Belagavi News In Kannada | News Belgaum

ಇಂದು ಇಂಡಿಯಾ- ಇಂಗ್ಲೆಂಡ್‌ ಕಾದಾಟ: ಕೊಹ್ಲಿ ಸ್ಥಾನ ತುಂಬುವವರು ಯಾರು?

ದೆಹಲಿ(ಬರ್ಮಿಂಗ್​ಹ್ಯಾಮ್) :  ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ , ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ವೇಗಿ ಜಸ್​ಪ್ರೀತ್ ಬುಮ್ರಾ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ 50 ರನ್​ಗಳ ಅಮೋಘ ಗೆಲುವು ಕಂಡಿದ್ದ ಭಾರತ  ಇದೀಗ ದ್ವಿತೀಯ ಕದನಕ್ಕೆ ಸಜ್ಜಾಗುತ್ತಿದೆ. ಇಂದು (ಜು. 9) ಬರ್ಮಿಂಗ್​ಹ್ಯಾಮ್​ನ ಎಜ್‌ಬಾಸ್ಟನ್‌ ಮೈದಾನದಲ್ಲಿ ಎರಡನೇ ಟಿ20 ಪಂದ್ಯ ಆಯೋಜಿಸಲಾಗಿದ್ದು
ಟೀಮ್ ಇಂಡಿಯಾ  ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ.

ಇತ್ತ ಆಂಗ್ಲರಿಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ. ಮೊದಲ ಪಂದ್ಯದಿಂದ ವಿಶ್ರಾಂತಿ ಪಡೆದುಕೊಂಡಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ , ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಆಲ್ರೌಂಡರ್ ರವೀಂದ್ರ ಜಡೇಜಾ ಹಾಗೂ ವೇಗಿ ಜಸ್​ಪ್ರೀತ್ ಬುಮ್ರಾ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಹೀಗಾಗಿ ಕಳೆದ ಪಂದ್ಯದಲ್ಲಿ ಭಾರತ ಗೆದ್ದಿದ್ದರೂ ಇಂದಿನ ಮ್ಯಾಚ್​ಗೆ ಮುಖ್ಯ ಬದಲಾವಣೆ ಆಗುವುದು ಖಚಿತ. ಆದರೆ, ಯಾರು ಯಾರ ಸ್ಥಾನವನ್ನು ಆಕ್ರಮಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ.

ಕಳೆದ ಐದು ತಿಂಗಳ ಅವಧಿಯಲ್ಲಿ ಕೊಹ್ಲಿ ಐಪಿಎಲ್ ಬಿಟ್ಟರೆ ಇತರೆ ಯಾವುದೇ ಟಿ20 ಪಂದ್ಯವನ್ನು ಆಡಿಲ್ಲ. ಹೀಗಾಗಿ ಕೊಹ್ಲಿ ಜಾಗದಲ್ಲಿ ದೀಪಕ್ ಹೂಡ ಕಣಕ್ಕಿಳಿದಿದ್ದರು. ಹೂಡ ಪ್ರತಿ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಆದರೀನ ಕೊಹ್ಲಿ ಬಂದ ಕಾರಣ ಅನಿವಾರ್ಯವಾಗಿ ಹೂಡ ಹಿಂದೆ ಸರಿಯಬೇಕಿದೆ. ಅಲ್ಲದೆ ಇಂಗ್ಲೆಂಡ್‌ ವಿರುದ್ಧ ಈ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳು ವಿರಾಟ್‌ ಕೊಹ್ಲಿಗೆ ನಿರ್ಣಾಯಕವಾಗಿದೆ. ಒಂದು ವೇಳೆ ವೈಫಲ್ಯ ಅನುಭವಿಸಿದರೆ, ಅವರ ಸ್ಥಾನಕ್ಕೆ ಕಂಟಕ ಎದುರಾಗಹುದು. ಏಕೆಂದರೆ ದೀಪಕ್‌ ಹೂಡ ಅವರಂಥ ಯುವ ಆಟಗಾರರು ಟಿ20 ಸ್ವರೂಪದಲ್ಲಿ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ.

ಭಾರತೀಯ ಕಾಲಮಾನ:

ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ. ಸೋನಿ ನೆಟ್‌ವರ್ಕ್ ಚಾನೆಲ್‌ ಹಾಗೂ ಸೋನಿ ಲೀವ್ ಅಪ್ಲಿಕೇಶನ್‌ನಲ್ಲಿ ಲೈವ್ ವೀಕ್ಷಿಸಬಹುದು.//////