Belagavi News In Kannada | News Belgaum

ರಾಮದುರ್ಗ ತಹಶೀಲ್ದಾರ ಮರಳು ಅಕ್ರಮ ಸಾಗಾಣಿಕೆಗೆ ಸಾಥ, ಸೂಕ್ತ ಕ್ರಮಕ್ಕೆ ಎಎಪಿ ಆಗ್ರಹ

ಬೈಲಹೊಂಗಲ;  ರಾಮದುರ್ಗ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರು ಮರಳು ಅಕ್ರಮ ಸಾಗಾಣಿಕೆಗೆ ಸಾಥ ನೀಡುತ್ತಿದ್ದಾರೆ ಅಪಾದಿಸಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ  ಆಮ್ ಆದ್ಮಿ ಪಕ್ಷ ಬೈಲಹೊಂಗಲ ಘಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.

ಆಮ್ ಆದ್ಮಿ ಪಕ್ಷ ಬೈಲಹೊಂಗಲ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಬಿ.ಎಂ.ಚಿಕ್ಕನಗೌಡರ ಮಾತನಾಡಿ,  ರಾಮದುರ್ಗ ತಾಲೂಕಾ ತಹಶೀಲದಾರ ಮಲ್ಲಿಕಾರ್ಜುನ ಹೆಗ್ಗಣ್ಣವರ ಮರುಳು ಅಕ್ರಮ ಸಾಗಾಣಿಕೆಗೆ ಸಾಥ್ ನೀಡಿದ್ದಲ್ಲದೇ ಸಾಗಾಣಿಕೆದಾರರಿಂದಲೇ ಎರಡು ಲಾರಿ ಮರುಳು ತಮ್ಮ ಸಂಬಂಧಿಕರಿಗೆ ಬಿಡುವಂತೆ ಬೆದರಿಸಿ, ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಧ್ವನಿಸುರಳಿ ಸಾಮಾಜಿಕ ಜಾಲತಾನದಲ್ಲಿ ಹರಿದಾಡಿತ್ತಿದ್ದು ಅಕ್ರಮ ಮರುಳು ಸಾಗಾಣಿಕೆಗೆ ತಡೆಯೊಡ್ಡುವ ಅಧಿಕಾರಿಗಳಿಂದಲೇ ಮರುಳು ಅಕ್ರಮ ಸಾಗಾಣಿಕೆಗೆ ಪ್ರಚೋದಣಿ ನೀಡಿದ ಹಿನ್ನೆಲೆಯಲ್ಲಿ ಮರುಳು ಸಾಗಾಣಿಕೆದಾರರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ಅಧಿಕಾರ ದುರುಪಯೋಗ ಪಡಿಸಿಕೊಂಡ  ಇವರನ್ನು ಸೇವೆಯಿಂದ ಅಮಾನತ್‍ಗೊಳಿಸಿ, ಇವರನ್ನು ಬಂದಿಸಿ ವಿಚಾರಣೆಗೆ ಒಳಪಡಿಸಬೇಕು.

ಅಲ್ಲದೇ ತಹಶೀಲ್ದಾರ ಅವರ ಸಂಭಾಷಣಿಯ ಧ್ವನಿಸುರಳಿಯನ್ನು ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ   ಮಹಾಂತೇಶ ಹಿರೇಮಠ, ಪ್ರವೀಣ ರೇಣಕೆ, ಮನೋಜ ಕೆಳಗೇರಿ, ಗೌಡಪ್ಪ ಪಾಟೀಲ, ಲಕ್ಷ್ಮಣ ಪೂಜೇರ, ವಿಠ್ಠಲ ಮನ್ನಿಕಟ್ಟಿ, ನಾಗರಾಜ ನಾಯ್ಕರ, ಅಶೋಕ ಶಿವಾಪೂರ ಮುಂತಾದವರು ಇದ್ದರು.  ///////