೆ, ಗುರು-ಹಿರಿಯರಿಗೆ ಹೆಸರು ತರಬೇಕು” ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಬಿ.ಹಿರೇಮಠ ಮಾತನಾಡಿದರು.
ಎಸ್. ಎಸ್. ಪಿ. ಯು ಕಾಲೇಜಿನ ಪ್ರಾಚಾರ್ಯ ಡಾ. ಸಿದ್ರಾಮರೆಡ್ಡಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರವೀಣ ಪಾಟೀಲ ಸ್ವಾಗತಿಸಿದರು. ವಿದ್ಯಾರ್ಥಿನಿ ಕವನ ಅತಿಥಿಗಳ ಪರಿಚಯಿಸಿದಳು. ಕಾಲೇಜಿನ ವಿದ್ಯಾರ್ಥಿಗಳಾದ ಸೃಜನಾ ಮತ್ತು ಸುಜಲ ನಿರೂಪಿಸಿದರು.
ವಿದ್ಯಾರ್ಥಿ ಅಜರ್ ವಂದನಾರ್ಪಣೆ ಮಾಡಿದರು.//////