Belagavi News In Kannada | News Belgaum

ಮಾನವೀಯತೆ ಮರೆದು ಇತರರಿಗೆ ಮಾದರಿಯಾದ ನೂತನ ವಿಧಾನ ಪರಿಷತ್ ಸದಸ್ಯ  ಹಣಮಂತ ನಿರಾಣಿ.

ಬಾಗಲಕೋಟೆ : ಮಾನವೀಯತೆ ಮರೆದು ಇತರರಿಗೆ ಮಾದರಿಯಾದ ನೂತನ ವಿಧಾನ ಪರಿಷತ್ ಸದಸ್ಯ  ಹಣಮಂತ ನಿರಾಣಿ. ಬೈಕ್ ಅಪಘಾತದಲ್ಲಿ ರಸ್ತೆಯ ಮೇಲೆ ಬಿದ್ದಿದ್ದ ಇಬ್ಬರು ಯುವಕರಿಗೆ ಸಹಾಯ ಮಾಡಿ ಎರಡು ಅಮೂಲ್ಯ ಜೀವಗಳನ್ನು ಉಳಿಸುವ ಮೂಲಕ ವಿಧಾನ ಪರಿಷತ್ ಸದಸ್ಯ   ಹಣಮಂತ ನಿರಾಣಿ ಅವರು ಮಾನವೀಯತೆ ಮೆರೆದಿದ್ದಾರೆ.

ಇಂದು ಬಾಗಲಕೋಟೆ ಜಿಲ್ಲೆ ಬೀಳಗಿ ಪಟ್ಟಣದಿಂದ ಬಾದಾಮಿಗೆ ತೆರಳುತ್ತಿದ್ದ ವೇಳೆ ಬಾದಾಮಿ ತಾಲೂಕಿನ ಕಾಡರಕೊಪ್ಪ ಗ್ರಾಮದ ಬಳಿ ಬೈಕ್ ಅಪಘಾತವಾಗಿ ಇಬ್ಬರು ಯುವಕರು ರಸ್ತೆಯ ಪಕ್ಕದಲ್ಲಿ ಬಿದ್ದಿದ್ದರು. ಅದೇ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದ ವಿಪ ಸದಸ್ಯ ಹಣಮಂತ ನಿರಾಣಿ ಅವರು ತಕ್ಷಣವೇ ತಮ್ಮ ವಾಹನ ನಿಲ್ಲಿಸಿ ಗಾಯಗೊಂಡಿದ್ದ ಯುವಕರನ್ನು ವಿಚಾರಿಸಿ ಅಂಬ್ಯುಲೆನ್ಸ ಕರೆಸಿ ಯುವಕರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿಕೊಟ್ಟರು. ವಿಧಾನ ಪರಿಷತ್ ಸದಸ್ಯರ ಈ ಮಾನವೀಯತೆಗೆ ಜನ ಮೆಚ್ಚುಗೆ ಸೂಚಿಸಿದರು.