Belagavi News In Kannada | News Belgaum

ಬೆಳಗಾವಿಯ ಅಂಬಿಕಾ ಲಾಡ್ಜ್‌ ನಲ್ಲಿ ವೇಶಾವಾಟಿಕೆ: ನಾಲ್ವರ ಬಂಧನ, ಯುವತಿಯರ ರಕ್ಷಣೆ

ಬೆಳಗಾವಿ: ಹಿಂಡಲಗಾ ಅಂಬಿಕಾ ಲಾಡ್ಜ್‌ ಯೊಂದರಲ್ಲಿ  ವೇಶಾವಾಟಿಕೆ ನಡೆಸುತ್ತಿದ್ದ ನಾಲ್ವರು ಕಿಡಿಗೇಡಿಗಳನ್ನು ಬಂಧಿಸಿ,  ಯುವತಿರನ್ನು ರಕ್ಷಣೆ ಮಾಡಲಾಗಿದೆ. ಖಾಕಿ ಪಡೆ ಭರ್ಜರಿ ಕಾರ್ಯಾಚರಣೆ ನಡೆಸಿ ಆರೋಪಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಸೋಮನಾಥ ಗೌಳಿ, ರಾಹುಲ ಪಾಟೀಲ ,  ರಮೇಶ ತಾರಿಹಾಳ , ಮಯೂರ ಪಾಟೀಲ ಬಂಧಿತರು. ವಿವಿಧ ಜಿಲ್ಲೆಗಳಿಂದ ಯುವತಿರನ್ನು ಕರೆಸಿ ಹಣದ  ಆಮಿಷಯೊಡ್ಡಿ ಅಕ್ರಮ ದಂಧೆಗೆ ನುಕ್ಕಿದರು ಎನ್ನಲಾಗಿದೆ.  ಪೊಲೀಸ್‌ ರು ಖಚಿತ ಮಾಹಿತಿ ಪಡೆದು ದಾಳಿ ನಡೆಸಿ  ಯುವತಿರನ್ನು ರಕ್ಷಿಸಿದ್ದಾರೆ.

ಮಹಿಳಾ ಪೊಲೀಸ್‌  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////