Belagavi News In Kannada | News Belgaum

ಕುಸ್ತಿ ಕ್ರೀಡೆ ಬೆಳೆಸಲು ಅಗತ್ಯ ನೆರವು: ಶಾಸಕ ಅರವಿಂದ ಬೆಲ್ಲದ

ಧಾರವಾಡ: ಜಿಲ್ಲೆಯಲ್ಲಿ ಕುಸ್ತಿ ಕ್ರೀಡೆಯನ್ನು ಉಳಿಸಿ ಬೆಳೆಸಲು ಅಗತ್ಯವಾದಎಲ್ಲ ನೆರವನ್ನುಕಲ್ಪಿಸಲು ಬದ್ಧಎಂದು ಶಾಸಕ ಅರವಿಂದ ಬೆಲ್ಲದ ನುಡಿದರು.

ಕುಸ್ತಿ ತರಬೇತಿದಾರಬಿ.ಶಂಕರಪ್ಪಅವರ ಶಿಷ್ಯಂದಿರ ಬಳಗ ಮತ್ತು ಧಾರವಾq Àಜಿಲ್ಲಾ ಕುಸ್ತಿ ಸಂಘದ ಸಂಯುಕ್ತಆಶ್ರಯದಲ್ಲಿ ನಗರದಆಲೂರ ವೆಂಕಟರಾಯರ ಸಭಾಭವನದಲ್ಲಿ ಭಾನುವಾರ ನಡೆದಗುರುವಂದನಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕುಸ್ತಿ ತರಬೇತಿದಾರರಾದ ಬಿ.ಶಂಕರಪ್ಪಅವರು ಸಾಯಿ ಕೇಂದ್ರದಲ್ಲಿ ಹಲವು ಕುಸ್ತಿಪಟುಗಳಿಗೆ ತರಬೇತಿ ನೀಡಿದ್ದು, ಈ ಪೈಕಿ 83 ಮಂದಿ ರಾಷ್ಟ್ರಮಟ್ಟದಲ್ಲಿ, ಇಬ್ಬರುಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದಿದ್ದಾರೆ. ಕ್ರೀಡಾರತ್ನ, ಏಕಲವ್ಯ, ಕಿಶೋರ, ಕುಮಾರ, ಕೇಸರಿಯಂಥಗೌರವಕ್ಕೂ ಪಾತ್ರರಾಗಿರುವುದು ಶಂಕರಪ್ಪಅವರಿಗೆ ಸಂದ ನೈಜಗೌರವ. ಇಂx Àತರಬೇತುದಾರರನ್ನು ಗೌರವಿಸುತ್ತಿರುವುದು ಔಚಿತ್ಯಪೂರ್ಣಎಂದು ನುಡಿದರು.

ಸಾನ್ನಿಧ್ಯ ವಹಿಸಿದ್ದ ಮನಗುಂಡಿ ಗುರುಬಸವ ಮಹಾಮನೆಯ ಶ್ರೀ ಬಸವಾನಂದ ಸ್ವಾಮೀಜಿಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಕಲಿಸಿದ ಗುರುವಿಗೆಅಪಾರವಾದ ಭಕ್ತಿಯನ್ನುತೋರಿಸುವ ಈ ಗುರುವಂದನಾಕಾರ್ಯಕ್ರಮ ಅರ್ಥಪೂರ್ಣ ಹಾಗೂ ಅನುಕರಣೀಯ. ಜಿಲ್ಲೆಯ ಕುಸ್ತಿಪಟುಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿಕೀರ್ತಿ ಗಳಿಸುವಲ್ಲಿ ಬಿ.ಶಂಕರಪ್ಪಅವರ ಶ್ರಮ ಅಪಾರ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ಮಹಾನಗರದ ಮೇಯರ್ ವೀರೇಶ ಅಂಚಟಗೇರಿಯವರು ಬಿ.ಶಂಕ್ರಪ್ಪಅವರನ್ನು ಸನ್ಮಾನಿಸಿ, “ಜಿಲ್ಲೆಯ ಕುಸ್ತಿಪಟುಗಳ ಬಗ್ಗೆ ಶಂಕ್ರಪ್ಪ ಅವರಿಗೆ ಇರುವ ಕಾಳಜಿ ಅಪಾರ. ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಧಾರವಾಡ ಜಿಲ್ಲೆ ಹೆಸರು ಗಳಿಸಿದ್ದರ ಹಿಂದೆ ಶಂಕ್ರಪ್ಪಅವರ ಕೊಡುಗೆಇದೆ” ಎಂದರು. ಅಂತೆಯೇ ಪಿ.ಎಚ್.ನೀರಲಕೇರಿ ಹಾಗೂ ಅರವಿಂದ್ ಎಂ ದಳವಾಯಿ ಕೂಡಾ ಕುಸ್ತಿಗೆ ತಮ್ಮದೇಆದ ಕೊಡುಗೆ ನೀಡುತ್ತಿದ್ದಾರೆ ಎಂದು ಬಣ್ಣಿಸಿದರು.

ಹಲವು ಕುಸ್ತಿಪಟುಗಳನ್ನು ಮುಂಚೂಣಿಗೆ ತಂದ ಶಂಕ್ರಪ್ಪಅವರು ಸೇವೆಯಿಂದ ನಿವೃತ್ತಿ ಪಡೆದರೂ, ಜಿಲ್ಲೆಯ ಕುಸ್ತಿಪಟುಗಳಿಗೆ ಅಗತ್ಯ ಮಾರ್ಗದರ್ಶನ ಮುಂದುವರಿಸ ಬೇಕು ಎಂದು ಅವರುಕೋರಿದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎಂ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಹಳ ಶ್ರದ್ಧೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿದ ಶಂಕ್ರಪ್ಪಅವರ ನಿವೃತ್ತ ಬದುಕು ಸುಖಮಯವಾಗಲಿ ಎಂದು ಅವರು ಹಾರೈಸಿದರು.

ಸೇವೆಯಿಂದ ನಿವೃತ್ತರಾದ ಬಿ.ಶಂಕರಪ್ಪದಂಪತಿ, ನಿವೃತ್ತ ಕುಸ್ತಿ ತರಬೇತಿದಾರರಾದ ಕೆ.ಶ್ರೀನಿವಾಸಗೌಡ ಹಾಗೂ ಮಂಜುನಾಥ್ ಅವರನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ನಿಂಗರಾಜ ಹಡಪದ ಸ್ವಾಗತಿಸಿ, ಸದಾನಂದ ಅಮರಾಪುರ ವಂದಿಸಿದರು. ಜಿನ್ನಪ್ಪ ಕುಂದಗೋಳ ನಿರೂಪಿಸಿದರು.

ಕೆ.ಶ್ರೀನಿವಾಸ ಗೌಡ, ಶಿವಾನಂದ್ ಪಾಟೀಲ್, ಆರ್.ಆರ್.ಮಠಪತಿ, ಕಲಂದರ್ ಮುಲ್ಲಾ, ರಾಜೇಂದ್ರ ನಾಯಕ, ಪ್ರಕಾಶ ಸರಶೆಟ್ಟಿ, ಮಹಾವೀg Àಜಕನೂರ, ನಾಗನಗೌಡ ಪಾಟೀಲ, ರಾಜೇಸಾಬ ಬೇವಿನಗಿಡದ, ಕಲ್ಲಪ್ಪ, ಪಿಚೇಲಿ, ಮತ್ತಿತರರು ಉಪಸ್ಥಿತರಿದ್ದರು. ಕುಸ್ತಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು.//////