Belagavi News In Kannada | News Belgaum

ಟಾಕಳೆರನ್ನು ಶೀಘ್ರವೇ ಬಂಧಿಸಿ: ನವ್ಯಶ್ರೀ

ಬೆಳಗಾವಿ: ಟಾಕಳೆ ಸಲ್ಲಿಸಿದ ನಿರೀಕ್ಷಣಾ ಜಾಮೀನು ತಿರಸ್ಕಾರವಾಗಿದ್ದು ತನಗೆ ಮತ್ತಷ್ಟು ಬಲ ಬಂದಂತಾಗಿದೆ.   ಪೊಲೀಸರು  ಶೀಘ್ರವೇ ಅವರನ್ನು ಬಂಧಿಸಿ ನ್ಯಾಯ ಕೋಡಸಬೇಕೆಂದು  ಅತ್ಯಾಚಾರದ ಆರೋಪ ಯುವತಿ ನವ್ಯಶ್ರೀ ಹೇಳಿಕೆ.

 

ನಗರದಲ್ಲಿ ಶುಕ್ರವಾರ  ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ರಾಜಕುಮಾರ ಟಾಕಳೆ ಅವರು ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.  ತನ್ನ ಹೋರಾಟ ಮತ್ತಷ್ಟು ಬಲ ಶಕ್ತಿ ಬಂದಿದೆ.   ಎಪಿಎಂಸಿ ಪೊಲೀಸ್‌ ಬಂಧಿಸಿ, ಕೂಲಂಕುಷವಾಗಿ ತನಿಖೆ ನಡೆಸಲಿ ಎಂದರು.

ನನ್ನ ಮೇಲೆ ರಾಜಕುಮಾರ ಟಾಕಳೆ ಹನಿಟ್ರ್ಯಾಪ್ ದೂರು ದಾಖಲಿಸಿದ್ದಾರೆ. ಆದರೆ ಅವರು ಮಹಿಳಾ ಪೊಲೀಸ್ ಠಾಣೆಯಲ್ಲಿ ಬರೆದುಕೊಟ್ಟಿದ್ದು ಬೇರೆ‌ ಇದೆ. ನಮ್ಮ ಕಾನೂನು ತಗಾದೆ ಮುಂದುವರೆಸುವುದಿಲ್ಲ ಎಂದು ಅವರ ವಿಚಾರಕ್ಕೆ ‌ಹೋಗುವುದಿಲ್ಲ ಎಂದು ಬರೆದುಕೊಟ್ಟಿದ್ದಾರೆ ಎಂದರು.

ಖಾಸಗಿ ವಾಹಿನಿ ಬಿಗ್‌ ಬಾಸ್‌  ಶೋ ಗೆ ಹೋಗುವುದರ  ಚರ್ಚೆ ನಡೆದಿದೆ. ಹೋಗುವು ಸಕಲ ಸಿದ್ದತೆ ಮಾಡಿಕೊಂಡಿರುವುದಾಗಿ ನವಶ್ರೀ ಹೇಳಿದರು.
ನವ್ಯ ಫೌಂಡೇಶನ್ ಅಧಿಕೃತವಾಗಿ ನೋಂದಣಿಯಾಗಿದೆ.  ಫೌಂಡೇಶನ್ ಗೆ ನಾನೊಬ್ಬಳೆ ಅಲ್ಲ. ಬಹಳಷ್ಟು ಜನ ಸಹಕಾರ ನೀಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.////