Belagavi News In Kannada | News Belgaum

ನೂತನವಾಗಿ ಸ್ಥಾಪಿತವಾದ ಮರಾಠಾ ಅಭಿವೃಧ್ದಿ ಪ್ರಾಧಿಕಾರದ ಕಟ್ಟಡಕ್ಕೆ ಬೇಟಿ ನೀಡಿದ ಶಾಸಕ ಅನಿಲ ಬೆನಕೆ

ಬೆಳಗಾವಿ 07 : ಗುರುವಾರದಂದು ಬೆಂಗಳೂರಿನಲ್ಲಿ ನೂತನವಾಗಿ ಸ್ಥಾಪಿತವಾದ ಮರಾಠಾ ಅಭಿವೃಧ್ದಿ

ಪ್ರಾಧಿಕಾರದ ಕಟ್ಟಡಕ್ಕೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆರವರು ಬೇಟಿ ನೀಡಿ ಮರಾಠಾ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷರಾದ ಎಮ್.ಜಿ. ಮೂಳೆ ಅವರನ್ನು ಬೇಟಿಯಾದರು. ಈ ಸಂದರ್ಭದಲ್ಲಿ ಮುಂಬರುವ ದಿನಗಳಲ್ಲಿ ಮರಾಠಾ ಸಮಾಜದ ಅಭಿವೃಧ್ದಿ ಹಾಗೂ ಮರಾಠಾ ಪ್ರಾಧಿಕಾರದಿಂದ ಸಮಾಜಕ್ಕೆ ದೊರಕುವ ಯೋಜನೆಗಳು ಹಾಗೂ ಸಮಾಜಕ್ಕೆ ಯಾವ ಕೊಡುಗೆಗಳನ್ನು ನೀಡಬಹುದಾಗಿದೆ ಎಂಬುದರ ಕುರಿತು ವಿಸ್ತ್ರುತವಾಗಿ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ಮರಾಠಾ ಅಭಿವೃಧ್ದಿ ಪ್ರಾಧಿಕಾರ ನಿಗಮದ ಅಧ್ಯಕ್ಷರಾದ ಎಮ್. ಜಿ. ಮೂಳೆ, ಕೆ.ಎಮ್.ಸಿ.ಡಿ.ಸಿ.ಎಲ್. ನಿರ್ದೇಶಕ ಅನಂತರಾವ ಘೋರ್ಪಡೆ, ವಿಜೇಂದ್ರರಾವ ಜಾಧವ, ಮರಾಠಾ ಅಭಿವೃಧ್ದಿ ಪ್ರಾಧಿಕಾರದ ಮುಖ್ಯ ನಿರ್ದೇಶಕ ಪ್ರಕಾಶ ಭಾಗೋಜಿ, ನಾರಾಯಣ ಎಮ್. ಬಿರಾದಾರ, ಅಶೋಕ ಹಾಗೂ ಇತರರು ಉಪಸ್ಥಿತರಿದ್ದರು.