Belagavi News In Kannada | News Belgaum

ಖರ್ಚಿಗೆ ಹಣ ಕೊಡದಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ

ಬೆಂಗಳೂರು: ಖರ್ಚಿಗೆ ಹಣ ಕೊಡದಿದ್ದಕ್ಕೆ ಪತಿ ತನ್ನ ಪತ್ನಿಯನ್ನೇ ಕೊಂದ ಘಟನೆ ಬೆಂಗಳೂರು ಗ್ರಾ. ಜಿಲ್ಲೆಯ ಹೊಸಕೋಟೆ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ನಡೆದಿದೆ.
ಪತ್ನಿ ಮುನಿರತ್ನ(25)ಳನ್ನ ಬರ್ಬರವಾಗಿ ಕೊಲೆಯಾದ ದುರ್ದೈವಿ. ಹೊಸಪತಿ ವೆಂಕಟೇಶ್​ ಎಂಬಾತ ಕೊಲೆ ಮಾಡಿದ ಆರೋಪಿ. ಪತಿ ವೆಂಕಟೇಶ್ ಹಲವು ದಿನಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದ. ಕೆಲಸಕ್ಕೆ ಹೋಗುವಂತೆ ಪತ್ನಿ ಹಲವು ಬಾರಿ ಬುದ್ಧಿವಾದ ಹೇಳಿದ್ದಾಳೆ. ಜೊತೆಗೆ ಪದೇ ಪದೇ ಖರ್ಚಿಗೆ ಹಣ ಕೇಳುತ್ತಿದ್ದ, ನಿನ್ನೆ ಕೂಡ ಹಣ ಕೇಳಿದ್ದು, ಹೆಂಡತಿ ಕೊಲೆ ಮಾಡಿದ್ದಾನೆ. ಹೊಸಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.//////