Belagavi News In Kannada | News Belgaum

ಖ್ಯಾತ ಹಾಸ್ಯ ನಟ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ

ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಟ ಟೆನ್ನಿಸ್ ಕೃಷ್ಣ ಅವರು ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ನಗರದ ಖಾಸಗಿ ಹೋಟೆಲ್ ನಲ್ಲಿ ಸೇರ್ಪಡೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿದ ಆಪ್ ರಾಜ್ಯಾಧ್ಯಕ್ಷ  ಇಷ್ಟು ದಿನ ರಾಜ್ಯದಲ್ಲಿ ರಾಜಕೀಯ ಪರ್ಯಾಯ ಇರಲಿಲ್ಲ.

ರಾಷ್ಟ್ರದ ಜನತೆ ಮುಂದೆ ಸ್ಪಷ್ಟವಾದ ಆಯ್ಕೆ ಇದೆ. ರಾಜ್ಯದಲ್ಲಿ 40% ಭ್ರಷ್ಟಾಚಾರ ಇದೆ, ಪಂಜಾಬ್-ದೆಹಲಿಯಲ್ಲಿ 0% ಸರ್ಕಾರ ಇದೆ. ಆಪ್ ಉಚಿತವಾಗಿ ಶಿಕ್ಷಣ, ಆರೋಗ್ಯ, ಸಾರಿಗೆ ಎಲ್ಲವೂ ಜನರಿಗೆ ಲಭ್ಯ ಇದೆ. ಅದೇ ರೀತಿ ರಾಜ್ಯದಲ್ಲೂ ಈ ಆಡಳಿತ ಬರಬೇಕು. ಅದಕ್ಕೆ ಟೆನ್ನಿಸ್ ಕೃಷ್ಣ ಅವರೂ, ಅವರ ಮಗನೂ ಕೈಜೋಡಿಸಿದ್ದಾರೆ ಎಂದು ಹೇಳಿದ್ದಾರೆ.////