ಅಕ್ರಮ ತಂಬಾಕು ಮಾರಾಟ: 45 ಪ್ರಕರಣಗಳು ದಾಖಲು

ಬೆಳಗಾವಿ : ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆ ಅಧಿಕಾರಿಗಳು ಬೆಳಗಾವಿಯ ಶ್ರೀನಗರದಲ್ಲಿ Àಗರ ಕೋಟ್ಪಾ -2003 ಕಾಯ್ದೆಯಡಿಯಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ಮೇಲೆ ಮಂಗಳವಾರ(ಜೂನ್28) ದಾಳಿ ನಡೆಸಿ 45 ಪ್ರಕರಣಗಳನ್ನು ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಡಾ. ಬಿ.ಎನ್. ತುಕ್ಕಾರ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು, ಡಾ.ಶ್ವೇತಾ ಪಾಟೀಲ ಜಿಲ್ಲಾ ಸಲಹೆಗಾರರು, ಕವಿತಾ ರಾಜನ್ನವರ ಸಮಾಜ ಕಾರ್ಯಕರ್ತೆ, ಪೊಲೀಸ್ ಇಲಾಖೆಯ ಆರತಿ ಆವಳೆ, ವಿದ್ಯಾ ಬಡಿಗೇರ, ಆರ್.ಜಿ. ಜಿನಜಿ ಪೊಲೀಸ ಸಿಬ್ಬಂದಿಗಳು ಸದರಿ ದಾಳಿಯಲ್ಲಿ ಪಾಲ್ಗೊಂಡಿದ್ದರು./////