Belagavi News In Kannada | News Belgaum

ಅಕ್ರಮ ತಂಬಾಕು ಮಾರಾಟ: ದಾಳಿ ನಡೆಸಿ ದಂಡ ವಿಧಿಸಿದ ಅಧಿಕಾರಿಗಳು

ಬೆಳಗಾವಿ : ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆಯ ಅಧಿಕಾರಿಗಳು ಹುಕ್ಕೇರಿ ತಾಲೂಕಿನ ನೀಡಸೋಸಿ ಗ್ರಾಮದಲ್ಲಿ ಕೋಟ್ಪಾ -2003 ಕಾಯ್ದೆಯಡಿಯಲ್ಲಿ ತಂಬಾಕು ಮಾರಾಟ ಮಾಡುವ ಅಂಗಡಿಯ ಮಾಲಿಕರ ಮೇಲೆ ದಾಳಿ ನಡೆಸಿ 46 ಪ್ರಕರಣಗಳನ್ನು ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ.

ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಡಾ. ಶ್ವೇತಾ ಪಾಟೀಲ ಜಿಲ್ಲಾ ಸಲಹೆಗಾರರು, ಕವಿತಾ ರಾಜನ್ನವರ ಸಮಾಜ ಕಾರ್ಯಕರ್ತೆ, ಪೊಲೀಸ್ ಇಲಾಖೆಯ ಪೊಲೀಸ ಸಿಬ್ಬಂದಿಗಳು ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿಗಳು ಈನಾಪೂರ ಪಾಲ್ಗೊಂಡಿದ್ದರು.//////