Belagavi News In Kannada | News Belgaum

ಅಂತರರಾಜ್ಯ ಸುಲಿಗೆ ಮತ್ತು ವಂಚಕರ ಇಬ್ಬರ ಬಂಧನ 22 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣ ವಶ

ಬೆಳಗಾವಿ : ಹುಕ್ಕೇರಿ:  ಹುಕ್ಕೇರಿ ಪೊಲೀಸರಿಂದಾ ಅಂತರರಾಜ್ಯ ಸುಲಿಗೆ ಮತ್ತು ವಂಚಕರ ಇಬ್ಬರ ಬಂಧನ 22 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣ ವಶ

ಕಳೆದ ತಿಂಗಳು ಹುಕ್ಕೇರಿ ಪಟ್ಟಣದ ಕೋರ್ಟ ಸರ್ಕಲ್ ಹತ್ತಿರ ಒಬ್ಬ ಮಹಿಳೆಗೆ ನಾವು ಪೊಲೀಸರು ಎಂದು ನಂಬಿಸಿ ಅವಳು ಸರ ಕೊಡದೇ ಇದ್ದಾಗ ಆಕೆಯ ಕತ್ತಿನಲ್ಲಿದ್ದ ಬಂಗಾರದ ಮಂಗಳಸೂತ್ರವನ್ನು ಕಿತ್ತುಕೊಂಡು ಹೋಗಿದ್ದರು. ಈ ಬಗ್ಗೆ ಹುಕ್ಕೇರಿ ಪೊಲೀಸ್ ಠಾಣಾ ಅಪರಾಧ ಸಂಖ್ಯೆ: 136/2022, ಕಲಂ: 392 ಐಪಿಸಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಅದರಂತೆ ಗೋಕಾಕ, ರಾಯಬಾಗ, ಬೆಳಗಾವಿ ನಗರದಲ್ಲಿ ವಿವಿಧ ಜ್ಯುವೇಲರಿ ಶಾಪ್‌ಗಳಿಗೆ ಗ್ರಾಹಕರ ಸೋಗಿನಲ್ಲಿ ಹೋಗಿ ಅವರಿಗೆ ವಂಚಿಸಿದ್ದರಿಂದ ಈ ಬಗ್ಗೆ ಅಲ್ಲಿಯೂ ಸಹ ವಂಚನೆ ಪ್ರಕರಣಗಳು ದಾಖಲಾಗಿದ್ದವು. ಇವೆಲ್ಲವುಗಳನ್ನು ಗಂಭೀರವಾಗಿ ಪರಿಗಣಿಸಿದ ಎಸ್.ಪಿ ಬೆಳಗಾವಿ ರವರು ಗೋಕಾಕ ಡಿ.ಎಸ್.ಪಿ ಶ್ರೀ ಮನೋಜಕುಮಾರ್ ನಾಯ್ಕ ಮತ್ತು ಹುಕ್ಕೇರಿ ಪೊಲೀಸ್ ಇನ್ಸ್ಪೆಕ್ಟರ್ ಎಂ.ಎಂ ತಹಶೀಲ್ದಾರ ರವರ ನೇತೃತ್ವದಲ್ಲಿ ಹುಕ್ಕೇರಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎಮ್. ಎಮ್ ತಹಶೀಲ್ದಾರ. ಶ್ರೀಮತಿ ಎಲ್. ಎಲ್. ಪತ್ತೆನ್ನವರ ಪಿ.ಎಸ್.ಐ(ಅ.ವಿ). ಶ್ರೀ ಎ.ಎಸ್.ಸನದಿ ಹಾಗೂ ಎ.ಎಸ್.ಐ ಹಾಗೂ ಅಪರಾಧ ವಿಭಾಗದ ಸಿಬ್ಬಂದಿ ಜನರಾದ ಶ್ರೀ ಸಿ.ಡಿ ಪಾಟೀಲ, ಮಂಜುನಾಥ.ಎಸ್.ಕಟ್ಟೂರ, ಶ್ರೀ ಜಿ.ಎಸ್ ಕಾಂಬಳೆ, ಶ್ರೀ ಎಸ್.ಆರ್ ರಾಮದುರ್ಗ, ಶ್ರೀ ಎ.ಎಲ್ ನಾಯಿಕ. ಶ್ರೀ ಯು.ವಾಯ್ ಅರಭಾಂವಿ, ಶ್ರೀ ಆರ್.ಎಸ್ ಢಂಗ, ಶ್ರೀ ಬಿ.ವಿ ನಾವಿ, ಶ್ರೀ ಎಮ್.ಕೆ ಅತ್ತಾರ್ ಎಚ್ ಜಿ ೦೬೯೪ ರಾವಸಾಹೇಬ ಬೊಮ್ಮನಾಳ ಮತ್ತು ಬೆಳಗಾವಿ ಜಿಲ್ಲಾ ಕಛೇರಿಯ ಟೆಕ್ನಿಕಲ್ ಸೆಲ್‌ನ ಸಿಬ್ಬಂದಿ ಜನರಾದ ಶ್ರೀ ಸಚೀನ ಪಾಟೀಲ, ಶ್ರೀ ವಿನೋದ ಠಕ್ಕನ್ನವರ ರವರನ್ನು ಒಳಗೊಂಡ ತಂಡವನ್ನು ರಚಿಸಿದ್ದರು. ಸದರಿ ತಂಡ ಇಬ್ಬರೂ ಆರೋಪಿತರನ್ನು ಬಂಧಿಸುವಲ್ಲಿ ಸಫಲರಾಗಿರುತ್ತಾರೆ.

ಬಂಧಿತ ಆರೋಫಿತರು ಕರ್ನಾಟಕದಲ್ಲಿ ಅಷ್ಟೆ ಅಲ್ಲದೆ ಮಹಾರಾಷ್ಟ್ರದ ವೆಂಗುರ್ಲಾ, ಕೊಲ್ಲಾಪುರ ನಗರ, ಸೊಲ್ಲಾಪುರ ಹಾಗೂ ಇಚಲಕರಂಜಿಯಲ್ಲಿ ವಿವಿಧ ಜ್ಯುವೇಲರಿ ಅಂಗಡಿಗಳಿಗೆ ಹೋಗಿ ಗ್ರಾಹಕರಂತೆ ನಟಿಸಿ ಅಂಗಡಿಯ ಮಾಲೀಕರಿಗೆ ನಂಬಿಕೆ ಬರುವಂತೆ ಮಾಡಿ, ಬಂಗಾರದ ಆಭರಣಗಳನ್ನು ಖರೀದಿಸುತ್ತಿದ್ದರು. ಖರೀದಿ ಮಾಡಿದ ನಂತರ ಪೋನ್‌ ಅಥವಾ ಗೋಗಲ್ ಪೇ ಮಾಡಿ ಹಣ ಸಂದಾಯ ಮಾಡುತ್ತೇನೆ ಅಂತಾ ಹೇಳಿ ವಂಚನೆ ಮಾಡುತ್ತಿದ್ದನು. ಈ ಸಂಧರ್ಭದಲ್ಲಿ ತಮ್ಮ ಗುರುತಿನ ಚೀಟಿ, ಆಧಾರ ಕಾರ್ಡ ಹಾಗೂ ಪೋನ್ ನಂಬರ್‌ಗಳನ್ನು ನೀಡಿ ಮಾಲೀಕರಿಗೆ ನಂಬಿಕೆ ಬರುವಂತೆ ನಟಿಸುತ್ತಿದ್ದನು. ಹುಕ್ಕೇರಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿ, ಬಂಧಿತರಿಂದ ಸುಮಾರು 8 ಪ್ರಕರಣಗಳನ್ನು ಪತ್ತೆ ಹಚ್ಚಿ ಈ ಎಲ್ಲ ಪ್ರಕರಣಗಳಲ್ಲಿ ಒಟ್ಟು 22,73,400/-ರೂ ಕಿಮ್ಮತ್ತಿನ 421 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ. ಮತ್ತು ಆರೋಪಿತರು ಕೃತ್ಯಕ್ಕೆ ಬಳಸಿದ 35,000/ ರೂ ಕಿಮ್ಮತ್ತಿನ ಒಂದು ಮೋಟಾರ್ ಸೈಕಲ್‌ನ್ನು ಜಪ್ತು ಮಾಡಿರುತ್ತಾರೆ. ಈಗಾಗಲೇ ಬಂಧಿತ ಒಬ್ಬ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ಈ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರ್‌ಪಡಿಸಲಾಗುವುದು.

ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾದ ಗೋಕಾಕ ಡಿ.ಎಸ್.ಪಿ ಶ್ರೀ ಮನೋಜ್‌ ಕುಮಾರ ನಾಯ್ಕ ಮತ್ತು ಹುಕ್ಕೇರಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎಮ್. ಎಮ್ ತಹಶೀಲ್ದಾರ ಹಾಗೂ ಅವರ ತಂಡದ ಕಾರ್ಯವನ್ನು ಬೆಳಗಾವಿ ಜಿಲ್ಲೆಯ ಎಸ್.ಪಿ ರವರು ಶ್ಲಾಘಿಸಿರುತ್ತಾರೆ.