Belagavi News In Kannada | News Belgaum

ಪ್ರಜಾಪ್ರಭುತ್ವದ ಕಣ್ಣಿಗೆ ಮಣ್ಣೆರೆಚುತ್ತಿದೆಯಾ!? ಬಿಜೆಪಿ ಸರಕಾರ!?

ನಾ ಕಾಯೆಂಗೆ ನಾ ಕಾನೆದೆಂಗೆ ಎನ್ನುವ ಮೋದಿ ಮಾತು ಸುಳ್ಳು ಮಾಡಲು ಹೊರಟ ಬೊಮ್ಮಾಯಿ ಸರ್ಕಾರ..!?

2014ರಲ್ಲಿ ಮೋದಿ ಅಲೆ ಜೋರಾಗಿತ್ತು, ಪ್ರಚಾರದ ಭರದಲ್ಲೋ ಅಥವಾ ಅಧಿಕಾರಕ್ಕೆ ಬರುವ ಆಸೆಯಿಂದಲೋ ನಾ ಕಾಯೆಂಗೆ ನಾ ಕಾನೆದೆಂಗೆ ಎಂದು ಪ್ರಧಾನಿ ಮೋದಿ ಹೇಳಿದ್ದು ಬಹುತೇಕ ಜನರಿಗೆ ನೆನಪಿರಬಹುದು, ಅದರ ಅರ್ಥ ಇಷ್ಟೇ ನಾನು ಲಂಚ ತಿನ್ನಲ್ಲ ತಿನ್ನಲೂ ಬಿಡುವುದಿಲ್ಲ ಎಂದು, ಮೋದಿಯ ಬಿಜೆಪಿ ಸರ್ಕಾರ ಅಕ್ರಮಗಳ ಆರೋಪದ ಮೇಲೆ ಆರೋಪ ಕೇಳಿ ಬರುತ್ತಿದೆ, ಕಮಿಷನ್ ಸರ್ಕಾರ ಎಂದು ಆರೋಪ ಕೇಳಿ ಬಂದ ಬೆನ್ನಲ್ಲೇ ಪ್ರಭಾವಿ ಹಿರಿಯ ಸಚಿವರ ವಿಕೆಟ್ ಬಿದ್ದಿತ್ತು ಅದಾದ ನಂತರ ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಬೆಳಕಿಗೆ ಬಂತು, ಆಂಟಿ ಕರ್ಪಶನ್ ಬ್ಯೂರೋ ರಾಜ್ಯ ಸರ್ಕಾರದ ಕೈಗೊಂಬೆಯಾಗಿ ಕುಣಿಯುತ್ತಿದೆ, ಸಣ್ಣ ಪುಟ್ಟ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಿ ದೊಡ್ಡ ದೊಡ್ಡ ಅಧಿಕಾರಿಗಳನ್ನ‌ ತನಿಖೆ ಮಾಡದೆ ಬಿಡುವುದು ಸರ್ವೇ ಸಾಮಾನ್ಯವಾಗಿದೆ, ಪೋಲಿಸ್ ಇಲಾಖೆಯ ನೌಕರರೇ ಎಸಿಬಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದು ಇನ್ನೂ ವಿಷಾದ, ಯಾಕಂದ್ರೆ ಹೆಲ್ಮೆಟ್ ಇಲ್ಲದೇ ಸಿಕ್ಕಿ ಬಿದ್ದ ವಾಹನ ಸವಾರ ಐವತ್ತೋ ನೂರೋ ಕೊಟ್ಟು ಹೋಗ್ತಾನೆ ಅತ್ಯಂತ ಭ್ರಷ್ಟರು ಸಿಗುವುದು ಪೋಲಿಸ್ ಇಲಾಖೆಯಲ್ಲಿಯೇ ಯಾಕಂದ್ರೆ ಲಕ್ಷಾಂತರ ರೂಪಾಯಿ ಸಾಲ‌ ಮಾಡಿ ಲಂಚ ಕೊಟ್ಟು ನೌಕರಿಗೆ ಸೇರಿರ್ತಾರೆ ಸರ್ಕಾರ ಕೊಡುವ ಸಂಬಳ ಅವರು ಕಟ್ಟುವ ಬಡ್ಡಿಗೆ ಸಾಲುವುದಿಲ್ಲ ಆದಕ್ಕಾಗಿ ಲಂಚ ಇಸ್ಕೊಂಡು ತಮ್ಮ‌ ಜೀವನ ಸಾಗಸ್ತಾರೆ, ಇಂತಹ ಪೋಲಿಸರೇ ಎಸಿಬಿ ಅಧಿಕಾರಿಗಳು ಅಂದ್ರೆ ನಗುವುದೋ ಅಳುವುದೋ ತಿಳಿಯುತ್ತಿಲ್ಲ.

ಭ್ರಷ್ಟಾಚಾರಕ್ಕೆ ಸಾಥ್ ನೀಡಲು ಅಂದ್ರೆ ಪರ್ಸಂಟೆಜ್ ಪಡೆಯಲು ಸರ್ಕಾರ ಹೊಸ ಆರ್ಡರ್ ಪಾಸ್ ಮಾಡಿದೆ ರಾಜ್ಯದ ಯಾವ ಸರ್ಕಾರಿ ಕಛೇರಿಗಳಲ್ಲಿ ಸಾರ್ವಜನಿಕರು ವಿಡಿಯೋ ಮಾಡುವಂತಿಲ್ಲ ಎಂದು, ಅಲ್ಲಾ ಮಿಸ್ಟರ್ ಸಿಎಂ ಅವರೇ ಭ್ರಷ್ಟಾಚಾರ ಕಣ್ಮುಂದೆ ನಡೆಯುತ್ತಿದ್ದರು ಸಹ ವಿಡಿಯೋ ಮಾಡದೇ ಹೇಳಿದಷ್ಟು ದುಡ್ಡು ಕೊಡ್ರಿ ಇದು ಒಂತರಾ ಹೊಸ ಟ್ಯಾಕ್ಸು ನಮ್ಮ ಜೇಬಿಗೆ ಹಾಗೂ ಮುಂದೆ ಬರುತ್ತಿರುವ ಎಲೆಕ್ಷನ್ ಗೆ ಫಂಡ್ ಎಂದು ಮಾರ್ಮಿಕವಾಗಿ ಹೇಳುತ್ತಿದ್ದಿರಾ..? ಸಾರ್ವಜನಿಕರು ಸರ್ಕಾರಿ ನೌಕರರು ಲಂಚ ಕೇಳುವಾಗ ಅಥವಾ ಯಾವುದೇ ಭ್ರಷ್ಟಾಚಾದಲ್ಲಿ ತೊಡಗಿದಾಗ ವಿಡಿಯೋ ಮಾಡುವುದು ತಪ್ಪಾ..?

ಅವರ ಅನುಮತಿ ತೆಗೆದುಕೊಂಡು ಮಾಡಬಹುದು ಎಂದು ಸಹ ಆದೇಶದಲ್ಲಿ ಮಾರ್ಮಿಕವಾಗಿ ಇದೆ, ಸರ್ಕಾರಿ ನೌಕರ ಲಂಚ ಕೇಳಿದಾಗ ಓಯ್ ನೀನು ಲಂಚ ಕೇಳ್ತಿದಿಯಾ , ನಿನ್ನ ವಿಡಿಯೋ ಮಾಡಬೇಕು ದಯವಿಟ್ಟು ಸ್ವಲ್ಪ ತಲೆ ಬಾಚ್ಕೊಂಡು ನೀಟಾಗಿ ಕುತ್ಕೊಳಿ ಎಂದು ಕೇಳೊಕೆ ಆಗುತ್ತಾ..?

ಸಾರ್ವಜನಿಕರು ಕಛೇರಿಗಳಲ್ಲಿ ವಿಡಿಯೋ ಅಥವಾ ಫೋಟೋ ತೆಗೆದುಕೊಂಡು ಸೋಷಿಯಲ್ ಮಿಡಿಯಾದಲ್ಲಿ ಹಾಕ್ತಾರೆ ಅದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ಸರ್ಕಾರಿ ನೌಕರರ ಸಂಘ ಹೇಳಿದೆ, ಅಲ್ಲಾ ಸರ್ ಸಾರ್ವಜನಿಕರು ನೌಕರರ ಮನೆಗೆ ಹೋಗಿ ವಿಡಿಯೋ ಮಾಡಲ್ಲ, ಅಷ್ಟು ಧೈರ್ಯ ಯಾರಿಗೂ ಇಲ್ಲ, ಕಛೇರಿಗಳಲ್ಲಿ ಆಗುವ ಅನ್ಯಾಯಗಳ ವಿಡಿಯೋ ಮಾಡಿದರೆ ತೊಂದರೆ ಆಗುತ್ತದೆ ಅಂದ್ರೆ ಭ್ರಷ್ಟಾಚಾರ ಮಾಡದೇ ನಿಯತ್ತಾಗಿ ಸೇವೆ ಸಲ್ಲಿಸಲು ನೌಕರರಿಗೆ ಹೇಳಬಹುದು ಅಲ್ವಾ..?

ಒಟ್ಟಾಗಿ ಮೋದಿಯವರ ಸರ್ಕಾರ ಲಂಚ ಮುಕ್ತ ಭಾರತ ಎಂದು ಹೇಳುತ್ತಿತ್ತು ಆದರೆ ದೂರದ ದೆಹಲಿಗೆ ಕರ್ನಾಟಕ ದೂರ ಅವರಿಗೆ ಕರ್ನಾಟಕದಲ್ಲಿ ಆಗುತ್ತಿರುವ ಭ್ರಷ್ಟಾಚಾರದ ವಿಚಾರ ತಿಳಿಯದೇನೋ, ಭ್ರಷ್ಟಾಚಾರಯುಕ್ತ ಸರ್ಕಾರದ ರೂವಾರಿ ಸಿಎಂ ಬೊಮ್ಮಾಯಿಯವರಿಗೆ ಒಳ್ಳೆಯದಾಗಲಿ ಹಾಗೂ ಮುಂದೆ ಬರುವ ಚುನಾವಣೆಗೆ ಪಾರ್ಟಿ ಫಂಡ್ ಸಂಗ್ರಹವಾಗಲಿ ಎಂದು ಆಶಿಸುತ್ತಿರುವ ನಾಗರಿಕ..