Belagavi News In Kannada | News Belgaum

ಕಾಶ್ಮೀರ ಪೋಲೀಸರ ಭರ್ಜರಿ ಬೇಟೆ: ಕೋಟ್ಯಂತರ ರೂ. ಪತ್ತೆ, ಮೌಲ್ಯದ ಮಾದಕ ವಸ್ತು ವಶಕ್ಕೆ

ಶ್ರೀನಗರ:  ಕೋಟ್ಯಂತರ ಮೌಲ್ಯದ ಮಾದಕವಸ್ತುಗಳ ಜಾಲವನ್ನು ಜಮ್ಮು ಕಾಶ್ಮೀರ ಪೋಲೀಸರು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಕಾಶ್ಮೀರದ ಉಧಮ್‌ಪುರದಲ್ಲಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದ್ದು ಪೊಲೀಸರು ಮಾದಕದ್ರವ್ಯ ವ್ಯಾಪಾರಿಯಿಂದ 1.91 ಕೋಟಿ ರೂ. ಅಲ್ಲದೆ, 250 ಗ್ರಾಂ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ.

ಗುರುವಾರ ರಾತ್ರಿ 10.30ರ ಸುಮಾರಿಗೆ ಉಧಂಪುರ ಪೊಲೀಸ್ ಠಾಣೆಯ ಗಸ್ತು ತಿರುಗುತ್ತಿದ್ದ ವ್ಯಕ್ತಿಯೊಬ್ಬರು ಗೋಳೆ ಮೇಳದ ಪೆಟ್ರೋಲ್ ಪಂಪ್ ಬಳಿ ಇಬ್ಬರು ಅನುಮಾನಾಸ್ಪದ ರೀತಿಯಲ್ಲಿ ಚಲಿಸುತ್ತಿರುವುದನ್ನು ಗಮನಿಸಿದ್ದಾರೆ.ಪೊಲೀಸರನ್ನು ಗಮನಿಸಿದ ಇಬ್ಬರೂ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಮುಖ್ಯರಸ್ತೆಯತ್ತ ಓಡುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಸಾಗಿಸಲಾದರೂ ಆತ ಮೃತಪಟ್ಟಿದ್ದಾನೆ.

ಮೃತ ಮಾದಕ ದ್ರವ್ಯ ಕಳ್ಳಸಾಗಣೆದಾರನನ್ನು ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಪ್ರದಾ ತಂಗ್‌ಧರ್‌ನ ಮುಖ್ತಿಯಾರ್ ಅಹ್ಮದ್ ಎಂದು ಗುರುತಿಸಲಾಗಿದೆ. ಪಂಜಾಬ್‌ನ ತರನ್ ತರಣ್ ಪ್ರದೇಶದ ಪಾಖೋಪುರ್ ಗ್ರಾಮದ ಜಗತಾರ್ ಸಿಂಗ್ ಎಂದು ಗುರುತಿಸಲಾದ ಆತನ ಇನ್ನೊಬ್ಬ ಸಹಚರನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಾಹನದ ಸಂಪೂರ್ಣ ತಪಾಸಣೆಯ ನಂತರ 250 ಗ್ರಾಂ ಹೆರಾಯಿನ್ ಮತ್ತು ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ./////