Belagavi News In Kannada | News Belgaum

ಸಸತ ಎರಡು ಚಿನ್ನದ ಬೇಟೆಯಾಡಿದ ಭಾರತೀಯ ಹೆಮ್ಮೆಯ ಪುತ್ರರು

ಇಂಗ್ಲೆಂಡ್‌:   ಸದ್ಯ ಇಂಗ್ಲೆಂಡ್‌ನ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್ ವೆಲ್ತ್ ಗೇಮ್ಸ್ ಕ್ರೀಡಾಕೂಟದ 3 ದಿನಗಳು ಜುಲೈ 31ರ ಭಾನುವಾರಕ್ಕೆ ಮುಕ್ತಾಯಗೊಂಡಿವೆ. ಮೊದಲ ದಿನ ಯಾವುದೇ ಪದಕವಿಲ್ಲದೇ ಸಾಮಾನ್ಯ ಆರಂಭವನ್ನು ಪಡೆದುಕೊಂಡಿದ್ದ ಭಾರತ ಎರಡನೇ ದಿನದಂದು 1 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕವನ್ನು ಗೆಲ್ಲುವುದರ ಮೂಲಕ ಒಟ್ಟು 4 ಪದಕಗಳನ್ನು ತನ್ನದಾಗಿಸಿಕೊಂಡಿತ್ತು.

ಹೀಗೆ ದ್ವಿತೀಯ ದಿನದಂದು ಉತ್ತಮ ಪ್ರದರ್ಶನ ನೀಡಿದ ಭಾರತೀಯ ಕ್ರೀಡಾ ಪಟುಗಳು ತಮ್ಮ ಪದಕ ಬೇಟೆಯನ್ನು ಮೂರನೇ ದಿನವೂ ಸಹ ಮುಂದುವರಿಸಿದರು.

ಮೂರನೇ ದಿನದಂದು ಮೊದಲಿಗೆ 67 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಜೆರೆಮಿ ಲಾಲ್ರಿನುಂಗ ಚಿನ್ನದ ಪದಕವನ್ನು ಗೆಲ್ಲುವುದರ ಮೂಲಕ ಭಾರತದ ಪದಕ ಸಂಖ್ಯೆಯನ್ನು ಐದಕ್ಕೆ ಏರಿಸಿದರು. ಹಾಗೂ ನಂತರ ನಡೆದ 73 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಭಾರತದ ಅಚಿಂತಾ ಶೆಯುಲಿ ಚಿನ್ನದ ಪದಕವನ್ನು ಗೆದ್ದರು. ಈ ಮೂಲಕ ಭಾರತ ಮೂರನೇ ದಿನದಂದು ಒಟ್ಟು 2 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಳ್ಳುವುದರ ಮೂಲಕ ಭಾರತದ ಪದಕ ಸಂಖ್ಯೆ 6ಕ್ಕೆ ಏರಿಕೆ ಕಂಡಿದೆ.//////