Belagavi News In Kannada | News Belgaum

ಫ್ರೀಡಂ ಪಾರ್ಕ್ ಮೈದಾನ ಬೆಂಗಳೂರಲ್ಲಿ ಹೂಗಾರ ಸಮಾಜ ದಿಂದ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ಸತ್ಯಾಗ್ರಹ

ಬೆಂಗಳೂರು, ಜು.15: ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಹೂಗಾರ ಸಮಾಜದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಧರಣಿ ನಡೆಸಲಾಯಿತು. ದಿನಾಂಕ 15/07/2022 ಶುಕ್ರವಾರ ನಗರದ ಫ್ರೀಡಂ ಪಾರ್ಕಿನ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ಹೂಗಾರ ಹಾಗು ರಾಜ್ಯ ಹೂಗಾರ ಸಮಾಜದ ನೇತೃತ್ವದಲ್ಲಿ ಜಮಾಯಿಸಿದ ಸಮಾಜದ ಮುಖಂಡರು, ಸದಸ್ಯರು, ಹೂಗಾರ ಸಮಾಜ ರಾಜ್ಯದಲ್ಲಿ 12 ಲಕ್ಷ ಜನಸಂಖ್ಯೆ ಹೊಂದಿದ್ದು, ಇಲ್ಲಿಯವರೆಗೆ ಯಾವುದೇ ಮೀಸಲಾತಿ ಸಮಾಜಕ್ಕೆ ದೊರೆತಿಲ್ಲ ಎಂದರು.


ಧರಣಿಯನ್ನುದ್ದೇಶಿಸಿ ಮಾತನಾಡಿದ ಪ್ರಭು ಹೂಗಾರ, ಬೆಳಗಾವಿ ಜಿಲ್ಲಾ ಸಮಾಜದ ಉಪಾಧ್ಯಕ್ಷರು ಶರಣ ಹೂಗಾರ ಮಾದಯ್ಯ ಅವರ ಅಭಿವೃದ್ದಿ ನಿಗಮ ಮಂಡಳಿ ಸ್ಥಾಪಿಸಬೇಕು. ಪ್ರತಿ ಜಿಲ್ಲೆಗೊಂದು ಹೂಗಾರ ಸಮುದಾಯ ಭವನವನ್ನು ನಿರ್ಮಿಸಬೇಕು. ಜಿಲ್ಲಾ ಕೇಂದ್ರಗಳಲ್ಲಿ ಗುರುಕುಲ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಎಲ್ಲಾ ಸರಕಾರಿ ಬಸ್ ನಿಲ್ದಾಣಗಳಲ್ಲಿ ಹೂಗಾರರಿಗೆ ಒಂದು ಮಳಿಗೆ ಮೀಸಲಿಡಬೇಕು ತಸ್ತಿಕ್ ಭತ್ತೆಯನ್ನು ಹೆಚ್ಚಿಸಿ ಸರಿಯಾದ ಸಮಯಕ್ಕೆ ನೀಡಬೇಕು. ರಾಜ್ಯದ ಹೂಗಾರರಿಗೆ ಹೂ ಬೆಳೆಯುವುದಕ್ಕೆ ಆರ್ಥಿಕ ನೆರವು ಒಗಗಿಸಬೇಕು. ಪ್ರತಿ ವರ್ಷ ಹೂಗಾರ ಮಾದಯ್ಯನವರ ಜಯಂತಿಯನ್ನು ಎಲ್ಲ ಸರಕಾರಿ ಕಚೇರಿಯಲ್ಲಿ ಆಚರಿಸಬೇಕು. ಹೂಗಾರ ಸಮಾಜದ ಗುರುಪೀಠಕ್ಕೆ 10 ಎಕರೆ ಜಮೀನು ನೀಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಬಜೆಟ್ ನಲ್ಲಿ ಹೂಗಾರ ಸಮಾಜಕ್ಕೆ 100 ಕೋಟಿ ಅನುದಾನ ಮೀಸಲಿಡಬೇಕು. ಹೂಗಾರ ಸಮಾಜದವರು ಭೂಮಿ ಸಾಗುವಳಿ ಮಾಡುವ ಭೂಮಿಯು ದೇವರ ಹೆಸರ ಮೇಲೆ ಇರುವುದನ್ನು ಸಾಗುವಳಿದಾರರ ಹೆಸರಿಗೆ ವರ್ಗಾಯಿಸಬೇಕು. ಹೂ ಸರಬರಾಜಿಗೆ ಸರಕಾರಿ ಬಸ್‍ಗಳಲ್ಲಿ ಉಚಿತವಾಗಿ ಸಾಗಾಣಿಕೆ ವ್ಯವಸ್ಥೆಯನ್ನು ಮಾಡಿಕೊಡಬೇಕು. ಹೂಗಾರ ಸಮುದಾಯವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ಕಾರಣ ಪ್ರಾತಿನಿಧ್ಯ ನೀಡಿ ಎಸ್.ಟಿ (ST) ಸಮುದಾಯಕ್ಕೆ ಸೇರಿಸಬೇಕೆಂದು ಒತ್ತಾಯಿಸಿದರು.