Belagavi News In Kannada | News Belgaum

ಸಿದ್ದರಾಮಯ್ಯ ಜನ್ಮ ದಿನಾಚರಣೆ ಉತ್ತರ ಕರ್ನಾಟಕದ ಅಭಿಮಾನಿಗಳಲ್ಲಿ ಖುಷಿ ತಂದಿದೆ : ಅಯ್ಯಪ್ಪಗೌಡ ಗಬ್ಬೂರು.

 

ಬೆಂಗಳೂರು : ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರು ಸಿದ್ದರಾಮಯ್ಯ ಅವರಿಗೆ ಆಗಸ್ಟ್ – 3 ಕ್ಕೆ 75 ವರ್ಷ ತುಂಬುತ್ತಿದ್ದು ಈ ಹುಟ್ಟು ಹಬ್ಬ ಸಂಭ್ರಮವನ್ನು ದಾವಣಗೆರೆಯಲ್ಲಿ ಮಾಡುತ್ತಿರುವುದು ಸಿದ್ದರಾಮಯ್ಯ- 75 ಅಮೃತ ಮಹೋತ್ಸವ ಅಭಿನಂದನಾ ಸಮಿತಿಗೆ ಕುರುಬ ಸಮಾಜದ ರಾಜ್ಯ ಯುವ ಮುಖಂಡರು ಅಯ್ಯಪ್ಪಗೌಡ ಗಬ್ಬೂರು ಹೃದಯಪೂರ್ವಕ ಅಭಿನಂದನೆಗಳು ತಿಳಿಸಿದ್ದರೆ.

ಈ ಸಮಾವೇಶದ ಉದ್ಘಾಟನೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಭಾಗವಹಿಸುತ್ತಿರುವುದು ಹೆಮ್ಮೆ ಅನಿಸುತ್ತಿದೆ ಎಂದರು.

ಉತ್ತರ ಕರ್ನಾಟಕದ ಜಿಲ್ಲೆಗಳಿಂದ ಅತಿ ಹೆಚ್ಚು ಲಕ್ಷಾಂತರ ಸಿದ್ದರಾಮಯ್ಯ ಅಭಿಮಾನಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.

ಸಿದ್ದರಾಮಯ್ಯ ಬಡವರ,ನೊಂದವರ,ಸೇವೆಗಾಗಿ ಹೋರಾಟ ಮಾಡಲು ರಾಜಕೀಯಕ್ಕೆ ಧುಮುಕಿದರು. ಶಾಸಕ,ಸಚಿವರು, ಉಪ ಮುಖ್ಯಮಂತ್ರಿಗಳು,ಹಾಗೂ ವಿರೋಧ ಪಕ್ಷದ ನಾಯಕರಾಗಿ ನಾಲ್ಕು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅನನ್ಯವಾದದು.

ರೈತ ಕುಟುಂಬದಿಂದ ಕಷ್ಟ ಪಟ್ಟು, ಸಾಧನೆ ಮಾಡಿದ್ದಾರೆ ಹೀಗಾಗಿ ಅವರನ್ನು ಅಭಿನಂದಿಸಲು ಕಾರ್ಯಕ್ರಮ ಮಾಡುತ್ತಿರುವುದು ಖುಷಿಯಾಗುತ್ತಿದೆ ಎಂದರು.

ಸಾಮಾಜಿಕ ನ್ಯಾಯದ ಪರವಾಗಿ ಅವರು ಹಲವಾರು ಹೋರಾಟದಲ್ಲಿ ಭಾಗವಹಿಸಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ಏಳು ಬೀಳು ಕಂಡಿದ್ದಾರೆ. ರಾಜಕೀಯವಾಗಿ ಪ್ರಾಮಾಣಿಕವಾಗಿ ಉಳಿಯುವುದು ಕಷ್ಟ, ಆದರೆ ಸಿದ್ದರಾಮಯ್ಯನವರು ಪ್ರಾಮಾಣಿಕವಾಗಿ ಉಳಿದಿದ್ದಾರೆ ಎಂದರು.

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಅನ್ನಭಾಗ್ಯ,ಕ್ಷೀರಭಾಗ್ಯ,ವಿದ್ಯಾಸಿರಿ,ಶಾಧಿಭಾಗ್ಯ ಸೇರಿ ಅನೇಕ ಯೋಜನೆಗಳು ಭಾಗ್ಯಗಳನ್ನು ಕೊಟ್ಟಿದ್ದಾರೆ. ಅವರ ಆಡಳಿತ ಕರ್ನಾಟಕ ಜನತೆ ಮೆಚ್ಚಿಕೊಂಡಿದ್ದಾರೆ.ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲಾ ಭರವಸೆ ಈಡೇರಿಸಿ ಕರ್ನಾಟಕದ ಎರಡನೇ ಡಿ.ದೇವರಾಜ್ ಅರಸು ಎಂದು ಬಿರುದು ಪಡೆದಿದ್ದಾರೆ.

ಸಿದ್ದರಾಮಯ್ಯ ಹುಟ್ಟು ಹಬ್ಬಕ್ಕೆ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಲಕ್ಷಾಂತರ ಅತಿ ಹೆಚ್ಚು ಸಿದ್ದರಾಮಯ್ಯ ಅಭಿಮಾನಿಗಳು ಇದ್ದಾರೆ. ಈ ಸಮಾವೇಶ ನೋಡಲು ಕಾತುರರಾಗಿದ್ದಾರೆ ಸ್ವಯಂ ಪ್ರೇರಿತವಾಗಿ ಅಭಿಮಾನಿಗಳು ಎಲ್ಲರೂ ಭಾಗವಹಿಸಲಿದ್ದಾರೆ ಎಂದು ಅಯ್ಯಪ್ಪಗೌಡ ಗಬ್ಬೂರು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದರೆ.