Belagavi News In Kannada | News Belgaum

ಮದ್ಯದ ಚಟ ಬಿಡು ಎಂದಿದ್ದಕ್ಕೆ ಪತ್ನಿಯನ್ನೇ ಗುಂಡಿಕ್ಕಿ ಕೊಂದ ಪತಿ

ಲಕ್ನೋ: ಮದ್ಯ ಕುಡಿಯಬೇಡಿ ಎಂದು ವಿರೋಧಿಸಿದ್ದಕ್ಕಾಗಿ ಪತ್ನಿಯನ್ನು ವಕೀಲನೊಬ್ಬ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಆರೋಪಿ ಅಶೋಕ್ ಕುಮಾರ್ ಚೌರಾಸಿಯಾ ಪತ್ನಿ ಪುಷ್ಪಾ ಚೌರಾಸಿಯಾಯನ್ನು ಹತ್ಯೆ ಮಾಡಿದ್ದ. ಇವರಿಬ್ಬರು ಲಕ್ನೋದ ಠಾಕುರ್‌ಗಂಜ್ ನಿವಾಸಿ ಆಗಿದ್ದಾರೆ. ಪತಿ ಅಶೋಕ್ ಕುಮಾರ್ ಮದ್ಯದ ಚಟವನ್ನು ಹೊಂದಿದ್ದ. ಇದನ್ನು ಪುಷ್ಪಾ ವಿರೋಧಿಸಿದ್ದಳು. ಈ ಹಿನ್ನೆಲೆಯಲ್ಲಿ ಆಗಾಗ ಇವರಿಬ್ಬರ ಮಧ್ಯೆ ಜಗಳವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಕೋಪ ಮಿತಿಮೀರಿದ್ದು, ಕುಡಿದಿದ್ದ ಅಶೋಕ್ ತನ್ನ ಬಂದೂಕಿನಿಂದ ಪುಷ್ಪಾಗೆ ಗುಂಡು ಹಾರಿಸಿದ್ದಾನೆ. ತಕ್ಷಣ ಸ್ಥಳೀಯರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ವಕೀಲ ಅಶೋಕ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ./////