Belagavi News In Kannada | News Belgaum

ಭೀಮ್ಸ್ ಆಸ್ಪತ್ರೆ ಆವರಣದಲ್ಲಿ ಮೂರು ಐತಿಹಾಸಿಕ ಕಟ್ಟಡ. ಶಾಸಕ ಅನಿಲ್ ಬೆನಕೆಯವರು ಚಂದ್ರಪ್ಪ ಅವರನ್ನು ಬೇಟಿಯಾಗಿ ಸುಧೀರ್ಘವಾಗಿ ಚರ್ಚಿಸಿದರು.

ಬೆಳಗಾವಿ 07 : ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಬೆಂಗಳೂರಿನಲ್ಲಿನ ಆರೋಗ್ಯ ಸೌಧದಲ್ಲಿ ಮುಖ್ಯ ಇಂಜಿನೀಯರ ಆದ  ಚಂದ್ರಪ್ಪ ಅವರನ್ನು ಬೇಟಿಯಾಗಿ ಬೆಳಗಾವಿ ಭೀಮ್ಸ್ ಆಸ್ಪತ್ರೆ ಆವರಣದಲ್ಲಿ ಮೂರು ಐತಿಹಾಸಿಕ ಕಟ್ಟಡಗಳಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ, ಟ್ರೋಮಾ ಸೆಂಟರ್, ನರ್ಸಿಂಗ್ ಕಾಲೆಜ ಹಾಗೂ ವಸತಿ ನಿಲಯದ ಕಾಮಗಾರಿಗಳು ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬರುವುದರಿಂದ ಈ ಎಲ್ಲ ಕಾಮಗಾರಿಗಳನ್ನು ಶೀಘ್ರವಾಗಿ ಪ್ರಾರಂಭಿಸಿ ಪೂರ್ಣಗೊಳಿಸುವ ಕುರಿತು ಮುಖ್ಯ ಇಂಜಿನೀಯರ ಜೊತೆಗೆ ಸುಧೀರ್ಘವಾಗಿ ಚರ್ಚಿಸಿದರು.