Belagavi News In Kannada | News Belgaum

ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಚೈನ್ ಸ್ಟ್ಯಾಟಿಂಗ ಹಾಗೂ ಮೋಟಾರ ಕಳ್ಳರ ಬಂಧನ

ಗೋಕಾಕ : ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಚೈನ್ ಸ್ಟ್ಯಾಟಿಂಗ ಹಾಗೂ ಮೋಟಾರ ಸೈಕಲಗಳು ಕಳ್ಳತನವಾಗುತ್ತಿದ್ದು ಈ ಬಗ್ಗೆ ಪ್ರಕರಣಗಳು ದಾಖಲಾಗಿದ್ದು, ಅವುಗಳ ಪತ್ತೆಗಾಗಿ ಮಾನ್ಯ  ಸಂಜೀವ ಪಾಟೀಲ ಆರಕ್ಷಕ ಅಧೀಕ್ಷಕರು ಬೆಳಗಾವಿ, ಹಾಗೂ ಮಾನ್ಯ ಮಹಾನಿಂಗ ನಂದಗಾವಿ ಹೆಚ್ಚುವರಿ ಎಸ್ ಪಿ ಬೆಳಗಾವಿ ರವರು ಮತ್ತು  ಮನೋಜಕುಮಾರ ನಾಯಿಕ ಡಿಎಸ್‌ಪಿ ಗೋಕಾಕ ರವರ ಮಾರ್ಗದರ್ಶನದಲ್ಲಿ, ಗೋಕಾಕ ವೃತ್ತದ ಸಿಪಿಐ  ಗೋಪಾಲ ಆ‌ ರಾಠೋಡ ರವರ ನೇತೃತ್ವದಲ್ಲಿ ತಂಡ ರಚಿಸಿದ್ದು, ತಂಡದಲ್ಲಿ ಗೋಕಾಕ ಶಹರ ಠಾಣೆಯ ಪಿ.ಎಸ್.ಐ  ಎಮ್ ಡಿ ಘೋರಿ ಹಾಗೂ ಎ.ಎಸ್.ಐ ರವರಾದ  ರಮೇಶ ಹಡಪದ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಜನರಾದ 1] ಬಿ.ವಿ ನೇರಲೆ 2) ಸುರೇಶ ಈರಗಾರ 3] ಮಲ್ಲಪ್ಪ ಗಿಡಗಿರಿ, 3] ಸಚೀನ ಹೊಳೆಪ್ಪಗೋಳ 5] ವಿಠಲ ನಾಯಕ 5) ರಮೇಶ ಮುರನಾಳೆ ಇವರೆಲ್ಲರೂ ಸ್ವತ್ತಿನ ಪ್ರಕರಣದಲ್ಲಿ ಆರೋಪಿತರನ್ನು ತಪಾಸಣೆ ಮಾಡುತ್ತಿರುವಾಗ ಈ ದಿವಸ ದಿನಾಂಕ 25-07-2022 ರಂದು ಬೆಳಿಗ್ಗೆ 06-15 ಗಂಟೆಯ ಸುಮಾರಿಗೆ ಅಪರಾಧ ವಿಭಾಗದ ಸಿಬ್ಬಂದಿ ಜನರು ಗೋಕಾಕದ ಯೊಗಿಕೊಳ್ಳ ರಸ್ತೆಯಲ್ಲಿ ಮೋಟಾರ ಸೈಕಲಗಳ ಮೇಲೆ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಮೂವರನ್ನು ಹಿಡಿದುಕೊಂಡು ಠಾಣೆಗೆ ತಂದು ವಿಚಾರಣೆಗೆ ಒಳಪಡಿಸಲಾಗಿ ಸದರಿಯವರು ತಿರುಗಾಡುತ್ತಿದ್ದ ಎರಡು ಮೋಟಾರ್ ಸೈಕಲಗಳು ಗೋಕಾಕ ಶಹರ ಠಾಣೆಯ ಹದ್ದಿಯಲ್ಲಿ ಕಳ್ಳತನವಾದವುಗಳು ಇದ್ದು, ಸದರಿ ಮೂರು ಜನರಿಗೆ ಕುಲಂಕುಷವಾಗಿ ವಿಚಾರಣೆಗೆ ಒಳಪಡಿಸಲಾಗಿ ಇದಲ್ಲದೇ ಇನ್ನೂ ಇದೇ ವರ್ಷ ಫೆಬ್ರುವರಿ ತಿಂಗಳಲ್ಲಿ ಮಾರ್ಕೆಟದಲ್ಲಿ ಗುಲ್ಲರವರ ಅಂಗಡಿಯ ಮುಂದೆ ಒಬ್ಬ ಮಹಿಳೆಯ ಬಂಗಾರದ ಮಂಗಳಸೂತ್ರವನ್ನು ಹಾಗೂ ವಿದ್ಯಾ ನಗರದ ಬಸವ ಮಂಟಪದ ಹತ್ತಿರ ಜೂನ್ ತಿಂಗಳಲ್ಲಿ ಇನ್ನೊಬ್ಬ ಮಹಿಳೆಯ ಕೊರಳಲ್ಲಿಯ ಬಂಗಾರದ ಮಂಗಳಸೂತ್ರವನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು, ಸದರಿಯವುಗಳು ಗೋಕಾಕ ಶಹರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: 08/2022 ಹಾಗೂ 63/2022 ನೇದ್ದವುಗಳಲ್ಲಿ ಆರೋಪಿತರು ಸ್ಪ್ಯಾಚಿಂಗ ಮಾಡಿದ್ದ ಬಂಗಾರದ ಮಂಗಳಸೂತ್ರಗಳು ಇದ್ದು, ಸದರಿ ಆರೋಪಿತರಿಂದ 50 ಗ್ರಾಂ ಬಂಗಾರದ ಮಂಗಳಸೂತ್ರಗಳು ಅಕಿ: 2,75,000 /- ರೂ ಹಾಗೂ 2 ಮೋಟಾರ್ ಸೈಕಲಗಳು 80,000 /- ರೂ ಕಿಮ್ಮತ್ತಿನವುಗಳನ್ನು ವಶಪಡಿಸಿಕೊಂಡಿದ್ದು, ಸದರಿ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ/////