Belagavi News In Kannada | News Belgaum

ದೇಶಾದ್ಯಂತ ಇನ್ನೂ 3 ದಿನಗಳರೆಗೂ ಮಳೆರಾಯನ ಅಬ್ಬರ: ರಾಜ್ಯದಲ್ಲಿ ಭಾರೀ ಮಳೆ ಸಾಧ್ಯತೆ

ನವದೆಹಲಿ:  ಜೂನ್‌ ಆರಂಭದಲ್ಲಿ ಅಬ್ಬರಿಸಿದ ಮಳೆರಾಯನ, ಜೂಲೈ ಅಂತ್ಯವರೆಗೂ ಕಾಡಲಿದ ಎಂದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಬಿಸಿಲಿನ ತಾಪ ಜನರ ಸಮಸ್ಯೆಗಳನ್ನು ಹೆಚ್ಚಿಸಿದೆ. ಏತನ್ಮಧ್ಯೆ ದೆಹಲಿಯಲ್ಲಿ ಜುಲೈ 20 ರಿಂದ 23ರವರೆಗೆ ಮಳೆಯಾಗಲಿದೆಎಂದು  ವರದಿಯಾಗಿದೆ.

ಜುಲೈ 20ರಿಂದ ಅಂದರೆ ಇಂದಿನಿಂದ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದೂ ಸಹ ಎಚ್ಚರಿಕೆ ನೀಡಲಾಗಿದೆ.

ಇಂದಿನಿಂದ 3 ದಿನಗಳ ಕಾಲ ಮಳೆ ಸಾಧ್ಯತೆ: IMD ಪ್ರಕಾರ ಇಂದು ದೆಹಲಿ NCRನ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಹವಾಮಾನ ಇಲಾಖೆ
ಎಚ್ಚರಿಕೆ ನೀಡಿದೆ.

ರಾಜ್ಯದಲ್ಲಿ ಕಳೆದ 15 ದಿನಗಳಿಂದ ನಿರತಂರ ಮಳೆಯಾಗಿದ್ದು,  ಭಾನುವಾರದಿಂದ ಬಿಡುವು ನೀಡಿದೆ.   ಮತ್ತೆ ಇಂದು (ಜುಲೈ ) 20 ರಿಂದ 23ರವರೆಗೆ ತಾಪಮಾನವು 31 ರಿಂದ 33 ಡಿಗ್ರಿಗಳಷ್ಟು ಇರುತ್ತದೆ. ಇದೇ ವೇಳೆ 24ರಿಂದ ಮತ್ತೊಮ್ಮೆ ಬಿಸಿ ಹೆಚ್ಚಾಗುವ ಸಾಧ್ಯತೆ ಇದೆ. ತಾಪಮಾನವು 35 ಡಿಗ್ರಿಗಳವರೆಗೆ ತಲುಪಬಹುದು ಎಂದು ಹೇಳಲಾಗುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ, ಮುಂಗಾರು ಪ್ರಭಾವ ಮುಂದಿನ 3 ದಿನಗಳವರೆಗೆ ರಾಜಧಾನಿಯ ಸುತ್ತಮುತ್ತ ಇರುತ್ತದೆ. ಇದರಿಂದ ತಾಪಮಾನವೂ ಕಡಿಮೆಯಾಗಿ ವಾತಾವರಣ ಹಿತಕರವಾಗಿರುತ್ತದೆ ಎಂದು ಹೇಳಲಾಗಿದೆ.//////