Belagavi News In Kannada | News Belgaum

ಮಗುವಿನೊಂದಿಗೆ ತಾಯಿ ಆತ್ಮಹತ್ಯೆಶರಣು: ಅದೃಷ್ಟವಶಾತ್ ಬದುಕುಳಿದ ಮಗು, ತಾಯಿ ಸಾವು

 ಸುಳ್ಯ  : ಮನನೊಂದು ಮಗುವಿನೊಂದಿಗೆ  ತಾಯಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ನಡೆದಿದೆ‌.ಅದೃಷ್ಟವಶಾತ್ ಮೂರು ವರ್ಷದ ಮಗು ಪೂರ್ವಿಕಾ ಬದುಕುಳಿದಿದೆ.

ತಾಯಿ ಮೃತಪಟ್ಟಿದ್ದಾರೆ. ತಳೂರು ದಯಾನಂದ ಎಂಬವರ ಪತ್ನಿ ಗೀತಾ ಮೃತಪಟ್ಟ ಮಹಿಳೆ.  ಇವರು ಸುಳ್ಯದ ಖಾಸಗಿ ಕಾಲೇಜಿನಲ್ಲಿ ಕಛೇರಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು.

ಮಗು ಕೆರೆಯೊಳಗೆ ಕಲ್ಲಿನ‍ ಸಹಾಯದಿಂದ ಬದುಕುಳಿದಿದ್ದು, ಸುಳ್ಯ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತಂದಿರುವುದಾಗಿ ತಿಳಿದು ಬಂದಿದೆ.
ಮನೆಯವರು ಹಾಗೂ ಸ್ಥಳೀಯರ ಸಹಕಾರದಿಂದ ಮಗುವನ್ನು ರಕ್ಷಿಸಲಾಯಿತು ಎಂದು ತಿಳಿದುಬಂದಿದೆ. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.//////