1,200 ವರ್ಷಗಳ ಇತಿಹಾಸಯುಳ್ಳ ವಾಲ್ಮೀಕಿ ದೇಗುಲ ಹಿಂದೂಗಳ ಪಾಲು: ದೀರ್ಘ ಕಾಲದ ಹೋರಾಟಕ್ಕೆ ಜಯ

ಲಾಹೋರ್: 1,200 ವರ್ಷಗಳ ಇತಿಹಾಸಯುಳ್ಳ ವಾಲ್ಮೀಕಿ ದೇಗುಲದ ಜಮೀನು ಕೊನೆಗೂ ಹಿಂದೂಗಳಿಗೆ ಹಸ್ತಾಂತರಗೊಳಿಸಲಾಗಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಾಜಧಾನಿ ಲಾಹೋರ್ನಲ್ಲಿ ಇರುವ ದೇವಸ್ಥಾನವು ಕೊನೆಗೂ ಭಕ್ತರಿಗೆ ಸಧ್ಯ ಮುಕ್ತವಾಗಿದೆ.
ಅದನ್ನು ಸ್ಥಳೀಯ ಸರ್ಕಾರದ ಸಂಸ್ಥೆಯೊಂದು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ಹಸ್ತಾಂತರಿಸಿದೆ. ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ನಲ್ಲಿ ದೀರ್ಘಕಾಲದಿಂದ ಕಾನೂನು ಹೋರಾಟ ನಡೆಯುತ್ತಿತ್ತು.
ಸರ್ಕಾರಿ ಆಸ್ತಿ ನಿರ್ವಹಣಾ ಮಂಡಳಿಯ ವಕ್ತಾರ ಅಮೀರ್ ಹಶ್ಮಿ ಬುಧವಾರ ದೇಗುಲವನ್ನು ಉದ್ಘಾಟಿಸಿದರು. 100 ಹಿಂದೂಗಳು, ಸಿಖ್ ಸಮುದಾಯದ ಕೆಲವರು, ಮುಸ್ಲಿಮರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ದೇಗುಲವನ್ನು ಮೂಲ ಯೋಜನೆಯಂತೆ ಪೂರ್ಣ ಪ್ರಮಾಣದಲ್ಲಿ ನವೀಕರಿಸಲಾಗುತ್ತದೆ ಎಂದು ಹಶ್ಮಿ ಹೇಳಿದರು.//////