Belagavi News In Kannada | News Belgaum

ಸೂಕ್ಷ್ಮ ಜೀವಿಗಳ ಅಗೋಚರ ಅಟ್ಟಹಾಸ

ಸೂಕ್ಷ್ಮ ಜೀವಿಗಳ ಅಗೋಚರ ಅಟ್ಟಹಾಸ

2019 ರಿಂದ ಜಗತ್ತಿನಲ್ಲಿ ಚಿತ್ರ ವಿಚಿತ್ರ ಕಾಯಿಲೆಗಳು ಪ್ರಾರಂಭವಾಗಿವೆ ಎಂದರೆ ಅತಿಶಯೋಕ್ತಿಯಾಗಲಾರದು. ಅದಕ್ಕೆ ಮುನ್ನುಡಿ ಹಾಕಿದ್ದೆ ಕೊರೋನಾ ವೈರಸ್. ತದನಂತರದ ದಿನಗಳಲ್ಲಿ ಹೊಸ ಹೊಸ ಕಾಯಿಲೆಗಳ ಪರ್ವ ಶುರುವಾಗಿದೆ.
ಮನುಕುಲದ ಸರಾಗ ವೇಗಕ್ಕೆ ಬಹುದೊಡ್ಡ ತಡೆಯೊಡ್ಡಿದ ಕೊರೋನಾ ಹೊಡೆತದಿಂದ ಹೊರ ಬರಲು ತವಕಿಸುತ್ತಿರುವ ಜನರು ಒಂದಡೆಯಾದರೆ, ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಮುರಿದು ಬಿದ್ದ ಆರ್ಥಿಕತೆಯ ಪುನರ್ ನಿರ್ಮಾಣ, ಬೀದಿಗೆ ಬಿದ್ದ ಜನರಿಗೆ ಹೊಸ ಬದುಕು ಕಟ್ಟಿಕೊಳ್ಳುವ ಸವಾಲುಗಳು, ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈಗ ಕೊರೋನಾ ವೈರಸ್ ಪ್ರಭಾವ ಸ್ವಲ್ಪ ಕಡಿಮೆಯಾಗುತ್ತಿರುವಾಗಲೇ ಜಗತ್ತು ಸಹಜ ಜೀವನದ ಕನಸು ಕಾಣುತ್ತಿರುವ ಈ ಸಂದರ್ಭದಲ್ಲಿ ಒಕ್ಕರಿಸಿದ ಮಂಕಿಪಾಕ್ಸ್ ವೈರಸ್ ತನ್ನ ಬಾಹುಗಳನ್ನು ಜಗತ್ತಿನೆಲ್ಲಡೆ ಚಾಚಿ ತಲ್ಲಣಗಳನ್ನು ಸೃಷ್ಟಿ ಮಾಡುತ್ತಿದೆ. ಸೋಂಕಿತ ಪ್ರಾಣ ಗಳಿಂದ ಮನುಷ್ಯರಿಗೆ ಹರಡಿದ ವೈರಸ್ ಮಂಕಿಪಾಕ್ಸ್ ಮೊದಲ ಪ್ರಕರಣವನ್ನು ಯು.ಕೆ ದೃಢಪಡಿಸಿದೆ.
ಭಾರತ ಸೇರಿದಂತೆ 74 ರಾಷ್ಟ್ರಗಳಲ್ಲಿ ಮಂಕಿಪಾಕ್ಸ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಈ ರೋಗವನ್ನು ಜಾಗತಿಕ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ.
ಭಾರತದಲ್ಲಿ ಈ ವರೆಗೆ 4 ಪ್ರಕರಣಗಳು ಸೇರಿದಂತೆ ಜಗತ್ತಿನಾದ್ಯಂತ 16000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ವರದಿಯಾಗಿವೆ. ಮಂಕಿಪಾಕ್ಸ್ ತೀವೃವಾಗಿ ಹರಡುವದಿಲ್ಲ ಹಾಗೂ ಸೋಂಕು ಅಪರೂಪವಾಗಿ ಮಾರಣಾಂತಿಕವಾಗಿರುವ ಕಾರಣ ಭಯಪಡುವ ಅಗತ್ಯವಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ.
ಮಂಕಿಪಾಕ್ಸ್ ಬಗ್ಗೆ ತಿಳಿದಿರುವ ಮಾಹಿತಿ ಅಲ್ಪವಾಗಿದ್ದು, ಜಾಗತಿಕ ಸಮುದಾಯವು ರೋಗ ಹರಡುವಿಕೆ ನಿಯಂತ್ರಣಕ್ಕೆ ಸಂಘಟಿತ ಪ್ರಯತ್ನ ಮಾಡುವದು ಅಗತ್ಯವಾಗಿದೆ. ಭಾರತ ಸೇರಿದಂತೆ ವಿಶ್ವದ ಅನೇಕ ದೇಶಗಳಲ್ಲಿ ಮಂಕಿಪಾಕ್ಸ ವೈರಸ್ ಅಧ್ಯಯನ ಹಾಗೂ ಲಸಿಕೆ ಸಂಶೋಧನೆಗೆ ಪ್ರಯತ್ನಗಳು ಸಮರೋಪಾದಿಯಲ್ಲಿ ನಡೆದಿವೆ.
ಇದು ಹೊಸದಾಗಿ ಸೃಷ್ಟಿಯಾದ ವೈರಸ್ ಏನಲ್ಲ ಕಳೆದ 5 ದಶಕಗಳಿಂದಲೂ ಮಂಕಿಪಾಕ್ಸ್ ಜಗತ್ತಿನ ವಿವಿಧಡೆ ಕಂಡುಬಂದಿದೆ. ಹೆಚ್ಚಾಗಿ ಆಫ್ರಿಕಾದಲ್ಲಿ ಪ್ರಾಣ ಗಳಿಂದ ಮಾನವರಿಗೆ ತಗಲುತ್ತಿದ್ದ ಸೋಂಕು ಮಂಕಿಪಾಕ್ಸ. ಇದು ಮಂಕಿಪಾಕ್ಸ್ ಎಂಬ ವೈರಸ್‍ನಿಂದ ಬರುತ್ತದೆ. 1958ರಲ್ಲಿ ಮಂಕಿಪಾಕ್ಸ್ ರೋಗವನ್ನು ಕಂಡುಹಿಡಿಯಲಾಯಿತು.
ಮಾನವ ಪ್ರಸರಣದ ಮೊದಲ ಪ್ರಕರಣವು 50 ವರ್ಷಗಳ ಹಿಂದೆ 1970ರಲ್ಲಿ ಕಾಂಗೋ ದೇಶದಲ್ಲಿ ವರದಿಯಾಗಿದೆ. ಸೋಂಕಿತ ಪ್ರಾಣ ಗಳ ರಕ್ತ,, ದೈಹಿಕ ದ್ರವಗಳು ಅಥವಾ ಚರ್ಮದ ಗಾಯಗಳೊಂದಿಗೆ ನೇರ ಸಂಪರ್ಕದಿಂದ ಪ್ರಸರಣ ಉಂಟಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಮಾಡಿದೆ.
ಮಂಕಿಪಾಕ್ಸ್ ವೈರಸ್ ನಲ್ಲಿ ಪಶ್ಚಿಮ ಆಫ್ರಿಕನ್ ತಳಿ ಹಾಗೂ ಕಾಂಗೋ ತಳಿ ಎಂಬ ಎರಡು ತಳಿಗಳು ಪತ್ತೆಯಾಗಿದ್ದು, ಭಾರತದಲ್ಲಿ ಸೌಮ್ಯವಾಗಿರುವ ಪಶ್ಚಿಮ ಆಫ್ರಿಕನ್ ತಳಿಯ ಮಂಕಿಪಾಕ್ಸ್ ಪತ್ತೆಯಾಗಿದೆ ಎಂದು ಪುಣೆಯ ನ್ಯಾಶನಲ್ ಇನ್‍ಸ್ಟಿಟ್ಯೂಟ ಆಫ್ ವೈರಾಲಜಿಯ ಇವರು ತಿಳಿಸಿದ್ದಾರೆ.
ಮಂಕಿಪಾಕ್ಸ್ ವೈರಸ್ ಇಲಿಗಳಲ್ಲಿ ಮತ್ತು ಕೋತಿಗಳಲ್ಲಿ ಹರಡುವದು. ಸೋಂಕಾದ ಪ್ರಾಣ ಗಳು ಮನುಷ್ಯನ ಸಂಪರ್ಕಪಡೆದಾಗ ಅವರಿಗೂ ಹರಡುವ ಸಾಧ್ಯತೆ ಇರುತ್ತದೆ. ವೈಧ್ಯಕೀಯ ಇತಿಹಾಸ ತೆಗೆದು ನೋಡಿದಾಗ ನೂರು ವರ್ಷಗಳಲ್ಲಿ ಒಂದೊಂದು ಹಳೆಯ ರೋಗ, ಹೊಸ ಮಾಧರಿಯ ವಿಷಭರಿತ ವೈರಸ್‍ಗಳು ಜಾಗತಿಕವಾಗಿ ಕಾಣ ಸುವದು ಸಾಮಾನ್ಯ. ಪ್ರತಿ ಪ್ರಾಣ ಪಕ್ಷಿಗಳಲ್ಲೂ ಆಗಾಗ ಹೊಸ ವೈರಸ್ ಸಂತತಿ ಜನುಮ ತಾಳುತ್ತಿರುತ್ತವೆ. ಕೆಲವೊಮ್ಮೆ ರೋಗಗಳು ಪ್ರಾಣ ಗಳಿಂದ ಮತ್ತು ಪಕ್ಷಿಗಳಿಂದ ಮನುಷ್ಯನಿಗೆ ಹರಡುವ ಸಾಧ್ಯತೆ ಇರುತ್ತದೆ. ಹಾಗೆ ಹರಡಿ ಬಂದಿರುವದೆ ಈ ಮಂಕಿಪಾಕ್ಸ್.
ಸದ್ಯ ಲಭ್ಯವಾಗುತ್ತಿರುವ ಹೊಸ ಪ್ರಕರಣಗಳು ಮನುಷ್ಯನಿಂದ ಮನುಷ್ಯನಿಗೆ ಹರಡುತ್ತಿರುವ ಸಾದ್ಯತೆಯನ್ನು ಹೆಚ್ಚಾಗಿ ಸೂಚಿಸುತ್ತಿವೆ. ಲೈಂಗಿಕ ಕ್ರಿಯೆಯ ಮೂಲಕ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಹರಡಬಲ್ಲುದು. ಎಂಬುದು ವಿಶ್ವ ಆರೋಗ್ಯ ಸಂಸ್ಥೆಯ ಅಭಿಪ್ರಾಯ.
ಒಂದು ವೇಳೆ ಒಬ್ಬ ವ್ಯೆಕ್ತಿಗೆ ಇದ್ದಕಿದ್ದಂತೆ ಮಂಕಿಪಾಕ್ಸ್ ವೈರಸ್ ತಗುಲಿದರೆ ಅದು ತಕ್ಷಣವೆ ಯಾವುದೇ ಸೂಚನೆಗಳನ್ನು ತೋರುವದಿಲ್ಲ. ಎಂದು ಹೇಳಲಾಗುತ್ತದೆ. ಏಕೆಂದರೆ ವೈರಸ್ ತನ್ನ ಪ್ರಭಾವ ತೋರಿಸುವದು ಏಳು ದಿನದಿಂದ 21 ದಿನದ ಮೇಲೆ ಎಂದು ಹೇಳಲಾಗುತ್ತದೆ.
ಮಂಕಿಪಾಕ್ಸ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವಂಥದ್ದಾಗಿದ್ದು, ಈ ಮೊದಲು ಈ ಸೋಂಕಿಗೆ ಒಳಗಾಗಿದ್ದ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ ಸೋಂಕು ತಗಲುತ್ತದೆ. ಈ ಸೋಂಕು ಕಣ್ಣು ಬಾಯಿ, ಮೂಗು ಬಿರುಕುಬಿಟ್ಟ ಚರ್ಮದ ಮೂಲಕವೂ ದೇಹವನ್ನು ಪ್ರವೇಶಿಸಬಹುದಾಗಿದೆ.
ಮೊಟ್ಟಮೊದಲ ಬಾರಿಗೆ ವೈಧ್ಯರ ಪ್ರಕಾರ ಮಂಕಿಪಾಕ್ಸೆ ಸಮಸ್ಯ ಉಸಿರಾಟದ ನಾಳಗಳಲ್ಲಿ ಕಂಡುಬರುತ್ತದೆ. ಆನಂತರದಲ್ಲಿ ದೇಹದ ಚರ್ಮದ ಮೇಲೆ ಅಲ್ಲಲ್ಲಿ ಗುಳ್ಳೆಗಳ ರೀತಿ ಕಾಣಸಿಕೊಳ್ಳುತ್ತದೆ. ಜ್ವರ, ದದ್ದು, ತೀವ್ರವಾದ ತಲೆ ನೋವು, ಬೆನ್ನು ನೋವು, ಸ್ನಾಯು ನೋವು, ತೀವೃವಾದ ಶಕ್ತಿಯ ಕೊರತೆ, ಊದಿಕೊಂಡ ದುಗ್ದರಸ ಗ್ರಂಥಿಗಳು ಮಂಕಿಪಾಕ್ಸ್ ರೋಗಿಗಳಲ್ಲಿ ಸಾಮಾನ್ಯ ಲಕ್ಷಣಗಳಾಗಿವೆ.
ಒಂದುಬಾರಿ ವೈರಸ್ ಸೋಂಕು ಅಂಟಕೊಂಡ ವ್ಯಕ್ತಿಯಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯಗಳು ಗೋಚರಿಸುತ್ತವೆ. ಅದೇ ರೀತಿ ಸೋಂಕು ಮೆದುಳು ಮತ್ತು ಬೆನ್ನು ಹುರಿ ಊತಕ್ಕೆ ಕಾರಣವಾಗುತ್ತದೆ. ಸ್ನಾಯುಗಳ ಸಮನ್ವಯ ಕೊರತೆ ನರಮಂಡಲ ಮತ್ತು ಮೆದುಳಿಗೆ ತೀವೃಹಾನಿ ಉಂಟಾಗುವದರಿಂದ ಸೋಂಕಿನಿಂದ ಸಾವು ಸಂಭವಿಸುವ ಸಾಧ್ಯತೆ ಅಲ್ಲಗಳೆಯಲಾಗದು ಎಂದು ರೋಗ ನಿಯಂತ್ರಣ ಸಂಸ್ಥೆ ತಿಳಿಸಿದೆ.
ಡಬ್ಲು.ಎಚ್.ಓ ಪ್ರಕಾರ ಜ್ವರ ಕಾಣ ಸಿಕೊಂಡ 3-4 ದಿಗಳಲ್ಲಿ ಮಂಕಿಪಾಕ್ಸ ರೋಗಿಗಳಲ್ಲಿ ಚರ್ಮದ ಸಮಸ್ಯಗಳು ಕಂಡುಬರುತ್ತವೆ. ದದ್ದುಗಳು ಮುಖದ ಮೇಲೆ ಹೆಚ್ಚು ಕೇಂದ್ರಿಕೃತವಾಗಿ ಕ್ರಮೇಣ ಮೈತುಂಬ ಹರಡುತ್ತವೆ. ಮುಖದ ಹೊರತಾಗಿ ಅಂಗೈಗಳು, ಪಾದಗಳ ಅಡಿಭಾಗ, ಬಾಯಿ, ಜನನಾಂಗಗಳ ಮೇಲೆಯೂ ಪರಿಣಾಮ ಬೀರುತ್ತವೆ. ಮೊದಲಿಗೆ ಯಾವುದೇ ಬಣ್ಣದಿಂದ ಕೂಡಿಲ್ಲದ ಹಾಗೆ ಕಂಡುಬರುವ ದದ್ದುಗಳು ಆನಂತರದಲ್ಲಿ ಗಟ್ಟಿಯಾಗುತ್ತವೆ. ದಪ್ಪವಾಗುತ್ತವೆ. ಜೊತೆಗೆ ಅವುಗಳಲ್ಲಿ ನೀರು ಸಹ ತುಂಬಿಕೊಳ್ಳುತ್ತವೆ. ಕೆಲವೊಮ್ಮೆ ಕೀವು ಸಹ ತುಂಬಿಕೊಳ್ಳುತ್ತದೆ. ಆನಂತರ ಅವುಗಳು ಒಣಗಿ ಹೋಗಿ ಬಿದ್ದು ಹೋಗುತ್ತವೆ. ಉಸಿರಾಟದ ತೊಂದರೆ, ವಾಕರಿಕೆ, ಹೊಟ್ಟೆ ನೋವು, ಶೀತ ಆಗಬಹುದಾಗಿದ್ದು, ಒಟ್ಟಿನಲ್ಲಿ ಈ ಸಂದರ್ಭದಲ್ಲಿ ಬಂದಂತಹ ಆರೋಗ್ಯದ ಅಸ್ವಸ್ಥತೆ ಐದು ವಾರಗಳವರೆಗೆ ಇರುತ್ತದೆ. ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳಿದೆ.
ಡಬ್ಲು.ಎಚ್.ಓ ಮಂಕಿಪಾಕ್ಸ್‍ಗೆ ಪ್ರಸ್ತುತ ಯಾವುದೇ ನಿರ್ದಿಷ್ಟ ಚಿಕಿತ್ಸೆಯನ್ನು ಶಿಫಾರಸ್ಸು ಮಾಡಿಲ್ಲ. ಸಿಡುಬು ವಿರುದ್ಧ ಬಳಸುವ ವ್ಯಕ್ಸೆನೀಷನ್ ಮಂಕಿಪಾಕ್ಸ ರೋಗವನ್ನು ತಡೆಗಟ್ಟುವಲ್ಲಿ 87% ಪ್ರತಿಶತದಷ್ಟು ಪರಿಣಾಮಕಾರಿ ಎಂದು ಕಂಡುಬಂದಿದೆ. ಈ ರೋಗವನ್ನು ತಡೆಗಟ್ಟಲು ಸ್ಮಾಲ್ ಫಾಕ್ಸ್ ಲಸಿಕೆ, ಆಂಟಿವೈರಲ್‍ಗಳನ್ನು ಬಳಸಲಾಗುತ್ತದೆ. ದೇಹದ ಪ್ರತಿಕಾಯ ವ್ಯವಸ್ಥೆಯನ್ನು ಹೆಚ್ಚಿಸುವ ಔಷಧಿಗಳಿಂದ ಸೋಂಕಿತರನ್ನು ರಕ್ಷಿಸಬಹುದು.
ಪರಿಸರ, ಆರೋಗ್ಯ, ಸ್ವಚ್ಛತೆ ಕುರಿತು ಲೇಖನಗಳು, ಮಾಧ್ಯಮಗಳ ಎಚ್ಚರಿಕೆಗಳು ಎಲ್ಲದಕ್ಕೂ ಕಿವುಡಾಗಿದ್ದ ಜನರು ಎಚ್ಚೆತ್ತುಕೊಳ್ಳಬೇಕಿದ್ದು, ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ ಮಂಕಿಪಾಕ್ಸ್‍ನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗೃತೆ ವಹಿಸುವದು ಮುಖ್ಯವಾಗಿದ್ದು ಸಾರ್ವಜನಿಕರು ಮಾಸ್ಕ ಧರಿಸುವದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವದು, ರೋಗಲಕ್ಷಣಗಳಿದ್ದರೆ ಕೂಡಲೇ ವೈಧ್ಯರಿಗೆ ತಿಳಿಸುವದು, ಸೋಕಿತ ವ್ಯಕ್ತಿಯನ್ನು ಐಸೋಲೆಶನ್‍ನಲ್ಲಿಡುವದು, ಆತನ ಸಂಪರ್ಕದಲ್ಲಿದ್ದವರನ್ನು ಕ್ವಾರೈಂಟೈನ್ ಮಾಡುವದು. ಅನಾರೋಗ್ಯದಿಂದ ಬಳಲುತ್ತಿರುವ ಪ್ರಾಣ ಗಳಿಂದ ದೂರವಿರುವದು. ವೈರಸ್ ಹರಡುವ ಪ್ರಾಣ ಗಳೊಂದಿಗೆ ಸಂಪರ್ಕ ಬೇಡ, ಆಗಾಗ ಕೈಗಳನ್ನು ತೊಳೆಯಿರಿ. ಬಾಯಿಗೆ ಕರವಸ್ತ್ರ ಅಡ್ಡ ಹಿಡಿದು ಕೆಮ್ಮುವ, ಸೀನುವ ಅಭ್ಯಾಸ ರೂಡಿಸಿಕೊಳ್ಳಿ, ಎಲ್ಲೆಂದರಲ್ಲಿ ಉಗುಳ ಬೇಡಿ, ಮನೆ ಹಾಗೂ ಸುತ್ತಮುತ್ತ ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಗಮನಹರಿಸಿ, ಆರೋಗ್ಯದ ಬಗ್ಗೆ ನಿರ್ಲಕ್ಷ ತೋರದಿರಿ. ಸೋಂಕಿತ ರೋಗಿಗಳಿಂದ ದೂರವಿರಿ. ಈ ಮೊದಲಾದವುಗಳ ಮೂಲಕ ಮಂಕಿಪಾಕ್ಸ್ ಸ್ಪೋಟವಾಗದಂತೆ ನಿಭಾಯಿಸಬಹುದಾಗಿದೆ.
ಹೆಚ್ಚಾಗಿ ಇದು ಪ್ರಾಣ ಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇರುವುದರಿಂದ ಅನಾರೋಗ್ಯ ಪ್ರಾಣ ಗಳ ವಿಚಾರದಲ್ಲಿ ಹೆಚ್ಚಿನ ಜಾಗೃತಿ ತೆಗೆದುಕೊಳ್ಳುವದು ಅತಿ ಮುಖ್ಯವಾಗಿದೆ.
ಇಂದು ವಿಶ್ವವನ್ನು ನಡುಗಿಸುವದು ಅಣ್ವಸ್ತ್ರವಲ್ಲ, ಬದಲಾಗಿ ಕಣ ್ಣಗೆ ಕಾಣದ ಸೂಕ್ಷ್ಮಾಣು ಜೀವಿಗಳು ಮೂರನೇ ಮಹಾ ಯುದ್ಧವೇ ನಡೆಯುತ್ತಿದೆ ಎನ್ನಬಹುದು. ಮದ್ದು ಗುಂಡು ಹಾರುವದಿಲ್ಲ. ರಾಕೆಟ್ಟುಗಳು ರೊಯ್ಯಂದು ಬಂದು ಅಪ್ಪಳಿಸುವದಿಲ್ಲ. ಕಣ ್ಣಗೆ ಕಾಣದ ವೈರಸ್ ಇಡೀ ಜಗತ್ತನ್ನೆ ನಡುಗಿಸುತ್ತಿವೆ. ಯಾವುದೋ ಅರಿಯದ ಗುರಿಯತ್ತ ವೇಗವಾಗಿ ಓಡುತ್ತಿದ್ದ ಜಗತ್ತು ಇದ್ದಕ್ಕಿಂದ್ದಂತೆ ವೇಗ ತಗ್ಗಿಸಿದೆ. ಇಷ್ಟು ದಿನದ ಜೀವನಶೈಲಿ ಕುರಿತ ಪ್ರತಿಯೊಬ್ಬರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.
ಈ ವೈರಾಣುಗಳು ಹೊಸದಲ್ಲ. ಪ್ರಕೃತಿ ಸಹಜವಾಗಿ ಕಾಣ ಸಿಕೊಂಡು ಮನುಷ್ಯ ಸೇರಿ ಇನ್ನುಳಿದ ಜೀವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿವೆ. ಆದರೆ, ಇಂದು ಈ ವೈರಾಣುಗಳು ಭಯಂಕರ ಸ್ವರೂಪದೊಂದಿಗೆ ಯುದ್ಧೋಪಾದಿಯಲ್ಲಿ ದಾಳಿ ಮಾಡುತ್ತಿವೆ. ಈ ಭಯಂಕರತೆಗೆ ಕಾರಣ ಏನು ಎಂಬುವದನ್ನ ವಿಜ್ಞಾನ ಮತ್ತು ವೈದ್ಯಕೀಯ ಜಗತ್ತು ಕಂಡುಕೊಳ್ಳುವ ತುರ್ತು ಅಗತ್ಯವಿದೆ.
ಮನುಷ್ಯನ ಆವಿಷ್ಕಾರಗಳು ಮತ್ತು ಆಧುನಿಕ ಪ್ರಗತಿಗಳು ಪ್ರಕೃತಿಗೆ ಪೂರಕವಾಗಿ ಇರಬೇಕು ಹೊರತಾಗಿ ಪರಿಸರದ ಮೇಲೆ ದಾಳಿ ಮಾಡಿದ್ದಾದರೆ ಅದರ ಪರಿಣಾಮ ಎದುರಿಸಲೇ ಬೇಕಾಗುತ್ತದೆ. ಮಾನವ ನಿರ್ಮಿತ ಕಾನೂನುಗಳು ಇದನ್ನು ನಿಯಂತ್ರಿಸದೆ ಹೋದರೆ ಪ್ರಕೃತಿ ಈ ರೀತಿ ತನ್ನ ಕಾನೂನುಗಳನ್ನು ಕೈಗೆತ್ತಿಕೊಂಡು ಸೂಕ್ತ ಶಿಕ್ಷೆ ನೀಡಲು ಕಾರಣವಾಗುತ್ತದೆ.
ಅನಂತ ಪಪ್ಪು